ದೆಹಲಿಯಲ್ಲಿ ಕನ್ನಡಿಗ ಯುಪಿಎಸ್ಸಿ ಅಭ್ಯರ್ಥಿ ಆತ್ಮಹತ್ಯೆ

    

Last Updated : Jun 4, 2018, 07:41 PM IST
ದೆಹಲಿಯಲ್ಲಿ ಕನ್ನಡಿಗ ಯುಪಿಎಸ್ಸಿ ಅಭ್ಯರ್ಥಿ ಆತ್ಮಹತ್ಯೆ title=

ನವದೆಹಲಿ: ದೆಹಲಿಯಲ್ಲಿ ಯುಪಿಎಸ್ಸಿ ಅಭ್ಯರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ವರುಣ ಚಂದ್ರ(28) ಎಂದು ಹೇಳಲಾಗಿದ್ದು, ಮೂಲತಃ ಕಾರವಾರ ಜಿಲ್ಲೆಯ ಕುಮುಟಾದವರು ಎಂದು ತಿಳಿದುಬಂದಿದೆ.

ಭಾನುವಾರದಂದು ಪಹಾಡ್ ಗಂಜ್ ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಯುಪಿಎಸ್ಸಿ ಪೂರ್ವ ಪರೀಕ್ಷೆ ಬರೆಯಬೇಕಿದ್ದ ವರುಣ ಚಂದ್ರ, ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪದ ಕಾರಣ ಅವನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿಲಾಗಿತ್ತು. ಇದರಿಂದ ಪರೀಕ್ಷೆ ತಪ್ಪಿಸಿಕೊಂಡ ಹಿನ್ನಲೆಯಲ್ಲಿ ಮನನೊಂದು ನ್ಯೂ ರಾಜೇಂದ್ರ ನಗರದಲ್ಲಿರುವ ತನ್ನ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಬಾರಿ ಕೇಂದ್ರ ಲೋಕಸೇವಾ ಆಯೋಗವು 782 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಈ ನಾಗರೀಕ ಸೇವಾ ಪರೀಕ್ಷೆಯಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ, ಹಾಗೂ ಸಂದರ್ಶನದ ಮೂರು ಹಂತಗಳ ಮೂಲಕ ಅಂತಿಮವಾಗಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

Trending News