ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್!

Gundu Rao's daughter Ananya Rao : ಬಡ ಮಕ್ಕಳ ನಲಿ ಕಲಿ ತಾಣ. ಚಿಣ್ಣರ ಅಂಗನವಾಡಿಗಳಿಗೆ ಚೆಂದದ ರೂಪ ನೀಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪುತ್ರಿ ಅನನ್ಯ ರಾವ್ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.‌   

Written by - Savita M B | Last Updated : Aug 23, 2023, 01:34 PM IST
  • ಗಾಂಧಿನಗರದ 85 ಅಂಗನವಾಡಿಗಳನ್ನ ಗುರುತಿಸಲಾಗಿದ್ದು, ಪ್ರತಿಯೊಂದು ಅಂಗನವಾಡಿಗಳನ್ನ ಸುವ್ಯವಸ್ಥೆಗೆ ತರಲು ನಿರ್ಧರಿಸಲಾಗಿದೆ.‌
  • ದುಸ್ಥಿಯಲ್ಲಿರುವ ಅಂಗನವಾಡಿಗಳನ್ನ ಆದ್ಯತೆಯ ಮೇರೆಗೆ ಮೊದಲು ಪುನಶ್ಚೇತನಗೊಳಿಸಲು ಯೋಜಿಸಲಾಗಿದೆ
  • ಆರ್. ಗುಂಡೂರಾವ್ ಫೌಂಡೇಶನ್ ಕಾರ್ಯಗಳನ್ನ ನೋಡಿಕೊಳ್ತಿರುವ ಅನನ್ಯ ರಾವ್
ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್!  title=

Ananya Rao : ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದಲೇ ಅಂಗನವಾಡಿಳಿಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿದ್ದಾರೆ.  ಗಾಂಧಿನಗರದ 85 ಅಂಗನವಾಡಿಗಳನ್ನ ಗುರುತಿಸಲಾಗಿದ್ದು, ಪ್ರತಿಯೊಂದು ಅಂಗನವಾಡಿಗಳನ್ನ ಸುವ್ಯವಸ್ಥೆಗೆ ತರಲು ನಿರ್ಧರಿಸಲಾಗಿದೆ.‌ ದುಸ್ಥಿಯಲ್ಲಿರುವ ಅಂಗನವಾಡಿಗಳನ್ನ ಆದ್ಯತೆಯ ಮೇರೆಗೆ ಮೊದಲು ಪುನಶ್ಚೇತನಗೊಳಿಸಲು ಯೋಜಿಸಲಾಗಿದೆ. ಅದಕ್ಕಾಗಿ ಪ್ರತಿ ಅಂಗನವಾಡಿಗೆ ತಗುಲುವ 2 ಲಕ್ಷದ ವರೆಗಿನ ವೆಚ್ಚವನ್ನ ಆರ್ ಗುಂಡೂರಾವ್ ಫೌಂಡೇಶನ್ ವತಿಯಿಂದಲೇ ಭರಿಸಲು ಅನನ್ಯ ರಾವ್ ಮುಂದಾಗಿದ್ದಾರೆ. 

ಆರ್. ಗುಂಡೂರಾವ್ ಫೌಂಡೇಶನ್ ಕಾರ್ಯಗಳನ್ನ ನೋಡಿಕೊಳ್ತಿರುವ ಅನನ್ಯ ರಾವ್, ಅಂಗನವಾಡಿಗಳಿಗೆ ಆಸರೆಯಾಗಬೇಕು ಎಂಬ ಆಲೋಚನೆಯನ್ನ ತಮ್ಮ ತಂದೆ ದಿನೇಶ್ ಗುಂಡೂರಾವ್ ಬಳಿ ವ್ಯಕ್ತಪಡಿಸಿದ್ದರು. ಅಲ್ಲದೇ ಆರ್. ಗುಂಡೂರಾವ್ ಅವರ 30 ನೇ ಪುಣ್ಯ ಸ್ಮರಣೆಯ ಅಂಗವಾಗಿ ಮಾದರಿ ಅಂಗನವಾಡಿಯನ್ನೂ ದಿನೇಶ್ ಗುಂಡೂರಾವ್ ಅವರಿಂದ ಲೋಕಾರ್ಪಣೆಗೊಳಿಸಿದ್ದಾರೆ. 

