ಕಾಂಗ್ರೆಸ್‌ ಹಿರಿಯ ನಾಯಕನನ್ನು ಭೇಟಿಯಾಗಿ ಜೆಡಿಎಸ್‌ಗೆ‌ ಆಹ್ವಾನ ನೀಡಿದ ಹೆಚ್ ಡಿಕೆ..!

ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ

Last Updated : Dec 7, 2020, 07:36 PM IST
  • ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ
  • ಇಬ್ರಾಹಿಂ ಗೆ ಜೆಡಿಎಸ್ ಗೆ ವಾಪಸ್ ಬರುವಂತೆ ಮನವಿ ಮಾಡಿದ ಹೆಚ್. ಡಿ. ಕುಮಾರಸ್ವಾಮಿ
  • ರಾಜ್ಯಾಧ್ಯಂತ ಪ್ರವಾಸ ಮಾಡುತ್ತೇನೆ. ಬಳಿಕ ಅಭಿಮಾನಿಗಳ ಅಭಿಪ್ರಯಾದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ- ಸಿ.ಎಂ.ಇಬ್ರಾಹಿಂ
ಕಾಂಗ್ರೆಸ್‌ ಹಿರಿಯ ನಾಯಕನನ್ನು ಭೇಟಿಯಾಗಿ ಜೆಡಿಎಸ್‌ಗೆ‌ ಆಹ್ವಾನ ನೀಡಿದ ಹೆಚ್ ಡಿಕೆ..! title=

ಬೆಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಭೇಟಿ ಮಾಡಿದ್ದಾರೆ. ಇದು ಸಧ್ಯ ರಾಜಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಿಎಂ ಇಬ್ರಾಹಿಂ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಇಬ್ರಾಹಿಂ ಗೆ ಜೆಡಿಎಸ್ ಗೆ ವಾಪಸ್ ಬರುವಂತೆ ಮನವಿ ಮಾಡಿದ್ದಾರೆ.

ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ(CM Ibrahim), ರಾಜ್ಯಾಧ್ಯಂತ ಪ್ರವಾಸ ಮಾಡುತ್ತೇನೆ. ಬಳಿಕ ಅಭಿಮಾನಿಗಳ ಅಭಿಪ್ರಯಾದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಜನತಾ ಪರಿವಾರದಲ್ಲಿದ್ದ ಸಿಎಂ ಇಬ್ರಾಹಿಂ ನಂತರ ಕಾಂಗ್ರೆಸ್ ಸೇರಿದ್ದರು. ಆದ್ರೆ, ಅದ್ಯಾಕೋ ಏನೋ ಇತ್ತೀಚೆಗೆ ಇಬ್ರಾಹಿಂ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ.

Congress: ಬೆಳಗಾವಿ ಲೋಕಸಭೆ ಬೈಎಲೆಕ್ಷನ್: ಸತೀಶ್ ಜಾರಕಿಹೊಳೆ’ಗೆ ಕಾಂಗ್ರೆಸ್ ಮಣಿ!

ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಆಹ್ವಾನ ನೀಡಿ ಜೆಡಿಎಸ್‌ಗೆ ಆಹ್ವಾನ ಮಾಡಿರುವುದಕ್ಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಜೆಡಿಎಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳನ್ನ ಸೆಳೆಯಲು ಕುಮಾರಸ್ವಾಮಿ ಅವರು ಇಬ್ರಾಹಿಂ ಮತ್ತು ಉತ್ತರ ಕರ್ನಾಟಕದ ಮತ್ತೊಬ್ಬ ಮುಸ್ಲಿಂ ನಾಯಕನಿಗೂ ಕೂಡ ಗಾಳ ಹಾಕಿದ್ದಾರೆ. ಇನ್ನು ಇಬ್ರಾಹಿಂ ಜೆಡಿಎಸ್ ಗೆ ಸೇರ್ಪಡೆ ಆಗುತ್ತಾರಾ ಎನ್ನುವುದನ್ನ ಕಾದುನೋಡಬೇಕಿದೆ.

BJP: ಸಂಪುಟ ವಿಸ್ತರಣೆ ವಿಳಂಬ: ಇಬ್ಬರು ಶಾಸಕರ ರಾಜೀನಾಮೆ ಪ್ರಸ್ತಾಪ ಕಕ್ಕಾಬಿಕ್ಕಿಯಾದ ಬಿಎಸ್‌ವೈ!

 

Trending News