ಸಿದ್ದು ಸಂಪುಟ ಖಾತೆ ಹಂಚಿಕೆ : ಗೃಹ ಸಚಿವರು ಯಾರು..! ಡಿಕೆಶಿಗೆ ಯಾವ ಖಾತೆ..?

ಇಂದು ರಾಜಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸದ್ಯ ಅಸ್ತಿತ್ವವಿರುವ 10 ಮಂದಿಯ ಸಚಿವ ಸಂಪುಟಕ್ಕೆ 24 ಸಚಿವರು ಸೇರ್ಪಡೆಗೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪರಿಪೂರ್ಣವಾಗಿ ರಚನೆಯಾಗಿದೆ. ನೂತನ ಸಚಿವರ ಪ್ರಮಾಣ ವಚನ ಬೆನ್ನಲ್ಲೇ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಾಗಿದ್ದು, ಈ ಪಟ್ಟಿಯನ್ನು ಇಂದು ಸಂಜೆ ಮುಖ್ಯಮಂತ್ರಿ ರಾಜಭವನಕ್ಕೆ ಕಳಿಸಿಕೊಡಲಿದ್ದಾರೆ.

Written by - Krishna N K | Last Updated : May 27, 2023, 03:22 PM IST
  • ನೂತನ 34 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
  • ನೂತನ ಸಚಿವರ ಪ್ರಮಾಣ ವಚನ ಬೆನ್ನಲ್ಲೇ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಾಗಿದೆ.
  • ಈ ಪಟ್ಟಿಯನ್ನು ಇಂದು ಸಂಜೆ ಮುಖ್ಯಮಂತ್ರಿ ರಾಜಭವನಕ್ಕೆ ಕಳಿಸಿಕೊಡಲಿದ್ದಾರೆ.
ಸಿದ್ದು ಸಂಪುಟ ಖಾತೆ ಹಂಚಿಕೆ : ಗೃಹ ಸಚಿವರು ಯಾರು..! ಡಿಕೆಶಿಗೆ ಯಾವ ಖಾತೆ..? title=

ಬೆಂಗಳೂರು : ಇಂದು ರಾಜಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸದ್ಯ ಅಸ್ತಿತ್ವವಿರುವ 10 ಮಂದಿಯ ಸಚಿವ ಸಂಪುಟಕ್ಕೆ 24 ಸಚಿವರು ಸೇರ್ಪಡೆಗೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪರಿಪೂರ್ಣವಾಗಿ ರಚನೆಯಾಗಿದೆ. ನೂತನ ಸಚಿವರ ಪ್ರಮಾಣ ವಚನ ಬೆನ್ನಲ್ಲೇ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಾಗಿದ್ದು, ಈ ಪಟ್ಟಿಯನ್ನು ಇಂದು ಸಂಜೆ ಮುಖ್ಯಮಂತ್ರಿ ರಾಜಭವನಕ್ಕೆ ಕಳಿಸಿಕೊಡಲಿದ್ದಾರೆ.

ಮಹತ್ವದ ಖಾತೆಗಳಲ್ಲಿ ಒಂದಾದ ಗೃಹ ಖಾತೆಯನ್ನು ಡಾ. ಜಿ ಪರಮೇಶ್ವರ್ ಅವರಿಗೆ ನೀಡಲಾಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ ಖಾತೆ ನೀಡಲಾಗಿದೆ. ಎಂ.ಬಿ. ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ, ಹೆಚ್.​ಕೆ ಪಾಟೀಲ್ ಅವರಿಗೆ ಕಾನೂನು ಮತ್ತು ಸಂಸದೀಯ ಖಾತೆ ಹಂಚಿಕೆ ಮಾಡಲಾಗಿದೆ.

