BBMP : ರಾಜಕಾಲುವೆ ನುಂಗಿದ್ದವರಿಗೆ ನೀರು ಕುಡಿಸಿದ ಪಾಲಿಕೆ

BBMP : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲೆ ಮನೆ, ಕಾಂಪೌಂಡ್ ನಿರ್ಮಿಸಿದ್ದ ಭೂ ಗಳ್ಳರಿಗೆ ಪಾಲಿಕೆ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ. ರಾಜಕಾಲುವೆ ಮೇಲಿದ್ದ ಕಟ್ಟಡವನ್ನ ತೆರವು ಕಾರ್ಯಾಚರಣೆ ನಡೆಸಲಾಗಿದೆ.  

Written by - Manjunath Hosahalli | Edited by - Chetana Devarmani | Last Updated : Dec 22, 2022, 06:42 PM IST
  • ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ
  • ಕಾಂಪೌಂಡ್ ನಿರ್ಮಿಸಿದ್ದ ಭೂ ಗಳ್ಳರಿಗೆ ಪಾಲಿಕೆ ಬಿಸಿ
  • ರಾಜಕಾಲುವೆ ನುಂಗಿದ್ದವರಿಗೆ ನೀರು ಕುಡಿಸಿದ ಪಾಲಿಕೆ
BBMP : ರಾಜಕಾಲುವೆ ನುಂಗಿದ್ದವರಿಗೆ ನೀರು ಕುಡಿಸಿದ ಪಾಲಿಕೆ title=

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲೆ ಮನೆ, ಕಾಂಪೌಂಡ್ ನಿರ್ಮಿಸಿದ್ದ ಭೂ ಗಳ್ಳರಿಗೆ ಪಾಲಿಕೆ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ. ರಾಜಕಾಲುವೆ ಮೇಲಿದ್ದ ಕಟ್ಟಡವನ್ನ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಇಂದು ಮುನ್ನೇನಕೊಳಲು, ಶಾಂತಿನಿಕೇತನ ಲೇಔಟ್ ಹಾಗೂ ಎಬಿಕೆ ಹಳ್ಳಿಯಲ್ಲಿ 6 ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುನ್ನೇನಕೊಳಲು ಹಾಗೂ ಶಾಂತಿನಿಕೇತನ ಲೇಔಟ್ ನಲ್ಲಿ 30*40 ಅಡಿ ಸ್ಥಳದಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ 2 ಕಟ್ಟಡ(G + 1 ಕಟ್ಟಡಗಳು)ವನ್ನು ನೆಲಸಮಗೊಳಿಸಲಾಗಿದೆ. ಇದೇ ಸ್ಥಳದಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ 2 ಶೆಡ್ ಗಳನ್ನು ಕೂಡಾ ತೆರವುಗೊಳಿಸಲಾಗಿದೆ.

ಇದನ್ನೂ ಓದಿ : Rashmika: "ಅಪ್ಪು ಸರ್​ ಮಾತುಗಳು ನೆನಪಾಗ್ತಿವೆ" ಎಂದ ರಶ್ಮಿಕಾ ಮಂದಣ್ಣ

ಮುಂದುವರಿದು, ಅಮಾನಿ ಬೆಳ್ಳಂದೂರು ಖಾನೆ(ಎಬಿಕೆ) ಹಳ್ಳಿ ವ್ಯಾಪ್ತಿಯಲ್ಲಿ ರಾಜಕಾಲುವೆ ಮಾರ್ಗದಲ್ಲಿ ನಿರ್ಮಿಸಿದ್ದ 1 ಶೆಡ್ ಹಾಗೂ ಸುಮಾರು 60 ಮೀಟರ್ ಉದ್ದದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರರು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ ನಂತರ ಬಾಕಿ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. 

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿವರ:

ಬಿಬಿಎಂಪಿ ಮಹದೇವಪುರ ವ್ಯಾಪ್ತಿಯಲ್ಲಿ 2015-16ರಿಂದ ಇದುವರೆಗೆ ಒಟ್ಟಾರೆ 1174 ರಾಜಕಾಲುವೆ ಒತ್ತುವರಿಗಳನ್ನು ಗುರುತಿಸಲಾಗಿದೆ. ಈ ಪೈಕಿ 1032 ಒತ್ತುವರಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, 142 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದೆ. 

ಇದನ್ನೂ ಓದಿ : Sapthami Gowda: ಸಪ್ತಮಿ ಗೌಡಗೆ ಬಂತಂತೆ ಮದುವೆ ಪ್ರಪೋಸಲ್! ವರನ್ಯಾರು ಗೊತ್ತೇ?

ಮಾಹಿತಿ ಪ್ರಕಾರ 11 ಪ್ರಕರಣಗಳು ನ್ಯಾಯಾಲಯಕ್ಕೆ ಸಂಬಂಧಿಸಿದ್ದಾಗಿದೆ. ಇನ್ನುಳಿದ 131 ಒತ್ತುವರಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯವನ್ನು ನಡೆಸುತ್ತಿದ್ದು, ರಾಜಕಾಲುಚವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News