SSLC ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡಲ್ಲ, ಆದ್ರೆ, ಕನಿಷ್ಠ ಅಂಕ ನಿಗದಿ ಮಾಡಿಲ್ಲ!

ಪರೀಕ್ಷೆ ಎಂದರೆ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಷ್ಟೇ ಸರಳ ಪರೀಕ್ಷೆ ಇದ್ದರೂ ಎಲ್ಲವನ್ನು ಎಲ್ಲ ವಿದ್ಯಾರ್ಥಿಗಳಿಗೆ ಉತ್ತರಿಸಲು ಸಾಧ್ಯವಿಲ್ಲ

Last Updated : Jun 12, 2021, 10:43 AM IST
  • ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸರಳೀಕೃತ ರೂಪದಲ್ಲಿ ಪರೀಕ್ಷೆ ನಡೆಯಲಿದೆ
  • ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಈಗಾಗಲೇ ಆಂತರಿಕ ಅಂಕ ಅಪ್‌ ಲೋಡ್‌
  • ಪರೀಕ್ಷೆ ಎಂದರೆ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿಲ್ಲ
SSLC ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡಲ್ಲ, ಆದ್ರೆ, ಕನಿಷ್ಠ ಅಂಕ ನಿಗದಿ ಮಾಡಿಲ್ಲ! title=

ಬೆಂಗಳೂರು : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸರಳೀಕೃತ ರೂಪದಲ್ಲಿ ಪರೀಕ್ಷೆ ನಡೆಯಲಿದೆ, ಆದ್ರೆ, ಕನಿಷ್ಠ ಅಂಕದ ಸ್ಪಷ್ಟತೆಯಿಲ್ಲ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಈಗಾಗಲೇ ಆಂತರಿಕ ಅಂಕಗಳನ್ನು ಅಪ್‌ ಲೋಡ್‌ ಮಾಡಲು ಸೂಚಿಸಿದೆ.

ಪ್ರಥಮಭಾಷೆ (ಕನ್ನಡ, ಇಂಗ್ಲಿಷ್‌ ಇತ್ಯಾದಿ) 25 ಅಂಕ, ಉಳಿದ ಐದು ವಿಷಯಕ್ಕೆ ತಲಾ 20 ಆಂತರಿಕ ಅಂಕ ಇರಲಿದೆ. ಎಲ್ಲ ವಿಷಯದಲ್ಲಿ ವಿದ್ಯಾರ್ಥಿಗಳು ಪಡೆದಿರುವ ಆಂತರಿಕ ಅಂಕವನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (SATS) ಮೂಲಕ ಅಪ್‌ಲೋಡ್‌ ಮಾಡಲು ಸೂಚಿಸಲಾಗಿದ್ದು, ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳು ಆಂತರಿಕ ಅಂಕ ಅಪ್‌ಲೋಡ್‌ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದನ್ನೂ ಓದಿ : Mansoon: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಈ ಭಾಗಗಳಲ್ಲಿ ಜೂ.16ರವರೆಗೆ ಆರೆಂಜ್ ಅಲರ್ಟ್

ಸರಳೀಕೃತ ರೂಪದಲ್ಲಿ ಜುಲೈ 3ನೇ ವಾರದಲ್ಲಿ 2 ವಾರ್ಷಿಕ ಪರೀಕ್ಷೆ(SSLC Annual Exam 2021) ನಡೆಯಲಿದ್ದು, ಒಂದೊಂದು ಪರೀಕ್ಷೆಯಲ್ಲಿ ಮೂರು ವಿಷಯಗಳಿರಲಿದ್ದು, ತಲಾ 40 ಅಂಕಗಳ ಪರೀಕ್ಷೆ ಇದಾಗಿರಲಿದೆ. ಈ ಬಗ್ಗೆ ಮಂಡಳಿ ಇನ್ನಷ್ಟೇ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಬೇಕಿದೆ. ಯಾವ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ. ಆದರೇ, ಶೇ.35 ಅಂಕ ಪಡೆಯ ಬೇಕು ಎನ್ನುತ್ತಿದ್ದಾರೆ ಮಂಡಳಿಯ ಅಧಿಕಾರಿಗಳು.

