Ugadi 2023: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ... 

Ugadi Festival Special: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆ ಸವಿ ಕ್ಷಣಕ್ಕೆ ಸಾಕ್ಷಿಯಾಗಿದೆ. 

Written by - Zee Kannada News Desk | Last Updated : Mar 22, 2023, 01:32 PM IST
  • ಯುಗಾದಿ ಎಂದರೆ ವರ್ಷದ ಆರಂಭ
  • ಹೊಸ ವರುಷಕೆ ಹರುಷ ತಂದ ಯುಗಾದಿ
  • ವಸಂತಕಾಲದ ಆರಂಭ ಹವಾಮಾನವನ್ನು ಸೂಚಿಸುವ ಹಬ್ಬ
Ugadi 2023: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ...  title=

Ugadi Festival Special: ಯುಗಾದಿಯನ್ನು ಹಿಂದೂಗಳ ಹೊಸ ವರ್ಷವೆಂದು ಕರೆಯಲಾಗುತ್ತದೆ. ಯುಗಾದಿಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ.ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆ ಸವಿ ಕ್ಷಣಕ್ಕೆ ಸಾಕ್ಷಿಯಾಗಿದೆ. 

ಸೂರ್ಯ- ಚಂದ್ರನ ಚಲನೆಯ ಆಧಾರದ ಮೇಲೆ ಕರಾವಳಿ ಭಾಗದ ಕರ್ನಾಟಕದವರು ಚಾಂದ್ರಮಾನ ಹಾಗೂ ತಮಿಳುನಾಡು, ಕೇರಳ  ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಅಂತೆಯೇ ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಢಿಪಾಡವಾ ಎಂಬ ಹೆಸರಿನಲ್ಲಿ ಪ್ರತಿಯೊಂದು ಮನೆಗಳ ಮುಂದೆಯೂ ಗುಢಿ (ರೇಷ್ಮೆಯ ಧ್ವಜ ಅಥವಾ ಬಟ್ಟೆ)ಯನ್ನು ಒಂದು ಕೋಲಿನ ತುದಿಗೆ ಕಟ್ಟಿ ಮನೆಯ ಮುಂದೆ ನಿಲ್ಲಿಸುವ ಪದ್ದತಿ ಇದೆ.

ಇದನ್ನೂ ಓದಿ: ರೈತರಲ್ಲಿ ಹೊನ್ನೇರು ಸಂಭ್ರಮ... ಯುಗಾದಿ ದಿನದಂದು ಕೃಷಿ ಚಟುವಟಿಕೆ ಆರಂಭ

ಯುಗಾದಿ ಇತಿಹಾಸ
ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮ ದೇವರು ಯುಗಾದಿಯಂದು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು ಎನ್ನುವ ಉಲ್ಲೇಖವಿದೆ.
ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ - ಚೈತ್ರ ನವರಾತ್ರಿಯು ಈ ದಿನದಿಂದ ಪ್ರಾರಂಭವಾಗುತ್ತದೆ.
ಭಗವಾನ್ ಬ್ರಹ್ಮನಿಂದ ಮಾನವಕುಲದ ಸೃಷ್ಟಿಯ ಪ್ರಾರಂಭವನ್ನು ಗುರುತಿಸಲು ಯುಗಾದಿ ಎಂದು ಈ ದಿನವನ್ನು ಆಚರಿಸಲಾಗುತ್ತದೆ.
12 ನೇ ಶತಮಾನದಲ್ಲಿ, ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರು ಯುಗಾದಿಯನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನ ಎಂದು ಉಲ್ಲೇಖಿಸಿದ್ದಾರೆ.

ಯುಗಾದಿಯ ಮಹತ್ವ
ಯುಗಾದಿ ಎಂದರೆ  ವರ್ಷದ ಆರಂಭ. ಯುಗ ಎಂದರೆ ಅವಧಿ, ಮತ್ತು ಆದಿ ಎಂದರೆ ಆರಂಭ.ಯುಗಾದಿಯು ಬ್ರಹ್ಮಾಂಡವನ್ನು ಸೃಷ್ಟಿಸುವ ಭಗವಾನ್ ಬ್ರಹ್ಮನ ಶ್ರಮವನ್ನು ಸೂಚಿಸುತ್ತದೆ.ಚಳಿಯ ನಂತರ ವಸಂತಕಾಲದ ಆರಂಭ ಮತ್ತು ಸೌಮ್ಯವಾದ ಹವಾಮಾನವನ್ನು ಸೂಚಿಸುವ ಹಬ್ಬವಾಗಿದೆ.ಇದು ವಸಂತ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬವೂ ಹೌದು.

ಇದನ್ನೂ ಓದಿ:  High Prices Of Flowers: ಯುಗಾದಿ ಪ್ರಯುಕ್ತ ದುಪ್ಪಟ್ಟಾಯಿತು ಹಣ್ಣು, ಹೂ, ತರಕಾರಿಗಳ ಬೆಲೆ!

ಯುಗಾದಿಯನ್ನು ಆಚರಿಸುವುದು ಹೇಗೆ?
ಯುಗಾದಿ ಹಬ್ಬವನ್ನು ಆಚರಿಸುವ ಒಂದು ವಾರದ ಮುನ್ನವೇ ಯುಗಾದಿ ಆಚರಣೆಗೆ ಸಿದ್ಧತೆಗಳು ಆರಂಭವಾಗುತ್ತವೆ. 

ಈ ಸಂದರ್ಭದಲ್ಲಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ.

ಹಬ್ಬದ ದಿನದಂದು ಮನೆಯ ಪ್ರವೇಶದ್ವಾರಗಳನ್ನು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ.  

ಜನರು ತಮ್ಮ ಮನೆಯ ಸುತ್ತಲಿನ ಸ್ಥಳಗಳನ್ನು ಹಸುವಿನ ಸಗಣಿಯ ನೀರನ್ನು ಸಿಂಪಡಿಸಿ ಸ್ವಚ್ಛಗೊಳಿಸಿದರೆ,

ಇನ್ನೂ ಕೆಲವರು ಹಸುವಿನ ಸಗಣಿಯನ್ನು ಹಾಕಿ ಮನೆಯಂಗಳವನ್ನು ಸ್ವಚ್ಛಗೊಳಿಸುತ್ತಾರೆ. ನಂತರ ಮನೆಯನ್ನು ಹೂವುಗಳಿಂದ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ.

ತಮ್ಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.

ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ, ಎಣ್ಣೆ ಸ್ನಾನದಿಂದ ದಿನವನ್ನು ಪ್ರಾರಂಭಿಸುತ್ತಾರೆ.ಸಂಬಂಧಿಕರು ಒಟ್ಟಿಗೆ ಸೇರಿ ಈ ದಿನವನ್ನು ಸಂಭ್ರಮಿ ಸಂತಸ ಕ್ಷಣಕ್ಕೆ ಕಾರಣವಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News