ಚಿಣ್ಣರ ಅಂಗಳ ಅಂಗನವಾಡಿಗಳು ಚೆಂದವಾಗಿರಬೇಕು. ಅಂಗನವಾಡಿಗಳು ಉತ್ತಮಗೊಂಡಷ್ಟೂ, ಮಕ್ಕಳಲ್ಲಿ ಆರಂಭದಲ್ಲಿಯೇ ಕಲಿಕಾ ಮನೋಭಾವ ಬೆಳೆಸಬಹುದು ಎಂಬ ಅಭಿಪ್ರಾಯವನ್ನ ಅನನ್ಯ ಅವರು ದಿನೇಶ್ ಗುಂಡೂರಾವ್ ಅವರ ಬಳಿ ವ್ಯಕ್ತಪಡಿಸಿದ್ದರು. 

ಅಲ್ಲದೇ ಈ ಕಾರ್ಯಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಕೂಡ ಪ್ರೇರಣೆಯಾಗಿದ್ದಾರೆ. ಸಾಮಾನ್ಯ ಶಿಕ್ಷಕ ಕುಟುಂಬದಲ್ಲಿ ಜನಿಸಿದ್ದ ಆರ್. ಗುಂಡೂರಾವ್ ಶಿಕ್ಷಣದ ವಿಚಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಅವರ ಸ್ಮರಣೆಯಲ್ಲಿ ಅಂಗನವಾಡಿಗಳಿಂದಲೇ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನ ಅವರ ಹೆಸರಿನ ಫೌಂಡೇಷನ್ ನಿಂದ ನೆರವೇರಿಸಬೇಕು ಎಂಬ ಅನನ್ಯ ಅವರ ಆಶಯಕ್ಕೆ ಸಚಿವ ದಿನೇಶ್ ಗುಂಡೂರಾವ್ ಬೆನ್ನುತಟ್ಟಿ ಬೆಂಬಲಿಸಿದ್ದಾರೆ. 

ಇದನ್ನೂ ಓದಿ-ಬಹುನಿರೀಕ್ಷಿತ ಚಂದ್ರಯಾನ -3 ಲ್ಯಾಂಡಿಂಗ್‌'ಗೆ ಕ್ಷಣಗಣನೆ ಶುರು

ಅಂಗನವಾಡಿಗಳ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುವುದರ ಜೊತೆಗೆ, ಗೋಡೆಗಳಿಗೆ ಬಣ್ಣದರ್ಪಣ, ಚೆಂದದ ಚಿತ್ತಾರಗಳನ್ನ ಬಿಡಿಸಲು ಸಲಹೆ ನೀಡಿದ್ದಾರೆ.‌ ಪ್ರತಿ ಅಂಗನವಾಡಿಗಳಿಗೂ ಅಗತ್ಯ ಪರಿಕರಗಳು, ಆಟೋಪಕರಣಗಳನ್ನ ಫೌಂಡೇಶನ್ ವತಿಯಿಂದ ನೀಡಲು ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. 

ವಿಶೇಷವಾಗಿ ಸೃಜನಾತ್ಮಕ ಗುಣಮಟ್ಟದ ಶಿಕ್ಷಣ ಅಗತ್ಯ. ಅಂಗನವಾಡಿಗಳಿಗೆ 15 ರಿಂದ 20 ಮಕ್ಕಳು ಬಂದರು, ಅವರು ಬಡ ಕುಟುಂಬಗಳಿಂದ ಬಂದವರಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಹಿಂದುಳಿಯಬಾರದು. ವಿಭಿನ್ನ ತಂತ್ರಗಳ ಮೂಲಕ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಶಿಕ್ಷಣ ಬಡ ಮಕ್ಕಳಿಗೂ ಸಿಗಬೇಕು. 

ಈ ನಿಟ್ಟಿನಲ್ಲಿ ಅಗತ್ಯ ಪಾಠೋಪಕರಣಗಳನ್ನ ನೀಡುವುದರ ಜೊತೆಗೆ, ಶಿಕ್ಷಕರಿಗೂ ತರಬೇತಿ ನೀಡುವಂತೆ ದಿನೇಶ್ ಗುಂಡೂರಾವ್ ಫೌಂಡೇಷನ್ ಗೆ ಸಲಹೆ ನೀಡಿದ್ದಾರೆ. ನೂರಿತ ತಜ್ಞರನ್ನ ಕರೆಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಗಳನ್ನೂ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲು ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಇದನ್ನೂ ಓದಿ-ಮದುವೆ ಸೀರೆ ನೋಡುವ ನೆಪ: ಲಕ್ಷ ಲಕ್ಷ ಮೌಲ್ಯದ ಸೀರೆ ಕದಿಯುತ್ತಿದ್ದ ಗ್ಯಾಂಗ್ ಅಂದರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News