ಬೆಂಗಳೂರು: ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶದ ಸಂಪೂರ್ಣ ಚಿತ್ರಣ ಇನ್ನೇನು ಕೆಲವೇ ಗಂಟೆಗಳಲ್ಲಿ ಸಿಗಲಿದೆ.
ಮೂರು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಈ ಚುನಾವಣೆ(Election)ಯಲ್ಲಿ ಸ್ಪರ್ಧಿಸಿದ್ದು, ಸದ್ಯ ಅರ್ಧಕ್ಕಿಂತ ಹೆಚ್ಚು ಫಲಿತಾಂಶಗಳು ಪ್ರಕಟಗೊಂಡಿವೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ರಾತ್ರಿಯ ವೇಳೆಗೆ ಸಂಪೂರ್ಣ ಚಿತ್ರಣ ಸಿಗಲಿದೆ.
Of 82616 wards in GP elections on Karnataka , @BJP4Karnataka is ahead with victory in 5344 wards ( 48% ) as of now . Great going .... Congratulations @BSYBJP @nalinkateel
— B L Santhosh (@blsanthosh) December 30, 2020
ಇದುವರೆಗೆ ಸಿಕ್ಕಿರುವ ಫಲಿತಾಂಶದ ಪೈಕಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಎರಡನೆಯ ಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಮೂರನೇ ಸ್ಥಾನದಲ್ಲಿ ಜೆಡಿಎಸ್ ಇರುವುದಾಗಿ ತಿಳಿದುಬಂದಿದೆ.
S L Dharme Gowda: 'ರಾಜಕೀಯ ವ್ಯವಸ್ಥೆಯಿಂದ ಧರ್ಮೇಗೌಡರ ಆತ್ಯಹತ್ಯೆಯಲ್ಲ ಬದಲಿಗೆ ಕೊಲೆ'
ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿರುವ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ. 82616 ವಾರ್ಡ್ಗಳ ಪೈಕಿ ಬಿಜೆಪಿ ಬೆಂಬಲಿತರು ಭರ್ಜರಿ ಮುನ್ನಡೆ ಸಾಧಿಸಿದ್ದು, ಇದಾಗಲೇ 5344 ವಾರ್ಡ್ಗಳಲ್ಲಿ ಜಯಭೇರಿ ಬಾರಿಸಿರುವುದಾಗಿ ತಿಳಿಸಿದ್ದಾರೆ. ಇವರಿಗೆಲ್ಲಾ ತಮ್ಮ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
New Coronavirus Strain: ರಾಜ್ಯದ ಜನತೆಗೆ 'ಖಡಕ್ ಎಚ್ಚರಿಕೆ' ನೀಡಿದ ಸಿಎಂ ಬಿಎಸ್ ವೈ..!
ಕರೊನಾ ವೈರಸ್ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಆಗಿರುವ ಕಾರಣ, ಸ್ವಲ್ಪ ನಿಧಾನವಾಗಿ ಮತ ಎಣಿಕೆ ನಡೆಯುತ್ತಿದ್ದು, ರಾತ್ರಿಯ ವೇಳೆಗೆ ಸಂಪೂರ್ಣ ಚಿತ್ರಣ ಸಿಗಲಿದೆ.
Grama Panchayat Election: ಗ್ರಾ. ಪಂ. ಚುನಾವಣೆ: ಲಕ್ಷ್ಮಿ ಹೆಬ್ಬಾಳಕರ್ ಬಣಕ್ಕೆ ಭರ್ಜರಿ ಗೆಲುವು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.