ಗ್ರಾ .ಪಂ ಚುನಾವಣಾ ದಿನಾಂಕ ಘೋಷಣೆಗೂ ಮೊದ್ಲೇ ‘ಅಖಾಡಕ್ಕೆ ಧುಮುಕಿದ ಬಿಜೆಪಿ’

ಗ್ರಾ. ಪಂ. ಚುನಾವಣೆ ಹಿನ್ನೆಲೆಯಲ್ಲಿ 'ಗ್ರಾಮ ಸ್ವರಾಜ್ಯ ಸಮಾವೇಶ' ಎಂಬ ನೂತನ ಕಾರ್ಯಕ್ರಮ

Last Updated : Nov 26, 2020, 12:45 PM IST
  • ಗ್ರಾ. ಪಂ. ಚುನಾವಣೆ ಹಿನ್ನೆಲೆಯಲ್ಲಿ 'ಗ್ರಾಮ ಸ್ವರಾಜ್ಯ ಸಮಾವೇಶ' ಎಂಬ ನೂತನ ಕಾರ್ಯಕ್ರಮ
  • ರಾಜ್ಯದಾದ್ಯಂತ ನಾಳೆಯಿಂದ ಬಿಜೆಪಿ ಆಯೋಜನೆ
  • ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಪ್ರಚಾರದ ಅಖಾಡಕ್ಕೆ ಧುಮುಕಿದ ಬಿಜೆಪಿ
ಗ್ರಾ .ಪಂ ಚುನಾವಣಾ ದಿನಾಂಕ ಘೋಷಣೆಗೂ ಮೊದ್ಲೇ ‘ಅಖಾಡಕ್ಕೆ ಧುಮುಕಿದ ಬಿಜೆಪಿ’ title=

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ 'ಗ್ರಾಮ ಸ್ವರಾಜ್ಯ ಸಮಾವೇಶ' ಎಂಬ ನೂತನ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಾಳೆಯಿಂದ ಬಿಜೆಪಿ ಆಯೋಜನೆ ಮಾಡಿದ್ದು ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಪ್ರಚಾರದ ಅಖಾಡಕ್ಕೆ ಧುಮುಕುತ್ತಿದೆ.

ನಾಳೆ ಉಡುಪಿ, 28ರಂದು ದಕ್ಷಿಣ ಕನ್ನಡ, 29ರಂದು ಚಿಕ್ಕಬಳ್ಳಾಪುರ, 30ರಂದು ಕೋಲಾರ(Kolar), ಡಿಸೆಂಬರ್ 1ರಂದು ರಾಮನಗರ, 02 ರಂದು ಬೆಂಗಳೂರು ಗ್ರಾಮಾಂತರ ಹಾಗು ಡಿ.3ರಂದು ಬೆಂಗಳೂರು ನಗರದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಆಯೋಜಿಸಲಾಗಿದೆ.

ಶುಭ ಸುದ್ದಿ: ಬೈಕ್ ಖರೀದಿಗೆ ಸರ್ಕಾರದಿಂದ ₹ 25 ಸಾವಿರ ಸಹಾಯಧನ!

ಗ್ರಾಮ ಸ್ವರಾಜ್ಯ ಸಮಾವೇಶವನ್ನು ಯಶಸ್ವಿಗೊಳಿಸೋಣ, ಬಿಜೆಪಿ ಸಾಧನೆಗಳನ್ನು ಮನೆ-ಮನೆಗಳಿಗೆ ತಲುಪಿಸೋಣ- ಬಿಜೆಪಿ ಗೆಲ್ಲಿಸೋಣ ಎಂಬ ಕರೆಯೊಂದಿಗೆ ಪ್ರತಿ ಗ್ರಾಮವನ್ನು ತಲುಪಲು ಬಿಜೆಪಿ ಸಜ್ಜಾಗಿದೆ. ಚುನಾವಣಾ ದಿನಾಂಕ ಪ್ರಕಟವಾಗಿಲ್ಲ, ದಿನಾಂಕಕ್ಕೆ ಕಾಯದೆ ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ಘೋಷಣೆಯಾದರೂ ಸನ್ನದ್ಧವಾಗಿರಬೇಕು ಎಂದು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.

'ನನ್ನ ಜತೆ ಮುಂಬೈಗೆ ಬಂದವರೆಲ್ಲರಿಗೂ ಸಚಿವ ಸ್ಥಾನ ಖಚಿತ'

ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯದೇ ಇದ್ದರು, ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಅಖಾಡಕ್ಕೆ ಇಳಿಯಲಿರುವ ಕಾರಣ ಆಡಳಿತಾರೂಢ ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.

'ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುವುದು ಖಚಿತ'

ನಂತರದ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಸಮಾವೇಶ ನಡೆಯಲಿದ್ದು ಆಯಾ ಜಿಲ್ಲೆಯ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಮುಖಂಡರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

‘ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವವರೆಗೂ ಹೋರಾಟ ಮಾಡುತ್ತೇನೆ’

Trending News