New Year Guidelines : ಹೊಸ ವರ್ಷಕ್ಕೆ ಕೌಂಟ್ ಡೌನ್ : ಇಂದು ನ್ಯೂ ಇಯರ್ ನೈಟ್ ಏನಿರುತ್ತೆ ಏನಿರಲ್ಲ..?!

ಮದ್ಯಪ್ರಿಯರು ಇಂದು ವೈನ್ ಶಾಪ್ ಗಳಲ್ಲಿ ದೊಡ್ಡ ಕ್ಯೂ ನಿಂತು ಎಣ್ಣೆ ಖರೀದಿಗೆ ಮುಗಿಬಿದಿದ್ದಾರೆ. ನಗರದ ಎಂಜಿ ರಸ್ತೆ ಬಳಿಯ ಟಾನಿಕ್ ವೈನ್ ಶಾಪ್ ನಲ್ಲಿ ಭರ್ಜರಿ ಮದ್ಯ ಮಾರಾಟವಾಗುತ್ತಿದೆ.

Written by - Channabasava A Kashinakunti | Last Updated : Dec 31, 2021, 06:50 PM IST
  • ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮದ್ಯ ಮಾರಾಟವಾಗುತ್ತಿದೆ
  • ಇಂದು ನ್ಯೂ ಇಯರ್ ನೈಟ್ ಏನಿರುತ್ತೆ ಏನಿರಲ್ಲ..?!
  • ಲೇಟ್​ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್
New Year Guidelines :  ಹೊಸ ವರ್ಷಕ್ಕೆ ಕೌಂಟ್ ಡೌನ್ : ಇಂದು ನ್ಯೂ ಇಯರ್ ನೈಟ್ ಏನಿರುತ್ತೆ ಏನಿರಲ್ಲ..?! title=

ಬೆಂಗಳೂರು : ಹೊಸ ವರ್ಷಕ್ಕೆ ಕ್ಷಣಗಣನೆ ಇದೆ ಆದ್ರೆ, ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮದ್ಯ ಮಾರಾಟವಾಗುತ್ತಿದೆ. ಮದ್ಯಪ್ರಿಯರು ಇಂದು ವೈನ್ ಶಾಪ್ ಗಳಲ್ಲಿ ದೊಡ್ಡ ಕ್ಯೂ ನಿಂತು ಎಣ್ಣೆ ಖರೀದಿಗೆ ಮುಗಿಬಿದಿದ್ದಾರೆ. ನಗರದ ಎಂಜಿ ರಸ್ತೆ ಬಳಿಯ ಟಾನಿಕ್ ವೈನ್ ಶಾಪ್ ನಲ್ಲಿ ಭರ್ಜರಿ ಮದ್ಯ ಮಾರಾಟವಾಗುತ್ತಿದೆ.

ಆದ್ರೆ ರಾಜ್ಯ ಸರ್ಕಾರ ಕೊರೋನಾ(Corona) ಹಿನ್ನೆಲೆ ಅದ್ದೂರಿ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಮಾಡುವಂತಿಲ್ಲ. 10 ಗಂಟೆ ಬಳಿಕ ನೈಟ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಮದ್ಯಪ್ರಿಯರು ಮದ್ಯಖರೀದಿಗೆ ಎಣ್ಣೆ ಖರೀದಿಗೆ ಮುಗಿಬಿದಿದ್ದಾರೆ.

ಇದನ್ನೂ ಓದಿ : BCM ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶ : ಅವಧಿ ವಿಸ್ತರಣೆ

ಹೊಸ ವರ್ಷಕ್ಕೆ ಕೌಂಟ್ ಡೌನ್..

