ಬೆಂಗಳೂರು: ರಾಜಕೀಯ ಕಾರಣಗಳಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು (Karnataka Bandh) ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈ ಬಂದ್ ನಡೆಯುತ್ತಿದೆ.
ರಾಜ್ಯ ಸರ್ಕಾರ ಬಂದ್‌ಗೆ ಯಾವುದೇ ಅವಕಾಶ ನೀಡುವುದಿಲ್ಲ. ಆದೇಶ ಮೀರಿ ಪ್ರತಿಭಟಿಸಿದರೆ, ಒತ್ತಡ ಹೇರಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ. ಸರ್ಕಾರದ ಎಚ್ಚರಿಕೆಗೆ ಮಣಿಯದ ಕನ್ನಡಪರ ಹೋರಾಟಗಾರರು ಬಂದ್ ಯಶಸ್ವಿಗೊಳಿಸುತ್ತೇವೆ ಎಂದಿದ್ದಾರೆ.
ಬಸವ ಕಲ್ಯಾಣ ಉಪ ಚುನಾವಣೆ ಗೆಲ್ಲಲು ರಾಜ್ಯ ಸರ್ಕಾರ ಇತ್ತೀಚೆಗೆ ಮರಾಠ ಅಭಿವೃದ್ದಿ ನಿಗಮ ರಚನೆ ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿವಿಧ ಕನ್ನಡಪರ ಸಂಘಟನೆಗಳು ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಹೇಳಿದ್ದವು. ಆದೇಶ ಹಿಂಪಡೆಯಲು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ (Vatal Nagaraj) ನವೆಂಬರ್ 30ರವರೆಗೆ ಗಡುವು ಕೊಟ್ಟಿದ್ದರು. ಸರ್ಕಾರ ಮರಾಠ ಅಭಿವೃದ್ದಿ ನಿಗಮ ರಚನೆ ಹಿಂಪಡೆಯದ ಕಾರಣ ಇಂದು ಕರ್ನಾಟಕ ಬಂದ್ ಮಾಡಲಾಗುತ್ತಿದೆ.
ಕನ್ನಡ ಪರ ಸಂಘಟನೆಗಳ ಬಂದ್‌ಗೆ ಅವಕಾಶ ಇಲ್ಲ: ಯಡಿಯೂರಪ್ಪ
ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವೆ. ಕನ್ನಡ ರಕ್ಷಣಾ ವೇದಿಕೆ ಸೇರಿ 50ಕ್ಕೂ ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿವೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಬಂದ್‌ಗೆ ಬೆಂಬಲ ಸೂಚಿಸಿವೆ. ಆಟೋ ಮತ್ತು ಟ್ಯಾಕ್ಸಿ ಮಾಲೀಕರ ಸಂಘ ಬೆಂಬಲ ಸೂಚಿಸಿದೆ. ಉಳಿದಂತೆ ಬಹುತೇಕ ಸಂಘ-ಸಂಸ್ಥೆಗಳು ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿವೆ. ಇಂದಿನ ಬಂದ್ ವೇಳೆ ಸಹಜವಾಗಿ ಸಾರ್ವಜನಿಕರಿಗೆ ಕೆಲವು ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ಯಾವ ಸೌಕರ್ಯಗಳಿರುತ್ತವೆ? ಏನೆಲ್ಲಾ ಸಮಸ್ಯೆ ಇರುತ್ತೆ ಎಂಬ ವಿವರ ನೀಡಲಾಗಿದೆ.
ಸಂಚಾರ ವ್ಯವಸ್ಥೆ ಇರುತ್ತೋ? ಇಲ್ಲವೋ?
ಬಂದ್ ವೇಳೆ ಬಹಳ ಮುಖ್ಯವಾಗಿ ಕಾಡುವುದು ಸಂಚಾರ ವ್ಯವಸ್ಥೆ. ಹಾಗಾಗಿ ಕರ್ನಾಟಕ ಬಂದ್ ವೇಳೆ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಿರುವುದಿಲ್ಲ ಎಂದು ಹೇಳಿದ್ದರು. ಪ್ರತಿಭಟನೆಗೆ ಹೆದರಿ ಬಸ್ ಸಂಚಾರಕ್ಕೆ ಎಡೆ ಮಾಡಿಕೊಡುವುದು ಕಷ್ಟವಾಗಲಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅವರು ಕೂಡ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ತಿಳಿಸಿದ್ದಾರೆ.
ಬೆಂಗಳೂರು ನಮ್ಮ ಮೆಟ್ರೋ (Namma Metro) ಮಾತ್ರ ಎಂದಿನಂತೆ ಬೆಳಿಗ್ಗೆ 7 ಗಂಟೆಯಿಂದಲೇ ಕಾರ್ಯ ನಿರ್ವಹಿಸುತ್ತಿದೆ.
ಓಲಾ, ಉಬರ್ (UBER) ಚಾಲಕರ ಸಂಘವು ಬೆಂಬಲ ನೀಡಿರುವುದರಿಂದ ಆಟೋ, ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸರ್ಕಾರಿ ಕಚೇರಿಗಳು ಇರುತ್ತವೆಯೋ? ಇರುವುದಿಲ್ಲವೋ?
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಬರುತ್ತಿದೆ, ಮುಂದಿನ 45 ದಿನ ಹುಷಾರಾಗಿರಬೇಕು!
ಕೈತುಂಬ ಸಂಬಳ ಪಡೆದರೂ ಸಣ್ಣ ಸಣ್ಣ ಕಾರಣಕ್ಕೂ ರಜೆಯನ್ನು ನಿರೀಕ್ಷಿಸುವ ಸರ್ಕಾರಿ ನೌಕರರಿಗೆ ಕಹಿ ಸುದ್ದಿ. ಬಂದ್ ಇದ್ದರೂ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಬೇಕು.
ಹೊಟೆಲ್ ಇರುತ್ತೆ:
ಬೀದಿ ಬದಿಯ ವ್ಯಾಪಾರಿಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿವೆ. ಆದುದರಿಂದ ಕೆಲ ಪದಾರ್ಥಗಳ ವಿಷಯದಲ್ಲಿ ಸಮಸ್ಯೆಗಳಾಗಬಹುದು. ಆದರೆ ಹೋಟೆಲ್ ಮಾಲೀಕರ ಸಂಘವು ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿರುವುದರಿಂದ ಹೋಟೆಲ್ಗಳು ತೆರೆದಿರುತ್ತವೆ.