ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕ!: ಬಿಜೆಪಿ ಆರೋಪ

ಕಾಂಗ್ರೆಸ್‌ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಭ್ರಷ್ಟರ ಪಾಲಿನ ಆಲದಮರ ಹಾಗೂ ಪೋಷಕ. ಅರಸಿ ಬಂದವರಿಗೆಲ್ಲ ನೀರು, ನೆಳಲನ್ನು ಒದಗಿಸುವ ಮಹಾಸಂರಕ್ಷಕರ ಭ್ರಷ್ಟ ಸಾಧನೆಯ ಪಕ್ಷಿನೋಟವೆಂದು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ.

Written by - Puttaraj K Alur | Last Updated : Nov 25, 2023, 10:18 AM IST
  • ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಗೂಂಡಾಗಳ ಮಹಾಪೋಷಕ
  • ಡಿಕೆಶಿ 380 ಪಟ್ಟು ಅಕ್ರಮ ಆಸ್ತಿ ಪ್ರಕರಣದಿಂದ ಪಾರು ಮಾಡಿದ್ದೇ ಈ ಭ್ರಷ್ಟ ಪೋಷಕ
  • ಹೈಕಮಾಂಡ್‌ಗೆ 1,000 ಕೋಟಿ ಕಪ್ಪ ಸಾಗಿಸಿದ MLC ಗೋವಿಂದರಾಜುರನ್ನು ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕ!: ಬಿಜೆಪಿ ಆರೋಪ title=

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಗೂಂಡಾಗಳ ಮಹಾಪೋಷಕ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಭಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

‘ಕಾಂಗ್ರೆಸ್‌ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಭ್ರಷ್ಟರ ಪಾಲಿನ ಆಲದಮರ ಹಾಗೂ ಪೋಷಕ. ಅರಸಿ ಬಂದವರಿಗೆಲ್ಲ ನೀರು, ನೆಳಲನ್ನು ಒದಗಿಸುವ ಮಹಾಸಂರಕ್ಷಕರ ಭ್ರಷ್ಟ ಸಾಧನೆಯ ಪಕ್ಷಿನೋಟ’ವೆಂದು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಡಿಕೆಶಿ ವಿರುದ್ಧ CBI ತನಿಖೆ ವಾಪಸ್: ನಾಳೆ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ!

‘ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು 380 ಪಟ್ಟು ಅಕ್ರಮ ಆಸ್ತಿ ಪ್ರಕರಣದಿಂದ ಪಾರು ಮಾಡಿದ್ದೇ ಈ ಭ್ರಷ್ಟ ಪೋಷಕ. ಕೆಪಿಸಿಎಲ್‌ನ 447 ಕೋಟಿ ರೂ. ಮೆಗಾ ಹಗರಣದಿಂದ ಡಿಕೆಶಿ ಅವರನ್ನು ಸಂರಕ್ಷಿಸಿದ್ದೂ ಈ ಭ್ರಷ್ಟ ಪೋಷಕ. ಪಿಎಫ್‌ಐನ 175 ಗೂಂಡಾಗಳ ಮೇಲಿದ್ದ ಕೇಸುಗಳನ್ನು ವಜಾ ಮಾಡಿದ್ದೇ ಈ ಭ್ರಷ್ಟ ಪೋಷಕ. 1,700 ಪಿಎಫ್ಐ ಪ್ರಕರಣಗಳನ್ನು ಹಿಂಪಡೆದದ್ದು ಈ ಭ್ರಷ್ಟ ಪೋಷಕ’ನೆಂದು ಟೀಕಿಸಿದೆ.

ಮುಂದುವರೆದು ‘ಹೈಕಮಾಂಡ್‌ಗೆ 1,000 ಕೋಟಿ ರೂ. ಕಪ್ಪ ಸಾಗಿಸಿದ ಎಂಎಲ್‍ಸಿ ಗೋವಿಂದರಾಜು ಅವರನ್ನು ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ. ಕಡಕ್ ಅಧಿಕಾರಿ ಅನುರಾಗ್ ತಿವಾರಿ ಮತ್ತು ಗಣಪತಿ ಅವರನ್ನು ಸಾವಿಗೆ ತಳ್ಳಿ ಕುಚುಕು ಗೆಳೆಯ ಕೆ.ಜೆ.ಜಾರ್ಜ್ ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ. ಇಜಿಎಲ್ ಅಕ್ರಮದಲ್ಲಿ ಕೆ.ಜೆ.ಜಾರ್ಜ್‌ಗೆ ದಡ ಮುಟ್ಟಿಸಿದ್ದೂ ಈ ಭ್ರಷ್ಟ ಪೋಷಕರೇ’ ಅಂತಾ ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ದಪ್ಪ ಚರ್ಮದ ಸರ್ಕಾರದ ವಿರುದ್ಧ ಜನರೇ ದಂಗೆ ಹೇಳುವ ಕಾಲ ದೂರವಿಲ್ಲ: ಬಿ.ವೈ.ವಿಜಯೇಂದ್ರ

‘ಕಾಂಗ್ರೆಸ್ ಪಕ್ಷ ಒಂದು ಭ್ರಷ್ಟರ ಕೂಪ, ಇವರ ಹೈಕಮಾಂಡೇ ಮುಖ್ಯ ಅತಿಥಿ. ಹಾಗಾಗಿ, ಸಿಎಂ ಸಿದ್ದರಾಮಯ್ಯರವರಿಗೆ ಭ್ರಷ್ಟರ ಸಂಕುಲ ವಿಸ್ತರಣೆ ಪರಮ ಕರ್ತವ್ಯವೂ, ಕಲ್ಯಾಣಕಾರಿಯೂ ಆಗಿರುವುದು ನಾಡಿನ ದುರಂತ’ವೆಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News