ಖ್ಯಾತ ನಟಿಯ ಮನೆಯಲ್ಲಿ ಕಳ್ಳತನ..! ಕೆಲಸದಾಕೆಯ ಬಂಧನ, ಕಳ್ಳತನವಾದ ಹಣವೇಷ್ಟು ಗೊತ್ತೆ..?

Athulya Ravi : ನಟಿ ಅತುಲ್ಯ ರವಿ ತನ್ನ ತಾಯಿ ವಿಜಯಲಕ್ಷ್ಮಿಯೊಂದಿಗೆ ಕೊಯಮತ್ತೂರಿನ ವಡವಳ್ಳಿ ಮಾರುತಮ್ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಈ ನಾಯಕಿಯ ಮನೆಯಲ್ಲಿ ಕಳ್ಳತನ ನಡೆದಿದೆ ಎಂಬ ಮಾಹಿತಿ ಇದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jul 4, 2024, 05:38 PM IST
    • ಅತುಲ್ಯ ರವಿ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ನಟಿ.
    • ಹಲವು ಸಿನಿಮಾಗಳಲ್ಲಿ ನಟಿಸಿ ಉತ್ತಮ ಮನ್ನಣೆ ಗಳಿಸಿದ್ದಾರೆ.
    • ಸಧ್ಯ ಅತುಲ್ಯ ಮನೆಯಲ್ಲಿ ಕಳ್ಳತನವಾಗಿದ್ದು, ತನಿಖೆ ನಡೆಯುತ್ತಿದೆ.
ಖ್ಯಾತ ನಟಿಯ ಮನೆಯಲ್ಲಿ ಕಳ್ಳತನ..! ಕೆಲಸದಾಕೆಯ ಬಂಧನ, ಕಳ್ಳತನವಾದ ಹಣವೇಷ್ಟು ಗೊತ್ತೆ..? title=
Athulya Ravi

Athulya Ravi house robbed : ಅತುಲ್ಯ ರವಿ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ನಟಿ. ʼಮೀಟರ್ʼ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದ ಈ ಚೆಲುವೆಗೆ ಸಧ್ಯ ಯಾವುದೇ ಆಫರ್‌ಗಳು ಬರುತ್ತಿಲ್ಲ. 2017 ರಲ್ಲಿ ಕಾದಲ್ ಕಣ್‌ ಕಟುತೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಉತ್ತಮ ಮನ್ನಣೆ ಗಳಿಸಿದರು. 

ಸಧ್ಯ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರ ಮನಗೆದ್ದರೂ ಸಹ ಅತುಲ್ಯಗೆ ಅವಕಾಶಗಳು ಸಿಗುತ್ತಿಲ್ಲ. ಪ್ರಸ್ತುತ ಅತುಲ್ಯ ರವಿ ತನ್ನ ತಾಯಿ ವಿಜಯಲಕ್ಷ್ಮಿಯೊಂದಿಗೆ ಕೊಯಮತ್ತೂರಿನ ವಡವಳ್ಳಿ ಮಾರುತಮ್ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಈ ನಾಯಕಿಯ ಮನೆಯಲ್ಲಿ ಕಳ್ಳತನ ನಡೆದಿದೆ ಎಂಬ ಮಾಹಿತಿ ಇದೆ. 

ಇದನ್ನೂ ಓದಿ:ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್‌ ವೈರಲ್‌!

ಕೆಲ ದಿನಗಳ ಹಿಂದೆ ನಟಿ ಪಾಸ್‌ಪೋರ್ಟ್‌ ಜೊತೆ 2000 ರೂ. ಹಲವು ದಿನಗಳಿಂದ ಕಾಣುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಅತುಲ್ಯ ರವಿ ತಾಯಿ ವಿಜಯಲಕ್ಷ್ಮಿ ವಡವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯೇ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. 

ತೊಂಡಮುತ್ತೂರು ಪಕ್ಕದ ಕುಳತ್ತುಪಾಲೇನಿಯ ಮಹಿಳೆ (46) ಕೆಲ ವರ್ಷಗಳಿಂದ ಅತುಲ್ಯ ರವಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಅತುಲ್ಯ ರವಿ ಅವರ ತಾಯಿ ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿ ಕೆಲಸದಾಕೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮಹಿಳೆಯನ್ನು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಹೊರಬಿದ್ದಿದೆ.

ಇದನ್ನೂ ಓದಿ:ಪ್ರಭಾಸ್ ಅಭಿನಯಕ್ಕೆ ಅವಮಾನ ಮಾಡಿದ ಕಲ್ಕಿ ನಟಿ! ಡಿಲೀಟ್ ಮಾಡಿದ ಆ ಪೋಸ್ಟ್ ನ ಸ್ಕ್ರೀನ್ ಶಾಟ್ ನಲ್ಲೇನಿದೆ ಗೊತ್ತಾ?

ತನ್ನ ಗೆಳತಿ ಸೆಲ್ವಿ ಹಾಗೂ ಸುಭಾಷಿಣಿ ಜತೆ ಸೇರಿ ನಾಯಕಿಯ ಮನೆಯಲ್ಲಿ ಹಣ ಹಾಗೂ ಪಾಸ್ ಪೋರ್ಟ್ ಕದ್ದಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಕೆಲಸದಾಕೆಯೊಂದಿಗೆ ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳು ನಟಿಯ ಪಾಸ್‌ಪೋರ್ಟ್ ಎಲ್ಲಿ ಬಚ್ಚಿಟ್ಟಿದ್ದಾರೆ ಎಂಬುದಾಗಿ ಬಾಯಿ ಬಿಚ್ಚುತ್ತಿಲ್ಲ ಎನ್ನಲಾಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News