ನೂತನ ಸಚಿವರು ಮತ್ತು ಖಾತೆಗಳ ವಿವರ

  1. ಮುಖ್ಯಮಂತ್ರಿ ಸಿದ್ದರಾಮಯ್ಯ - ಹಣಕಾಸು, ಆಡಳಿತ ಸುಧಾರಣೆ, ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳು
  2. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ - ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ.. ಇತ್ಯಾದಿ)
  3. ಡಾ.ಜಿ ಪರಮೇಶ್ವರ - ಗೃಹ ಖಾತೆ
  4. ಎಂ.ಬಿ ಪಾಟೀಲ್ - ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  5. ಕೆ.ಹೆಚ್ ಮುನಿಯಪ್ಪ - ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
  6. ಕೆ.ಜೆ ಜಾರ್ಜ್ - ಇಂಧನ
  7. ಜಮೀರ್ ಅಹ್ಮದ್ - ವಸತಿ ಮತ್ತು ವಕ್ಫ್ರ
  8. ರಾಮಲಿಂಗಾರೆಡ್ಡಿ - ಸಾರಿಗೆ
  9. ಸತೀಶ ಜಾರಕಿಹೊಳಿ - ಲೋಕೋಪಯೋಗಿ 
  10. ಪ್ರಿಯಾಂಕ್ ಖರ್ಗೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಐಟಿ ಬಿಟಿ
  11. ಹೆಚ್.​ಕೆ ಪಾಟೀಲ್ - ಕಾನೂನು ಮತ್ತು ಸಂಸದೀಯ ವ್ಯವಹಾರ
  12. ಕೃಷ್ಣ ಭೈರೇಗೌಡ - ಕಂದಾಯ
  13. ಚೆಲುವರಾಯಸ್ವಾಮಿ - ಕೃಷಿ
  14. ಕೆ. ವೆಂಕಟೇಶ್ - ಪಶುಸಂಗೋಪನೆ ಮತ್ತು ರೇಷ್ಮೆ
  15. ಡಾ. ಮಹದೇವಪ್ಪ - ಸಮಾಜ ಕಲ್ಯಾಣ
  16. ಈಶ್ವರ ಖಂಡ್ರೆ - ಅರಣ್ಯ
  17. ಕೆ.ಎನ್ ರಾಜಣ್ಣ - ಸಹಕಾರ
  18. ದಿನೇಶ್ ಗುಂಡೂರಾವ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  19. ಶರಣ ಬಸಪ್ಪ ದರ್ಶನಾಪೂರ - ಸಣ್ಣ ಕೈಗಾರಿಕೆ
  20. ಶಿವಾನಂದ ಪಾಟೀಲ್ - ಜವಳಿ ಮತ್ತು ಸಕ್ಕರೆ
  21. ಆರ್​ಬಿ ತಿಮ್ಮಾಪುರ - ಅಬಕಾರಿ ಮತ್ತು ಮುಜರಾಯಿ
  22. ಎಸ್.​ಎಸ್ ಮಲ್ಲಿಕಾರ್ಜುನ - ಗಣಿಗಾರಿಕೆ ಮತ್ತು ತೋಟಗಾರಿಕೆ
  23. ಶಿವರಾಜ ತಂಗಡಗಿ - ಹಿಂದುಳಿದ ವರ್ಗಗಳ ಕಲ್ಯಾಣ
  24. ಡಾ. ಶರಣ ಪ್ರಕಾಶ್ ಪಾಟೀಲ್ - ಉನ್ನತ ಶಿಕ್ಷಣ
  25. ಮಂಕಾಳೆ ವೈದ್ಯ - ಮೀನುಗಾರಿಕೆ
  26. ಲಕ್ಷ್ಮಿ ಹೆಬ್ಬಾಳ್ಕರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
  27. ರಹೀಂ ಖಾನ್ - ಪೌರಾಡಳಿತ
  28. ಡಿ ಸುಧಾಕರ್ - ಯೋಜನೆ ಮತ್ತು ಸಾಂಖಿಕ ಇಲಾಖೆ
  29. ಸಂತೋಷ್ ಲಾಡ್ - ಕಾರ್ಮಿಕ
  30. ಭೋಸರಾಜ್ - ಸಣ್ಣ ನೀರಾವರಿ
  31. ಭೈರತಿ ಸುರೇಶ್ - ನಗರಾಭಿವೃದ್ಧಿ
  32. ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  33. ಡಾ. ಎಂಪಿ ಸುಧಾಕರ್ - ವೈದ್ಯಕೀಯ ಶಿಕ್ಷಣ
  34. ಬಿ. ನಾಗೇಂದ್ರ - ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News