ಬೆಂಗಳೂರು : KCET registration Reopens : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2023 ರ ನೋಂದಣಿ ಪೋರ್ಟಲ್ ಅನ್ನು ಮತ್ತೆ ಓಪನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಅರ್ಜಿ ಸಲ್ಲಿಸದ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ - cetonline.karnataka.gov.in/ ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಅವಕಾಶ ಪಡೆದಂತಾಗಿದೆ. ಮೇ 13ರವರೆಗೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. KCET 2023 ಅನ್ನು ಮೇ 20 ರಿಂದ ಮೇ 22 ರವರೆಗೆ ನಡೆಸಲಾಗುವುದು.
ಇದಕ್ಕೂ ಮೊದಲು, KEA ನೋಂದಣಿ ವಿಂಡೋವನ್ನು ಏಪ್ರಿಲ್ 24 ರಿಂದ ಏಪ್ರಿಲ್ 25 ರವರೆಗೆ ತೆರೆದಿತ್ತು. ಆ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 9 ಎಂದು ಹೇಳಲಾಗಿತ್ತು. ಅಭ್ಯರ್ಥಿಗಳು ಏಪ್ರಿಲ್ 12 ರಿಂದ ಏಪ್ರಿಲ್ 15 ರವರೆಗೆ ಅರ್ಜಿ ನಮೂನೆಯನ್ನು ಎಡಿಟ್ ಮಾಡುವ ವಕಾಶ ಕೂಡಾ ನೀಡಲಾಗಿತ್ತು.
ಇದನ್ನೂ ಓದಿ : Deve Gowda Voted: ಹೆಲಿಕಾಪ್ಟರ್ ಮೂಲಕ ಬಂದಿಳಿದು ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು
KCET ಅರ್ಜಿ ನಮೂನೆ 2023 ಅನ್ನು ಹೇಗೆ ಭರ್ತಿ ಮಾಡುವುದು ಹೇಗೆ ? :
KCET ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಮೊದಲು
- KCET ಅಧಿಕೃತ ವೆಬ್ಸೈಟ್ cetonline.karnataka.gov.in ಗೆ ಭೇಟಿ ನೀಡಿ.
- ಇಲ್ಲಿ registration link ಅನ್ನು ಕ್ಲಿಕ್ ಮಾಡಿ
- ರಿಜಿಸ್ಟ್ರೇಶನ್ ಕ್ರೆಡೆನ್ಶಿಯಲ್ ನಳಸಿ ಲಾಗಿನ್ ಆಗಿ
- ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನ್ಲೈನ್ ಮೋಡ್ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.
-KCET ಅರ್ಜಿ ನಮೂನೆ 2023 ಅನ್ನು ಪ್ರಿವ್ಯೂ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಇದನ್ನೂ ಓದಿ : 95 ವರ್ಷದ, ಎಸ್.ಟಿ.ಸೋಮಶೇಖರ್ ಅವರ ತಾಯಿ ಸೀತಮ್ಮರವರಿಂದ ಮತದಾನ
KCET 2023: ನೋಂದಣಿಗೆ ಅಗತ್ಯವಿರುವ ದಾಖಲೆಗಳು :
-ಕರ್ನಾಟಕ SSLC ಅಥವಾ 10ನೇ ಅಂಕಪಟ್ಟಿ
-ಕರ್ನಾಟಕ 12 ನೇ ಅಥವಾ ದ್ವಿತೀಯ ಪಿಯುಸಿ ಅಂಕಪಟ್ಟಿ
-RD ಸಂಖ್ಯೆ ಅಥವಾ ಜಾತಿಯ ಎಲ್ಲಾ ರೀತಿಯ ಮೀಸಲಾತಿ ಸರ್ಟಿಫಿಕೆಟ್ ಗಳು (ವರ್ಗ, ಆದಾಯ, ಸ್ಕಿಮ್ ಲೇಯರ್ ಸರ್ಟಿಫಿಕೆಟ್ , (NCLC), ಹೈದರಾಬಾದ್-ಕರ್ನಾಟಕ (HK) ಪ್ರಮಾಣಪತ್ರ
- ಕರ್ನಾಟಕದಲ್ಲಿ ಅಧ್ಯಯನ ಮಾಡಿರುವ ವಿವರಗಳು.
- jpg ಅಥವಾ jpeg ಸ್ವರೂಪದಲ್ಲಿ ಅಭ್ಯರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ (ಗರಿಷ್ಠ 50 KB ಗಾತ್ರ).
- jpg ಅಥವಾ jpeg ಸ್ವರೂಪದಲ್ಲಿ ಅಭ್ಯರ್ಥಿಯ ಸಹಿ (ಗರಿಷ್ಠ 50 KB ಗಾತ್ರ).
- jpg ಅಥವಾ jpeg ಸ್ವರೂಪದಲ್ಲಿ ಅಭ್ಯರ್ಥಿಯ ಎಡಗೈ ಹೆಬ್ಬೆರಳಿನ ಗುರುತು (ಗರಿಷ್ಠ ಗಾತ್ರ 50 KB)
ಇದನ್ನೂ ಓದಿ : Political Leaders Voted: ಕುಟುಂಬದೊಂದಿಗೆ ಮತದಾನ ಮಾಡಿದ ರಾಜಕೀಯ ನಾಯಕರು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