ಇದನ್ನೂ ಓದಿ : First PUC Exam 2021 : 'ಪ್ರಥಮ PUC' ವಿದ್ಯಾರ್ಥಿಗಳಿಗೆ ಬಿಗ್ ಶಾಕ್..!

ಪರೀಕ್ಷೆ ಎಂದರೆ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಷ್ಟೇ ಸರಳ ಪರೀಕ್ಷೆ(Exam) ಇದ್ದರೂ ಎಲ್ಲವನ್ನು ಎಲ್ಲ ವಿದ್ಯಾರ್ಥಿಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಪ್ರತಿವರ್ಷ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಈ ವರ್ಷ ಕನಿಷ್ಠ ಅಂಕದ ಮಾನದಂಡ ಹೇಗೆ ನಿಗದಿ ಮಾಡಬೇಕು ಎಂಬುದೇ ಇಲಾಖೆಗೆ ಸವಾಲಾಗಿದೆ.

ಇದನ್ನೂ ಓದಿ : New Guidelines : ರಾಜ್ಯ ಸರ್ಕಾರದಿಂದ 'ಅನ್ ಲಾಕ್' ಹೊಸ ಮಾರ್ಗಸೂಚಿ ಪ್ರಕಟ!

ಆಂತರಿಕ ಅಂಕವನ್ನು ಸೇರಿಸಲಾಗುತ್ತದೆ : ಸರಳೀಕೃತ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು(Student) ಪಡೆಯುವ ಅಂಕದ ಜತೆಗೆ ಆಂತರಿಕ ಅಂಕ ಸೇರಿಸಲಾಗುತ್ತದೆ. ಒಟ್ಟು 240 ಅಂಕಗಳಿಗೆ ಪರೀಕ್ಷೆ 125 ಆಂತರಿಕ ಅಂಕಗಳು ಸೇರಿ ಒಟ್ಟಾರೆಯಾಗಿ 355 ಅಂಕಗಳಲ್ಲಿ ಕನಿಷ್ಠ ಅಂಕದ ನಿಗದಿ ಮಾಡಲಾಗುತ್ತದೇ. ಇದರಲ್ಲಿ ಶೇ.35 ಎಷ್ಟು ಬರುತ್ತದೆ ಎಂಬುದರಲ್ಲಿ ಕಟ್‌ ಆಫ್‌ ಪಾಸ್‌ ನಿಗದಿ ಮಾಡಲು ಚರ್ಚೆ ನಡೆಯುತ್ತಿದೆ. ಎಲ್ಲರನ್ನು ಪಾಸ್‌ ಮಾಡಬೇಕಿರುವುದರಿಂದ ಹೇಗೆ ಸಾಧ್ಯ ಎಂಬುದನ್ನು ಯೋಚಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಇದನ್ನೂ ಓದಿ : BS Yediyurappa : ಸಿಎಂ ಬದಲಾವಣೆ ಚರ್ಚೆಗೆ ಸೆಡ್ಡು ಹೊಡೆದ ಯಡಿಯೂರಪ್ಪ!

ಆಂತರಿಕ ಅಂಕ(Marks) ನಮೂದಿಸಲು ಸೂಚಿಸಿದ್ದೇವೆ. ಕನಿಷ್ಠ ಅಂಕದ ಮಾನದಂಡದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಪಾಸಾಗಳು ಶೇ.35 ಅಂಕ ಪಡೆಯಬೇಕು ಎಂಬ ನಿಯಮ ಇದ್ದೇ ಇರುತ್ತದೆ. ಸದ್ಯವೇ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ  ಹೇಳಿದ್ದಾರೆ. 

ಇದನ್ನೂ ಓದಿ : Heavy Rain : ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಭಾರೀ ಮಳೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News