ದುರ್ಗಾ ಮಾತೆಗೆ ಪತ್ರ ಬರೆದ ಶ್ರೀರಾಮುಲು ಇಟ್ಟ ಬೇಡಿಕೆ ಏನು ಗೊತ್ತಾ?

ಕಲಬುರ್ಗಿ ಭೇಟಿಗೂ ಮೊದಲು ಶ್ರೀರಾಮುಲು ಯಾದಗಿರಿಯಲ್ಲಿ ಇಳಿದು ಅಲ್ಲಿಂದ ನೇರವಾಗಿ ಶಾಹಪುರ್ ತಾಲೂಕಿನ ಗೊನಲ್ ಗಾಂವ್ ನಲ್ಲಿರುವ ದೇವಸ್ಥಾನಕ್ಕೆ ತಲುಪಿದ್ದಾರೆ. ಇಲ್ಲಿ ಅವರು ದೇವಸ್ಥಾನದಲ್ಲಿ ಪೂಜೆ ಹಾಗೂ ಅರ್ಚನೆ ಸಲ್ಲಿಸಿ ದೇವಿಯ ಚರಣಕಮಲಗಳಲ್ಲಿ ಪತ್ರವನ್ನು ಇಟ್ಟಿದ್ದಾರೆ ಹಾಗೂ ದೇವಿಯ ಆಶೀರ್ವಾದ ಪಡೆದಿದ್ದಾರೆ.

Last Updated : Sep 17, 2020, 09:55 PM IST
  • ಶಾಹಪುರದ ಗುಡ್ಡೆ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು.
  • ಉಪಮುಖ್ಯಮಂತ್ರಿಯನ್ನಾಗಿಸಲು ದುರ್ಗಾ ದೇವಿಗೆ ಪತ್ರ ಬರೆದ ಸಚಿವರು.
  • ಶ್ರೀರಾಮುಲು ಅವರಿಗಿಂತಲೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಿಕೆಶಿ ಕೂಡ ದೇವಿಗೆ ಪತ್ರ ಬರೆದಿದ್ದಾರಂತೆ.
ದುರ್ಗಾ ಮಾತೆಗೆ ಪತ್ರ ಬರೆದ ಶ್ರೀರಾಮುಲು ಇಟ್ಟ ಬೇಡಿಕೆ ಏನು ಗೊತ್ತಾ? title=

ಬೆಂಗಳೂರು: ಕರ್ನಾಟಕದಲ್ಲಿ ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಆರ್. ಶ್ರೀರಾಮುಲು (B.Sriramulu) ಗುರುವಾರ ಶೀಘ್ರದಲ್ಲೇ ಉಪಮುಖ್ಯಮಂತ್ರಿಯನ್ನಾಗಿಸಿ ಆಶೀರ್ವಾದ ಮಾಡುವಂತೆ ಕೋರಿ ಶಾಹಪುರದ ಗಡ್ಡೆ ದುರ್ಗಮ್ಮ ದೇವಸ್ಥಾನದಲ್ಲಿ ದೇವಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕಲ್ಬುರ್ಗಿಯಲ್ಲಿ ಕಲ್ಯಾಣ್ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ಶ್ರೀರಾಮುಲು ಯಾದಗಿರಿಗೆ ತಲುಪಿದ್ದರು. ಪ್ರಸಿದ್ಧ ಗೋನಾಲ್ ದುರ್ಗಾ ದೇವಿ ದೇವಸ್ಥಾನವು ಬೆಂಗಳೂರಿನಿಂದ 500 ಕಿ.ಮೀ ದೂರದಲ್ಲಿರುವ ಯಾದಗಿರಿ ಜಿಲ್ಲೆಯ ಶಹಪುರ್ ತಾಲ್ಲೂಕಿನಲ್ಲಿದೆ.

ಶ್ರೀರಾಮುಲು ರಾಜ್ಯದ ಮುಖ್ಯಮಂತ್ರಿ ಕಚೇರಿಯ ಭಾಗವಾಗಿದ್ದಾರೆ ಹಾಗೂ ಹಲವು ಗಣ್ಯವ್ಯಕ್ತಿಗಳು ಇದಕ್ಕೂ ಮೊದಲು ಕಲ್ಯಾಣ ಕರ್ನಾಟಕದ ಉತ್ಸವದಲ್ಲಿ ಭಾಗವಹಿಸಲು ಕಲ್ಬುರ್ಗಿಗೆ ತಲುಪಿದ್ದರು. ಈ ಉತ್ಸವವನ್ನು ಹೈದ್ರಾಬಾದ್-ಕರ್ನಾಟಕ್ ಮುಕ್ತಿ ದಿನದ ಅಂಗವಾಗಿ ಆಚರಿಸಲಾಗುತ್ತದೆ. ಕಳೆದ ವರ್ಷದಿಂದ ಇದನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ದಿನದಂದು ಈ ಕ್ಷೇತ್ರ ಹೈದ್ರಾಬಾದ್ ನಿಜಾಮರ ಶಾಸನದಿಂದ ಮುಕ್ತವಾಗಿತ್ತು.

