ಪಾದಕ್ಕೆ ಎರಗುವ ಪರಿ ಹೇಗೆಂದು ಡಿಕೆಶಿ ನೋಡಿ ಕಲಿಯಿರಿ: ಖಂಡ್ರೆಗೆ ಬಿಜೆಪಿ ತಿರುಗೇಟು

ನೆಹರೂ, ಇಂದಿರಾ, ರಾಜೀವ್ ಮತ್ತು ಸೋನಿಯಾ ಗಾಂಧಿಯವರ ಪದತಲದಲ್ಲಿ ಗುಲಾಮಗಿರಿ ಮಾಡಿದ್ದಕ್ಕಾಗಿಯೇ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ ಖಂಡ್ರೆಯವರೇ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Dec 1, 2021, 07:09 AM IST
  • ನಕಲಿ ಗಾಂಧಿ ಕುಟುಂಬದ ಕರೆ ಬಂದ‌ಕೂಡಲೇ ಡಿಕೆಶಿ ನಿಮ್ಮನ್ನು ಬದಿಗೆ ಸರಿಸಿದ್ದರು
  • ಗುಲಾಮಗಿರಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ?
  • ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್ ಎಂದು ಟೀಕಿಸಿದ ಕರ್ನಾಟಕ ಬಿಜೆಪಿ
ಪಾದಕ್ಕೆ ಎರಗುವ ಪರಿ ಹೇಗೆಂದು ಡಿಕೆಶಿ ನೋಡಿ ಕಲಿಯಿರಿ: ಖಂಡ್ರೆಗೆ ಬಿಜೆಪಿ ತಿರುಗೇಟು title=
ಈಶ್ವರ್ ಖಂಡ್ರೆ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ

ಬೆಂಗಳೂರು: ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ಮೋದಿ ಎದುರು ಗುಲಾಮರಂತೆ ವರ್ತಿಸುತ್ತಿದ್ದು, ಕೇಂದ್ರ ಸರ್ಕಾರದ ಯಾವುದೇ ಹಕ್ಕು ಕೇಳಲು ಧೈರ್ಯ ತೋರುತ್ತಿಲ್ಲವೆಂದು ಹೇಳಿದ್ದ ಕೆಪಿಸಿಸಿ ಕರ್ಯಾಧ್ಯಕ್ಷ ಈಶ್ವರ್ ಖಂಡ್ರೆ(Eshwar Khandre)ಗೆ ಬಿಜೆಪಿ ತಿರುಗೇಟು ನೀಡಿದೆ. #ಕುಟುಂಬಭಜಕರು ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

‘ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ನಡೆಸುವುದಕ್ಕೂ ಪೈಪೋಟಿ ಇದೆ ಖಂಡ್ರೆಯವರೇ, ಏಕೋ ನಿಮ್ಮ ವೇಗ ಕಡಿಮೆಯಾಯ್ತು! ಹೀಗಾಗಿ ಇನ್ನೂ ಕಾರ್ಯಾಧ್ಯಕ್ಷ ಸ್ಥಾನದಲ್ಲೇ ಇದ್ದೀರಿ. ಪಾದಕ್ಕೆ ಎರಗುವ ಪರಿ ಹೇಗೆಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರನ್ನು ನೋಡಿ ಕಲಿಯಿರಿ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ‘ಓಮಿಕ್ರಾನ್’ ಆತಂಕ ಬೇಡ: ರಾಜ್ಯದಲ್ಲಿ ಲಾಕ್‌ಡೌನ್ ಮಾಡುವ ಪ್ರಸ್ತಾವನೆ ಇಲ್ಲವೆಂದ ಸಿಎಂ ಬೊಮ್ಮಾಯಿ

‘ಗುಲಾಮಗಿರಿ ಎಂಬ ಶಬ್ದಕ್ಕೆ  ಪರ್ಯಾಯ ಪದವೇ ಕಾಂಗ್ರೆಸ್(Congress). ಜವಾಹರ‌ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಪದತಲದಲ್ಲಿ ಗುಲಾಮಗಿರಿ ಮಾಡಿದ್ದಕ್ಕಾಗಿಯೇ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ ಖಂಡ್ರೆಯವರೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಖಂಡ್ರೆಯವರೇ ಗುಲಾಮಗಿರಿಯ ಪ್ರದರ್ಶನಕ್ಕಾಗಿ ಡಿಕೆಶಿ(DK Shivakumar) ಈ ಹಿಂದೆ ಮಾಡಿದ್ದ ಆತುರವನ್ನು ಒಮ್ಮೆ ಕಣ್ಣು ತುಂಬಿಸಿಕೊಳ್ಳಿ. ಇದನ್ನು ಜನಸಾಮಾನ್ಯರು ಗುಲಾಮಗಿರಿ ಎಂದು‌ ಕರೆಯುತ್ತಾರೆ. ನಕಲಿ ಗಾಂಧಿ ಕುಟುಂಬದ ಕರೆ ಬಂದ‌ಕೂಡಲೇ ಡಿಕೆಶಿ ಅವರು ನಿಮ್ಮನ್ನು ಬದಿಗೆ ಸರಿಸಿದ ರೀತಿ ಇದೆಯಲ್ವಾ, ಆ ಕ್ಷಣವನ್ನು ಗುಲಾಮಿತನ‌ ಎನ್ನುತ್ತಾರೆ’ ಎಂದು ಬಿಜೆಪಿ(Karnataka BJP) ಕುಟುಕಿದೆ.

ಇದನ್ನೂ ಓದಿ: ESI ಆಸ್ಪತ್ರೆ ಎಡವಟ್ಟು: ಫ್ರೀಜರ್‌ನಲ್ಲಿಯೇ ಕೊಳೆತ ಕೊರೊನಾ ಸೋಂಕಿತರ ಶವ, 16 ತಿಂಗಳ ಬಳಿಕ ಹೊರಕ್ಕೆ..!

ಕೇಂದ್ರ ಸರ್ಕಾರದ ಯಾವುದೇ ಯೋಜನೆ ಇದ್ದರೂ ರಾಜ್ಯಕ್ಕೆ ಕೊನೆಯ ಪಾಲು ನೀಡಲಾಗುತ್ತಿದೆ. ಕೇಂದ್ರ ರಾಜ್ಯಕ್ಕೆ ಇಷ್ಟೆಲ್ಲ ಅನ್ಯಾಯ ಮಾಡುತ್ತಿದ್ದರೂ ಸಂಸದರು ಕೇಳುತ್ತಿಲ್ಲ. ರಾಜ್ಯದ ಸಂಸದರಿಗೆ ಪ್ರಧಾನಿ ಮೋದಿ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ. ನಮ್ಮ ಸಂಸದರು ಅಂಜುಬುರಕರಾಗಿದ್ದಕ್ಕೆ ರಾಜ್ಯದ ಜನರು ಸಂಕಷ್ಟ ಅನುಭವಿಸುವಂತಾಗುತ್ತಿದೆ ಎಂದು ಈಶ್ವರ್ ಖಂಡ್ರೆ ಟೀಕಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News