ಕಲಿಯುಗದ ನಡೆದಾಡುವ ದೇವರ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ- ಹೆಚ್.ಡಿ. ಡಿ

ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಈ ಜಗತ್ತು ಕಂಡ ಜ್ಞಾನ ಭಂಡಾರ 

Last Updated : Jan 21, 2019, 03:24 PM IST
ಕಲಿಯುಗದ ನಡೆದಾಡುವ ದೇವರ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ- ಹೆಚ್.ಡಿ. ಡಿ title=

ಬೆಂಗಳೂರು: ಶತಮಾನದ ಸಂತ ತ್ರಿವಿಧ ದಾಸೋಹಿ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಅವರು ಬಸವಣ್ಣನವರ ಕಾಯಕವೇ ಕೈಲಾಸ ಹಾಗೂ ನಿತ್ಯ ದಾಸೋಹದ ಕೈಂಕರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಶಿವನನ್ನು ಕಂಡವರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಕಲಿಯುಗದ ನಡೆದಾಡುವ ದೇವರ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ. ಶ್ರೀಗಳು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರು ಶ್ರೀ ಗಳ ಸಾನಿಧ್ಯದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಈ ದಿನ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. 

ಕಾಯಕ ಯೋಗಿ ಶ್ರೀ ಶ್ರೀ  ಶಿವಕುಮಾರ ಸ್ವಾಮಿ ಗಳು ಈ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಮತ್ತು ಶ್ರೀಗಳ ಆದರ್ಶ ನಮ್ಮೊಡನೆ ಎಂದೆದಿಗೂ ಅಜರಾಮರವಾಗಿರುತ್ತದೆ ಎಂದು ಹೆಚ್.ಡಿ. ಡಿ ಹೇಳಿದ್ದಾರೆ.

ಶ್ರೀಗಳು ಜನಿಸಿದ ಈ ಪುಣ್ಯಭೂಮಿಯಲ್ಲಿ ನಾವೆಲ್ಲ ಜನಿಸಿರುವುದೇ ನಮ್ಮ ಅದೃಷ್ಠ ಎಂದಿರುವ ದೇವೇಗೌಡರು, ಶ್ರೀಗಳು ಹಾಕಿಕೊಟ್ಟಿರುವ ಮಾರ್ಗದರ್ಶನ ದಲ್ಲಿ ನಾವೆಲ್ಲ ಮುಂದೆ ಸಾಗಬೇಕಾಗಿದೆ. ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಶಿವಕುಮಾರ ಸ್ವಾಮಿಗಳ ಆಶಿರ್ವಾದ ಈ ಜಗತ್ತಿಗೆ ಸದಾಕಾಲ ಇರುತ್ತದೆ ಎಂದು ತಿಳಿಸಿದ್ದಾರೆ.

Trending News