59ನೇ ವಸಂತಕ್ಕೆ ಕಾಲಿಟ್ಟ ಕುಮಾರಣ್ಣ

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಟ್ಟು ಹಬ್ಬದ ಸಂಭ್ರಮ.  

Last Updated : Dec 16, 2017, 08:55 AM IST
  • ಜೆ.ಪಿ.ನಗರದ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಎಚ್ಡಿಕೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
  • ಕುಮಾರಣ್ಣ ತಮ್ಮ ಜನ್ಮದಿನದ ಅಂಗವಾಗಿ ಡಿ. 16 ರಂದು ಜನಿಸಿದ ಮಕ್ಕಳಿಗೆ ವಿಶೇಷ ಬಾಂಡ್ ಸೌಲಭ್ಯ.
59ನೇ ವಸಂತಕ್ಕೆ ಕಾಲಿಟ್ಟ ಕುಮಾರಣ್ಣ title=

ಬೆಂಗಳೂರು:  ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಟ್ಟ ಕುಮಾರಣ್ಣ, ನೆಚ್ಚಿನ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು.

ಜೆ.ಪಿ.ನಗರದ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಎಚ್ಡಿಕೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದ ನೂರಾರು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಶುಭಾಶಯ ಕೋರಿದರು. 

ಎಚ್ಡಿಕೆ ಮಗ ಹಾಗೂ ನಾಯಕ ನಟ ನಿಕಿಲ್ ಗೌಡ, ಜೆಡಿಎಸ್ ನ ಎಲ್ಲಾ ಶಾಸಕರು ಹಾಗೂ ಪರಿಷತ್ ಸದಸ್ಯರು ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕುಮಾರಣ್ಣ ತಮ್ಮ ಜನ್ಮದಿನದ ಅಂಗವಾಗಿ ಡಿ. 16 ರಂದು ಜನಿಸಿದ ಮಕ್ಕಳಿಗೆ ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ತಲಾ 5000 ರೂ.ಗಳ ವಿಶೇಷ ಬಾಂಡ್ ಸೌಲಭ್ಯವನ್ನು ಒದಗಿಸಲು ಮುಂದಾಗಿದ್ದಾರೆ. ಇದೊಂದು ವಿಮಾ ಯೋಜನೆಯಾಗಿದ್ದು, ಈ ಯೋಜನೆಗೆ 'ಕುಮಾರಣ್ಣ ಬಾಂಡ್' ಎಂದು ಹೆಸರಿಡಲಾಗಿದೆ. 

Trending News