/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Leopard: ಜನರಿಗೆ ಇನ್ನಿಲ್ಲದ ಕಾಟ ಕೊಡುತ್ತಿದ್ದ ಚಿರತೆ ಬೋನಿಗೆ ಬಿದ್ದಿದೆ. ತುಮಕೂರು ನಗರಕ್ಕೆ ಹೊಂದಿ ಕೊಂಡಂತಿರುವ ಕುಂದೂರು ಬಳಿ ಮುಂಜಾನೆ ನಾಲ್ಕು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. 

ಕೆಲದಿನಗಳಿಂದ  ಗ್ರಾಮಕ್ಕೆ ಬರುತ್ತಿದ್ದ ಚಿರತೆ  ಜಾನುವಾರು, ಕುರಿ, ಕೋಳಿ, ಮೇಕೆಗಳ ಮೇಲೆ ದಾಳಿ ನಡೆಸಿ ಪಾರಾರಿಯಾಗುತ್ತಿತ್ತು‌. ಇದರಿಂದ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಬೋನು ಇಡುವಂತೆ ಒತ್ತಾಯಿಸಿದರು. ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಬಂಧಿಯಾಗಿದೆ. 

ಇದನ್ನೂ ಓದಿ- ಚಾಮರಾಜನಗರ: 70-80 ಫೈಲ್ ಪೆಂಡಿಂಗ್ ಇಟ್ಟು 2.5 ಲಕ್ಷ ಲಂಚಕ್ಕೆ ಬೇಡಿಕೆ- ಅಧಿಕಾರಿಗಳು ಲೋಕಾ ಬಲೆಗೆ!!

ಚಿರತೆ ಬೋನಿಗೆ ಬಿದ್ದ ವಿಷಯ ಗೊತ್ತಾಗುತಿದ್ದಂತೆ ಕಿರಾತಕ ಚಿರತೆಯನ್ನು ನೋಡಲು ಗ್ರಾಮಸ್ಥರು ನಾ ಮುಂದು ತಾ ಮುಂದು ಅಂತ ಸ್ಥಳದಲ್ಲಿ ಜಮಾಯಿಸಿದ್ದಾರೆ. ಸೆರೆ ಸಿಕ್ಕ ಚಿರತೆ ದೇವರಾಯನ ದುರ್ಗ ಅರಣ್ಯದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. 

ಇದನ್ನೂ ಓದಿ- 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ : ಈ ವರ್ಷ ಇಷ್ಟು ದಿನ ಶಾಲೆಗೆ ರಜೆ

ಚಿರತೆಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ರವಾನಿಸಲು ತುಮಕೂರು ಜಿಲ್ಲಾ ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ದೈತ್ಯಗಾತ್ರದ ಚಿರತೆ ಸರಿಯಾಗಿರೋದ್ರಿಂದ ಸ್ಥಳೀಯರಲ್ಲಿ ಮೂಡಿದ್ದ ಆತಂಕ ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Leopard caught in Tumkur Kundur: Locals heave a sigh of relief
News Source: 
Home Title: 

ತುಮಕೂರಿನ ಕುಂದೂರಿನಲ್ಲಿ ಬೋನಿಗೆ ಬಿದ್ದ ಚಿರತೆ

ತುಮಕೂರಿನ ಕುಂದೂರಿನಲ್ಲಿ ಬೋನಿಗೆ ಬಿದ್ದ ಚಿರತೆ
Yes
Is Blog?: 
No
Tags: 
Facebook Instant Article: 
Yes
Highlights: 

ಬೋನಿಗೆ ಬಿದ್ದ ಜನರ ನಿದ್ದೆಗೆಡಿಸಿದ್ದ ಚಿರತೆ 

ತುಮಕೂರಿನ ಕುಂದೂರಿನಲ್ಲಿ  ಚಿರತೆ ಸೆರೆ 

ಬೋನಿಗೆ ಬಿದ್ದ ಚಿರತೆ‌ ನೋಡಲು ಮುಗಿ‌ ಬಿದ್ದ ಸ್ಥಳೀಯರು

Mobile Title: 
ತುಮಕೂರಿನ ಕುಂದೂರಿನಲ್ಲಿ ಬೋನಿಗೆ ಬಿದ್ದ ಚಿರತೆ
Yashaswini V
Publish Later: 
No
Publish At: 
Thursday, April 6, 2023 - 10:36
Created By: 
Yashaswini V
Updated By: 
Yashaswini V
Published By: 
Yashaswini V
Request Count: 
2
Is Breaking News: 
No