ದುರಂತ ಅಂತ್ಯ ಕಂಡು; ಪಂಚಭೂತಗಳಲ್ಲಿ ಲೀನವಾದ ಜೈನ ಮುನಿ

Jain Muni Murder : ಹಂತಕರಿಂದ ಹತ್ಯೆಗೀಡಾದ ಹಿರೇಕೋಡಿಯ ಕಾಮಕುಮಾರ ಮಹಾರಾಜರ ಮರಣೊತ್ತರ ಪರೀಕ್ಷೆಗಾಗಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ರವಾನಿಸಲಾಗಿತ್ತು‌. ಮರಣೋತ್ತರ ಪರೀಕ್ಷೆಯ ಬಳಿಕ ಹಿರೆಕೋಡಿಗೆ ಪಾರ್ಥಿವ ಶರೀರವನ್ನು ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು. ಆಶ್ರಮದಲ್ಲಿ ಮಹಿಳೆಯರು ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯಗಳು ಎಂಥವರ ಮನಸನ್ನೂ ಕಲಕುಂವಂತಿತ್ತು.  

Written by - Savita M B | Last Updated : Jul 9, 2023, 04:15 PM IST
  • ಹಂತಕರಿಂದ ಬಿಭತ್ಸವಾಗಿ ಹತ್ಯೆಗೀಡಾಗಿದ್ದ ಚಿಕ್ಕೋಡಿಯ ಹಿರೇಮಠದ ಶ್ರೀ ಕಾಮಕುಮಾರ ಸ್ವಾಮೀಜಿಗಳ ಅಂತ್ಯ ಸಂಸ್ಕಾರ
  • ಜೈನ ಸಂಪ್ರದಾಯಂತೆ ನಡೆದ ಅಂತ್ಯ ಸಂಸ್ಕಾರ
  • ಅಂತ್ಯಕ್ರಿಯ ನಂತರ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಮಾತನಾಡಿದ್ದಾರೆ
ದುರಂತ ಅಂತ್ಯ ಕಂಡು; ಪಂಚಭೂತಗಳಲ್ಲಿ ಲೀನವಾದ ಜೈನ ಮುನಿ title=

Belagavi : ಹಂತಕರಿಂದ ಬಿಭತ್ಸವಾಗಿ ಹತ್ಯೆಗೀಡಾಗಿದ್ದ ಚಿಕ್ಕೋಡಿಯ ಹಿರೇಮಠದ ಶ್ರೀ ಕಾಮಕುಮಾರ ಸ್ವಾಮೀಜಿಗಳ ಅಂತ್ಯ ಸಂಸ್ಕಾರವನ್ನು ಇಂದು ಹಿರೆಕೋಡಿಯ ಅವರ ಆಶ್ರಮದಲ್ಲಿ ಮಡೆಸಲಾಯ್ತು. ಜೀನಸೇನ ಭಟ್ಟಾಚಾರ್ಯ ಸ್ವಾಮೀಜಿ, ಹಾಗೂ ಧರ್ಮಸೇನ ಭಟ್ಟಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನವನ್ನು ನಡೆಸಲಾಯ್ತು.

 ಜೈನ ಸಂಪ್ರದಾಯಂತೆ ನಡೆದ ಅಂತ್ಯ ಸಂಸ್ಕಾರದಲ್ಲಿ ಹಿರೆಕೋಡಿ ಸೇರಿದಂತೆ ಅಥಣಿ ಹಾಗೂ ಮಹಾರಾಷ್ಟ್ರ ಭಾಗದ ಭಕ್ತರು ಸ್ವಾಮೀಜಿಗಳ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬರೂ ಸಹ ಕಣ್ಣಲ್ಲಿ ನೀರು ತುಂಬಿಕೊಂಡು ಸ್ವಾಮೀಜಿಗಳಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಜಿನಸೇನ ಭಟ್ಟಾಚಾರ್ಯ ಸ್ವಾಮೀಜಿ ಹಾಗೂ ಧರ್ಮಸೇನ ಭಟ್ಟಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಜೈನ ಸಂಪ್ರದಾಯದ ಪ್ರಕಾರ ಅಂತಿಮ ವಿಧಿ ವಿಧಾನಗಳು ನಡೆದವು. 

