ರಾಜ್ಯದಲ್ಲಿ ಲಾಕ್‌ಡೌನ್ ಮಾಡಬೇಕೋ? ಬೇಡವೋ? ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

COVID 19 ನಿಯಂತ್ರಣಕ್ಕೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ.

Last Updated : Jul 9, 2020, 08:30 AM IST
ರಾಜ್ಯದಲ್ಲಿ  ಲಾಕ್‌ಡೌನ್ ಮಾಡಬೇಕೋ? ಬೇಡವೋ?  ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ title=

ಬೆಂಗಳೂರು: ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ COVID 19 ತಡೆಗಟ್ಟಲು  ಲಾಕ್‌ಡೌನ್ (Lockdown)  ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇಂದು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಲಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖವಾಗಿ  ಲಾಕ್‌ಡೌನ್ ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಚರ್ಚೆಯಾಗಲಿದೆ. ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸುವ ಬಗ್ಗೆ ಹಾಗೂ  ಕರೋನವೈರಸ್ (Coronavirus) COVID 19 ನಿಯಂತ್ರಣಕ್ಕೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಕೂಡ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ.

  ಕೋವಿಡ್ -19 (COVID-19)  ವಿರುದ್ಧದ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಸಿದ್ದಗೊಳ್ಳಬೇಕಿರುವುದರಿಂದ ಇಂದಿನ‌ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಇಲಾಖೆಯಡಿ ಜಿಲ್ಲಾ, ತಾಲೂಕು, ಸಮುದಾಯ ಆಸ್ಪತ್ರೆಗಳಲ್ಲಿ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿಗಳು, ಮೆಡಿಕಲ್ ಗ್ಯಾಸ್ ಪೈಪ್‌ಲೈನ್ ಅಳವಡಿಕೆ, ಹೈ ಫ್ಲೋ ಆಕ್ಸಿಜನ್ ಸಿಸ್ಟಮ್ ಅಳವಡಿಸಲು ಆಡಳಿತಾತ್ಮಕ ಅನುಮೋದನೆ ಸಾಧ್ಯತೆ ಇದೆ.

ವಿದ್ಯುತ್ ಖರೀದಿ ಬಾಕಿ ತೀರಿಸಲು ESCOMsಗೆ ಬಡ್ಡಿ ರಹಿತ‌ 2500 ಕೋಟಿ ರೂಪಾಯಿ ಸಾಲ ಪಡೆಯಲು ಅನುಮೋದನೆ ನೀಡುವ ಸಾಧ್ಯತೆ ಇದೆ. ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗೆ 2 ಹಂತದಲ್ಲಿ 220 ಕೋಟಿ ಬಿಡುಗಡೆಗೆ ಅನುಮೋದನೆ ನೀಡುವ ಸಂಭವ ಇದೆ.

ಹೊಸ ಕೈಗಾರಿಕಾ ನೀತಿ 2020-25ಕ್ಕೆ ಅನುಮೋದನೆ ನೀಡುವ ಸಂಭವ ಇದೆ. ಈ- ಪ್ರೊಕ್ಯೂರ್‌ಮೆಂಟ್ 2.0 ಯೋಜನೆ ಜಾರಿ ಮತ್ತು ಅಭಿವೃದ್ಧಿಗೆ 184 ಕೋಟಿ ಬಿಡುಗಡೆ ಸಾಧ್ಯತೆ ಇದೆ. ಕರ್ನಾಟಕ ಕ್ಯಾಂಡಸ್ಟ್ರಯಲ್ ನಕ್ಷೆಯಲ್ಲಿ ಹಿಸ್ಸಾ ಮತ್ತು ಬೌಂಡರಿ ಸೇರಿಸಿ ಅಪ್ಡೇಟ್ ಮಾಡಲು 28 ಕೋಟಿ ರೂಪಾಯಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Trending News