Bangalore Crime : ಪತ್ನಿಯ ಅಶ್ಲೀಲ ವಿಡಿಯೋ ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಪತಿ!

ದಂಪತಿ ಏಕಾಂತದಲ್ಲಿದ್ದಾಗ ಸೆರೆಹಿಡಿದ ಅಶ್ಲೀಲ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದು, ಸಧ್ಯ ವೈಯ್ಯಲಿಕಾವಾಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Written by - Channabasava A Kashinakunti | Last Updated : Jan 17, 2022, 07:27 PM IST
  • ಡ್ರಗ್ಸ್ ಖರೀದಿಸಲು ಹಣವಿಲ್ಲದ ಕಾರಣ ಪತ್ನಿಯ ಅಶ್ಲೀಲ ವಿಡಿಯೋ ಸೆರೆಹಿಡಿದ ಪತಿ
  • ವೈಯ್ಯಲಿಕಾವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
  • ನೊಂದ ಪತ್ನಿ ಈ ಮೊದಲು ಠಾಣೆಯ ಮೆಟ್ಟಿಲೇರಿದ್ದಾಳೆ
Bangalore Crime : ಪತ್ನಿಯ ಅಶ್ಲೀಲ ವಿಡಿಯೋ ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಪತಿ! title=

ಬೆಂಗಳೂರು : ಡ್ರಗ್ಸ್ ಖರೀದಿಸಲು ಹಣವಿಲ್ಲದ ಕಾರಣ ಪತಿಯೇ ಪತ್ನಿಯ ಅಶ್ಲೀಲ ವಿಡಿಯೋ ಸೆರೆಹಿಡಿದು, ವರದಕ್ಷಿಣೆ ಕಿರುಕುಳ ನೀಡಿರುವ ಘಟನೆ ವೈಯ್ಯಲಿಕಾವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ದಂಪತಿ ಏಕಾಂತದಲ್ಲಿದ್ದಾಗ ಸೆರೆಹಿಡಿದ ಅಶ್ಲೀಲ ವಿಡಿಯೋ(Privite video), ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದು, ಸಧ್ಯ ವೈಯ್ಯಲಿಕಾವಾಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ : ಮೆಕ್ಯಾನಿಕ್ ಕರೆತರುವಷ್ಟರಲ್ಲಿ ಮಿಂಚಿನಂತೆ ಬೈಕ್ ಕಳ್ಳತನ: ಆರೋಪಿಯ ಬಂಧನ

ನಗರದ ಮಲ್ಲೇಶ್ವರದ ನಿವಾಸಿ ಆಗಿರುವ 24 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ 27 ವರ್ಷದ ಚಿಕ್ಕಮಗಳೂರಿನ ನಿವಾಸಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2021 ರಲ್ಲಿ ಈಕೆಯನ್ನು ನಾಗಸೋಮೇಶ್(Husband), ವಿವಾಹವಾಗಿದ್ದ. ಮದುವೆಯಾದ ಕೆಲವೇ ದಿನಗಳಲ್ಲೇ ಪತಿ ಕುಡಿದು ಬಂದು ಕಿರುಕುಳ ನೀಡಲು ಪ್ರಾರಂಭಿಸಿದ. ಕುಡಿಯುವುದರ ಜತೆಗೆ ಡ್ರಗ್ಸ್ ವ್ಯಸನಿ ಹಾಗೂ ಅನೈತಿಕ ಸಂಬಂಧಗಳ ಬಗ್ಗೆ ಪತ್ನಿಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಪತ್ನಿಗೂ ಡ್ರಗ್ಸ್ ಸೇವಿಸುವಂತೆ ಒತ್ತಾಯ ಮಾಡುತ್ತಿದ್ದ ಎಂದು ದೂರಿನಲ್ಲಿ ಪತ್ನಿ ಪೊಲೀಸರಿಗೆ ಹೇಳಿದ್ದಾರೆ.

ನಾಗಸೋಮೇಶ್ ಗೆ ಡ್ರಗ್ಸ್ ಖರೀದಿಸಲು ಹಣದ ಕೊರತೆ ಎದುರಾದಾಗ, ವರದಕ್ಷಿಣೆ ತರುವಂತೆ ಪತ್ನಿಗೆ ಹಲ್ಲೆ ಎಸೆದಿದ್ದ. ಏಕಾಂತದಲ್ಲಿರುವ ಸಮಯದಲ್ಲಿ ಪತ್ನಿಯ ಗಮನಕ್ಕೆ ಬಾರದಂತೆ ಇಬ್ಬರ ನಡುವಿನ ಅಶ್ಲೀಲ ವಿಡಿಯೋ, ಫೋಟೊಗಳನ್ನು ಆರೋಪಿ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ ಎಂದು ದೂರಿನ ಸಾರಾಂಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಗ್ಯಾಸ್ ಗೀಜರ್​ನಿಂದ ಅನಿಲ ಸೋರಿಕೆ: ಉಸಿರುಗಟ್ಟಿ ತಾಯಿ, ಮಗಳು ಸಾವು

ವಿಡಿಯೋ ಬಗ್ಗೆ ಪತ್ನಿ(Wife) ಗಮನಕ್ಕೆ ಬಂದು ಅದನ್ನು ಡಿಲಿಟ್ ಮಾಡಲು, ಪತಿಯ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದಾಗ, ಅದರಲ್ಲಿ ದೂರುದಾರ ಮಹಿಳೆಯ ಹಲವು ಅಶ್ಲೀಲ ವಿಡಿಯೋಗಳು ಇರುವುದು ಕಂಡು ಬಂದಿತ್ತು. ನೊಂದ ಪತ್ನಿ ಈ ಮೊದಲು ಠಾಣೆಯ ಮೆಟ್ಟಿಲೇರಿದಾಗ, ಮಧ್ಯ ಪ್ರವೇಶಿಸಿ ಇಬ್ಬರ ನಡುವೆ ರಾಜಿ ಸಂದಾನ ಮಾಡಿದ್ದೆವು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News