ಇದನ್ನೂ ಓದಿ-ಕಲಘಟಗಿ ಮಾಜಿ ಶಾಸಕ ಸಿ.ಎಂ‌.ನಿಂಬಣ್ಣವರ ನಿಧನ

ಅಂತ್ಯಕ್ರಿಯ ನಂತರ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಮಾತನಾಡಿ, ಜೈನ ಧರ್ಮದಲ್ಲಿ ಅದ್ಭುತವಾದ ಸೂರ್ಯ ಒಂದು ಹಸ್ತವಾಗಿದೆ, ಕಾಮಕುಮಾರನಂದಿ ಸ್ವಾಮೀಜಿಯವರ ಅಂತ್ಯಕ್ರಿಯ ಸಂಪನ್ನವಾಗಿದೆ, ಈ ಹತ್ಯೇಯನ್ನು ಖಂಡಿಸಿ ನಾವು ನಾಳೆ ಚಿಕ್ಕೋಡಿ ಆರ್ಡಿಪಿ ಕಾಲೇಜಿನಿಂದ ೧೦ ಗಂಟೆಗೆ ಶಾಂತಿಯುತವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಸಮುದಾಯದ ಎಲ್ಲ ಶ್ರಾವಕ ಶ್ರಾವಕಿಯರು ಬರುವಂತೆ ಕರೆ ನೀಡಿದರು. 

ಇನ್ನು ಬೆಳಗಾವಿಯಲ್ಲಿ ಮರಣೊತ್ತರ ಪರೀಕ್ಷೆಯ ಬಳಿಕ  ಪಾರ್ಥಿವ ಶರೀರಕ್ಕೆ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರ ಹಿರೆಕೋಡಿ ಗ್ರಾಮಕ್ಕೆ ಬರುವುದಕ್ಕೂ ಮೊದಲು ಆಶ್ರಮಕ್ಕೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿದರು. ಅಂತ್ಯ ಸಂಸ್ಕಾರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭಾಗಿಯಾಗಿ ಮುನಿಗಳ ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ-ಹಳ್ಳಿಕಾರ್ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿಸಲು ಸಿಎಂ ಜತೆ ಚರ್ಚೆ: ಸಚಿವ ಶಿವರಾಜ್ ತಂಗಡಗಿ

ಅಲ್ಲದೆ ಮುನಿಗಳ ಕೊಲೆ ಪ್ರಕರಣವನ್ನು ಖಂಡಿಸಿದ ಡಿಸಿಎಂ ಸವದಿ ಮನುಷ್ಯ ಕುಲವೇ ಬೆಚ್ಚಿ ಬೀಳುವ ಘಟನೆ ಇದಾಗಿದ್ದು ಸದನದಲ್ಲಿ ಈ ಕುರಿತು ‌ಪ್ರಸ್ತಾಪ‌ ಮಾಡ್ತಿನಿ ಸರ್ಕಾರದ ವತಿಯಿಂದ ಮಹಾ ಮುನಿಗಳ ಮಹಾತ್ಮರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯನ್ನೂ ಸಹ ಕೊಡ್ತಿನಿ ಎಂದರು.. 

ಇನ್ನೂ ಶ್ರೀಗಳ ಅಣ್ಣನ ಮಗ ಹಾಗೂ ಆಶ್ರಮದ ಟ್ರಸ್ಟಿ ಭೀಮಗೊಂಡ ಉಗಾರೆ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.‌ಜಗತ್ತಿಗೆ ಶಾಂತಿ ಸಂದೇಶ ಸಾರುತ್ತ ಸರ್ವಸಂಗವನ್ನೂ ಸಹ ಪರಿತ್ಯಾಗ ಮಾಡಿ ಸಮಾಜಕ್ಕೋಸ್ಕರ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿದ್ದ ಕಾಮಕುಮಾರ ಮುನಿಗಳು ಹೀಗೆ ಧಾರುವಾಗಿ ಅಂತ್ಯ ಕಂಡಿದ್ದು ದುರ್ದೈವವೇ ಸರಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News