Karnataka Shakti Scheme: 1 ತಿಂಗಳು ಪೂರೈಸಿದ ‘ಶಕ್ತಿ’ ಯೋಜನೆ, ಪ್ರಯಾಣಿಸಿದವರೆಷ್ಟು?

Karnataka Shakti Scheme: ಜೂನ್ 11ರಿಂದ ಜುಲೈ 10ರ ತನಕ 4 ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ಬಸ್‌ಗಳಲ್ಲಿ ಒಟ್ಟು 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.

Written by - Puttaraj K Alur | Last Updated : Jul 11, 2023, 09:21 PM IST
  • ಸಿಎಂ ಸಿದ್ದರಾಮಯ್ಯನವರು ಜೂನ್ 11ರಂದು 'ಶಕ್ತಿ' ಯೋಜನೆಗೆ ಚಾಲನೆ ನೀಡಿದ್ದರು
  • ಇಂದಿಗೆ 1 ತಿಂಗಳು ಪೂರೈಸಿದ ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ
  • ಒಟ್ಟು 16.73 ಕೋಟಿ ಅಂದರೆ ಶೇ.50.86ರಷ್ಟು ಮಹಿಳಾ ಪ್ರಯಾಣಿಕರ ಸಂಚಾರ
Karnataka Shakti Scheme: 1 ತಿಂಗಳು ಪೂರೈಸಿದ ‘ಶಕ್ತಿ’ ಯೋಜನೆ, ಪ್ರಯಾಣಿಸಿದವರೆಷ್ಟು? title=
1 ತಿಂಗಳು ಪೂರೈಸಿದ ‘ಶಕ್ತಿ’ ಯೋಜನೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ಪೈಕಿ ‘ಶಕ್ತಿ’ ಯೋಜನೆಯು ಒಂದು. ಮೊದಲು ಜಾರಿಗೆ ಬಂದಿದ್ದು ಕೂಡ ಈ ಯೋಜನೆಯೇ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ಯೋಜನೆ ಇದಾಗಿದೆ. ಸಿಎಂ ಸಿದ್ದರಾಮಯ್ಯನವರು ಜೂನ್ 11ರಂದು 'ಶಕ್ತಿ' ಯೋಜನೆಗೆ ಚಾಲನೆ ನೀಡಿದ್ದರು. ಇದೀಗ ಈ ಯೋಜನೆ 1 ತಿಂಗಳು ಪೂರೈಸಿದೆ. 

ಇದುವರೆಗೆ ಎಷ್ಟು ಜನರು ಪ್ರಯಾಣಿಸಿದ್ದಾರೆ?

ಜೂನ್ 11ರಿಂದ ಜುಲೈ 10ರ ತನಕ 4 ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ಬಸ್‌ಗಳಲ್ಲಿ ಒಟ್ಟು 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಈ ಪೈಕಿ 16.73 ಕೋಟಿ ಅಂದರೆ ಶೇ 50.86ರಷ್ಟು ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.

ಇದನ್ನೂ ಓದಿ: Cafe Coffee Day Story: ಪತಿ ಆತ್ಮಹತ್ಯೆ, ಕಂಪನಿಗೆ 7000 ಕೋಟಿ ಸಾಲ ಇತ್ತು, ಸಿಸಿಡಿಯ 'ರಕ್ಷಕ' ಮಾಳವಿಕಾ

ಈ ಅವಧಿಯಲ್ಲಿ KSRTCಯಲ್ಲಿ 5.09 ಕೋಟಿ (ಶೇ.52.52), BMTCಯಲ್ಲಿ 5.38 ಕೋಟಿ (ಶೇ.48.16), NWKRTCಯಲ್ಲಿ 4.02 ಕೋಟಿ (ಶೇ.55.52) ಮತ್ತು KKRTCಯಲ್ಲಿ 2.23 ಕೋಟಿ (ಶೇ.46.75)ಯಷ್ಟು ಮಹಿಳೆಯರು ಸಂಚಾರ ನಡೆಸಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಟಿಕೆಟ್ ಮೌಲ್ಯದ ವಿವರ: ಜೂನ್ 11ರಿಂದ ಜುಲೈ 10ರತನಕ ಸಂಚಾರ ನಡೆಸಿದ ಅವಧಿಯಲ್ಲಿನ ಟಿಕೆಟ್ ಮೌಲ್ಯ 4 ಸಂಸ್ಥೆಗಳಿಂದ 400 ಕೋಟಿ ರೂ. ದಾಟಿದೆ. KSRTC 151.25 ಕೋಟಿ, BMTC 69.56 ಕೋಟಿ, NWKRTC 103.51 ಕೋಟಿ ಮತ್ತು KKRTC 77.62 ಕೋಟಿ. ಒಟ್ಟಾರೆ ಮೌಲ್ಯ 401.94 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕೇವಲ 5 ಲಕ್ಷ ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಬಡ್ಡಿ ಲಾಭ ಪಡೆಯಿರಿ!

ಮಹಿಳಾ ಪ್ರಯಾಣಿಕರ ಅಂಕಿ ಅಂಶ: KSRTCಯಲ್ಲಿ 16.97 ಲಕ್ಷ, BMTCಯಲ್ಲಿ 17.95 ಲಕ್ಷ, NWKRTCಯಲ್ಲಿ 13.42 ಲಕ್ಷ ಮತ್ತು KKRTC 7.43 ಲಕ್ಷ ಸೇರಿ ಒಟ್ಟು 55.77 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆಂದು ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News