KSRTC Employees : ಸಾರಿಗೆ ನೌಕರರ ವೇತನ ಶೇ.15 ರಷ್ಟು ಏರಿಕೆ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ!

ಮಾರ್ಚ್ 1 ರಿಂದಲೇ ಹೊಸ ಪರಿಷ್ಕರಣೆ ಜಾರಿ ಬರುವಂತೆ, ನಾಲ್ಕೂ ನಿಗಮದ ನೌಕರರಿಗೆ ಮೂಲ ವೇತನ ಶೇಕಡಾ 15 ರಷ್ಟು ಏರಿಕೆ ಮಾಡಿ ಆದೇಶ ಹೊರಬಿದ್ದಿದೆ.

Written by - Channabasava A Kashinakunti | Last Updated : Mar 17, 2023, 10:20 PM IST
  • ಸಾರಿಗೆ ನೌಕರರ ಅಸಮಾಧಾನದ ನಡುವೆ
  • ಶೇ.15 ರಷ್ಟು ಸಂಬಳ ಏರಿಕೆ ಮಾಡಿ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ
  • ಮಾರ್ಚ್ 1 ರಿಂದಲೇ ಹೊಸ ಪರಿಷ್ಕರಣೆ ಜಾರಿ ಬರುವಂತೆ
KSRTC Employees : ಸಾರಿಗೆ ನೌಕರರ ವೇತನ ಶೇ.15 ರಷ್ಟು ಏರಿಕೆ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ! title=

ಬೆಂಗಳೂರು : ಸಾರಿಗೆ ನೌಕರರ ಅಸಮಾಧಾನದ ನಡುವೆಯೂ ಶೇ.15 ರಷ್ಟು ಸಂಬಳ ಏರಿಕೆ ಮಾಡಿ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.

ಮಾರ್ಚ್ 1 ರಿಂದಲೇ ಹೊಸ ಪರಿಷ್ಕರಣೆ ಜಾರಿ ಬರುವಂತೆ, ನಾಲ್ಕೂ ನಿಗಮದ ನೌಕರರಿಗೆ ಮೂಲ ವೇತನ ಶೇಕಡಾ 15 ರಷ್ಟು ಏರಿಕೆ ಮಾಡಿ ಆದೇಶ ಹೊರಬಿದ್ದಿದೆ. 

ಇದನ್ನೂ ಓದಿ : Ayodhya Ram Mandir: ಅಯೋಧ್ಯೆಯ ಶ್ರೀರಾಮ ಮೂರ್ತಿಗೆ ಕಾರ್ಕಳದ ಕೃಷ್ಣಶಿಲೆ

ಕಾರ್ಮಿಕ ಸಂಘಟನೆ ಹಾಗೂ ಆರ್ಥಿಕ ಇಲಾಖೆ ಜೊತೆಗೆ ಚರ್ಚಿಸಿ, ಅರಿಯರ್ಸ್ ಹಾಗೂ ಇತರೆ  ಬಾಕಿ ಇತ್ಯರ್ಥಕ್ಕೆ ಒಂದು ತಿಂಗಳ ಕಾಲಮಿತಿ ನೀಡಲಾಗಿದೆ. ನಾಲ್ಕು ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿದ ಏಕಸದಸ್ಯ ಸಮಿತಿಗೆ ಸೂಚನೆ ವರದಿ ಸಲ್ಲಿಸಲು ತಿಳಿಸಲಾಗಿದೆ.

ಈ ಹಿಂದೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಟ್ವೀಟ್ ಮಾಡಿ, ಶೇ. 15 ರಷ್ಟು ಸಂಬಳ ಏರಿಕೆ ಬಗ್ಗೆ ತಿಳಿಸಿದ್ದರು.  ಆದ್ರೆ ಇದಕ್ಕೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಒಪ್ಪಿರಲಿಲ್ಲ. ಇದೆಲ್ಲದರ ನಡುವೆ ಇಂದು  ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದೆ.

ಇದನ್ನೂ ಓದಿ : ನಮ್ಮ ಕೆಲಸಗಳ ಆಧಾರದ ಮೇಲೆ ನಮ್ಮನ್ನು ಆಯ್ಕೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News