2021 ಗುಡ್ ಬಾಯ್ 2022 ವೆಲ್ ಕಮ್(New Year 2022) ಮೂಡನಲ್ಲಿ ಬೆಂಗಳೂರಿಗರು ಇದ್ದಾರೆ. ಕೊರೋನಾ ಹಾಗು ಒಮಿಕ್ರಾನ್ ಆತಂಕದಲ್ಲಿಯೇ ನ್ಯೂ ಇಯರ್ ವೆಲ್ ಕಮ್ ಗೆ ಜನ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ, ಕೊರೋನಾ ಆತಂಕಕ್ಕೆ ಹೊಸ ವರ್ಷದ ಸಂಭ್ರಮಕ್ಕೆ ಸರ್ಕಾರ ಬ್ರೇಕ್ ಹಾಕಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಮೊಬೈಲ್ ಕಳ್ಳ ಅರೆಸ್ಟ್..! 55 ಮೊಬೈಲ್ ಪೊಲೀಸರ ವಶಕ್ಕೆ..!

ಇಂದು ನ್ಯೂ ಇಯರ್ ನೈಟ್ ಏನಿರುತ್ತೆ ಏನಿರಲ್ಲ..?!

ರಾತ್ರಿ ಹತ್ತುಗಂಟೆಗೆ ನೈಟ್ ಕರ್ಪ್ಯೂ ಜಾರಿ

ರೋಗಿಗಳು ಮತ್ತು ಸಹಾಯಕರು  ಮಾತ್ರ ಓಡಾಡಬಹುದು

ತುರ್ತು ಸೇವೆಗಳು ಓಪನ್

ಕಂಪನಿ ನೌಕರರು,‌ ಕಾರ್ಖಾನೆಯ ಕಾರ್ಮಿಕರು ಐಡಿ ಕಾರ್ಡ್ ತೋರಿಸಿ ಸಂಚಾರ

ಗೂಡ್ಸ್ ಸೇವೆ ಇರಲಿದೆ 

ಬಸ್ , ರೈಲು, ವಿಮಾನ ಸೇವೆ ಇರಲಿದೆ

ಅಗತ್ಯ ಸೇವೆ ಒದಗಿಸುವ ವಾಹನಕ್ಕೆ ಅನುಮತಿ

ಫುಡ್​ ಹೋಂ ಡೆಲಿವರಿ

ಇ-ಕಾಮರ್ಸ್, ಖಾಲಿ ವಾಹನ ಸಂಚಾರಕ್ಕೆ ಅವಕಾಶ

ವೈದ್ಯಕೀಯ ಸೇವೆಗೆ ಅವಕಾಶ

ರಾತ್ರಿ 10ಗಂಟೆ ಬಳಿಕ ಏನಿರಲ್ಲ?

ವಾಣಿಜ್ಯ ಚಟುವಟಿಕೆಗೆ ನಿರ್ಬಂಧ

ಅನಗತ್ಯ ಆಟೋ ಸಂಚರಕ್ಕಿಲ್ಲ ಅವಕಾಶ

ನೈಟ್​ಕರ್ಪ್ಯೂ ವೇಳೆ ಬಾರ್, ಪಬ್ ಬಂದ್

ಲೇಟ್​ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್

ಎಲ್ಲಾ ಫುಡ್ ಸ್ಟ್ರೀಟ್​​ಗಳು ಬಂದ್

ಪಬ್,ಬಾರ್, ಕ್ಲಬ್​​, ಹೋಟೆಲ್ ಬಂದ್

ಸಿನೆಮಾ ಥಿಯೇಟರ್ ಹತ್ತು ಗಂಟೆ ನಂತರ ಬಂದ್ 

ಎಲ್ಲ ಪುಡ್ ಸ್ಟ್ರೀಟ್ ಗಳು ಬಂದ್

ಅನಗತ್ಯ ಜನರ ಓಡಾಟಕ್ಕೆ ಬ್ರೇಕ್

ಏಲ್ಲೆಲ್ಲಿ ಶೇ.50-50 ರೂಲ್ಸ್ ಜಾರಿ..?!

ಹೋಟೆಲ್

ಪಬ್, ಬಾರ್

ರೆಸ್ಟೋರೆಂಟ್

ಕ್ಲಬ್

ಪುಡ್ ಜಾಯಂಟ್ಸ್

ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಿಸುವಂತಿಲ್ಲ

ಸಭೆ-ಸಮಾರಂಭಗಳಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ 

ಹಗಲಿನಲ್ಲೂ ಸಹ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ

 

Trending News