ದೇವಿಯ ಚರಣಕಮಲಗಳಿಗೆ ಪತ್ರ
ಕಲಬುರ್ಗಿ ಭೇಟಿಗೂ ಮುನ್ನ ಯಾದಗಿರಿಯಲ್ಲಿ ಇಳಿದ ಶ್ರೀರಾಮುಲು ಅಲ್ಲಿಂದ ನೆರವಾಗಿ ಶಾಹಪುರ್ ಗೆ ತೆರಳಿ ಗೊನಾಲ್ ಗಾವ್ ನಲ್ಲಿರುವ ದುರ್ಗಾ ದೇವಸ್ಥಾನಕ್ಕೆ ತಲುಪಿದ್ದಾರೆ. ಅಲ್ಲಿ ಪೂಜೆ ಹಾಗೂ ಅರ್ಚನೆ ಸಲ್ಲಿಸಿದ ಅವರು ತನ್ನ ಪತ್ರವನ್ನು ದೇವಿಯ ಚರಣಕಮಲಗಳಲ್ಲಿ ಇರಿಸಿ, ಆಶೀರ್ವಾದ ಪಡೆದುಕೊಂಡಿದ್ದಾರೆ.

ಪತ್ರದಲ್ಲಿ ಕೇವಲ ಎರಡು ಲೈನ್ ಬರೆದ ಸಚಿವರು
ಪತ್ರದ ಕುರಿತು ಮಾಹಿತಿ ನೀಡಿರುವ ಸಚಿವರ ಆಪ್ತರು, ಶ್ರೀರಾಮುಲು ಅವರು ತಮ್ಮ ಪತ್ರದಲ್ಲಿ ಕೇವಲ ಎರಡು ಲೈನ್ ಗಳನ್ನು ತಮ್ಮ ಹಸ್ತಾಕ್ಷರ ನಮೂದಿಸಿದ್ದಾರೆ. ತಾವು ಅತಿ ಶೀಘ್ರದಲ್ಲಿಯೇ ಉಪಮುಖ್ಯಮಂತ್ರಿಯಾಗಲು ಬಯಸುತ್ತಿರುವುದಾಗಿ ಬರೆದಿದ್ದಾರೆ. ಮೂಲಗಳ ಪ್ರಕಾರ ದೇವಸ್ಥಾನಕ್ಕೆ ತೆರಳುವ ಮುನ್ನ ಶ್ರೀರಾಮುಲು ದೇವಸ್ಥಾನದ ಪೂಜಾರಿ ಮರಿಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ನಂತರ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. 

Also Read-ಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆ ಸ್ಪೂರ್ತಿ ತುಂಬಲು ಆಸ್ಪತ್ರೆಗೆ ರಾಮುಲು ಭೇಟಿ

ಈ ದೇವಸ್ಥಾನಕ್ಕೆ ಭೇಟಿ ನೀಡುವ ಯಾವುದೇ ವ್ಯಕ್ತಿ ಒಂದು ವೇಳೆ ತನಗಾಗಿ ಅಥವಾ ತನ್ನ ಕುಟುಂಬದ ಸದಸ್ಯರಿಗಾಗಿ ಯಾವುದೇ ಒಂದು ಹರಕೆಯನ್ನ ಬೇಡಿಕೆಯನ್ನು ಪತ್ರದಲ್ಲಿ ಬರೆದು ದೇವಿಯ ಚರಣಕಮಪಗಳ ಬಳಿ ಇರಿಸಿದರೆ ಅವರ ಇಚ್ಛೆ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಶ್ರೀರಾಮುಲುಗಿಂತಲೂ ಮೊದಲು ಈ ದೇವಸ್ಥಾನಕ್ಕೆ ಭೇಟಿ ನೀಡಿರುವ ಡಿಕೆಶಿ (D.K.Shivkumar) ಕೂಡ ದೇವಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Trending News