ಸಿಲಿಕಾನ್ ಸಿಟಿಯಲ್ಲಿ ವಾಯುಮಾಲಿನ್ಯ ತಡೆಗೆ ಮುಂದಾದ ಸರ್ಕಾರ

ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳಿಗೆ ಬೀಳಲಿದೆ ಬ್ರೇಕ್...!

Last Updated : Nov 13, 2017, 12:31 PM IST
ಸಿಲಿಕಾನ್ ಸಿಟಿಯಲ್ಲಿ ವಾಯುಮಾಲಿನ್ಯ ತಡೆಗೆ ಮುಂದಾದ ಸರ್ಕಾರ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರ ರಾಜಧಾನಿಯ ನಂತರ ರಾಜ್ಯ ರಾಜಧಾನಿಯಲ್ಲಿ ವಾಯುಮಾಲಿನ್ಯದ ಭಯ ಕಾಡಲಾರಂಭಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಖಾಸಗಿ ಬಸ್ಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ.

ಸದಾ ಜನಜಂಜಾಟದಿಂದ ತುಂಬಿ ತುಳುಕುವ ಸಿಲಿಕಾನ್ ಸಿಟಿಯೂ ವಾಯುಮಾಲಿನ್ಯಕ್ಕೆ ಹೊರತಾಗಿಲ್ಲ. ಈ ನಿಟ್ಟಿನಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಲು ಮುಂದಾಗಿರುವ ಸರ್ಕಾರ ಬೆಂಗಳೂರಿನಲ್ಲಿ ಕೇವಲ ಬಿಎಂಟಿಸಿ ಬಸ್ಗಳು, ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುವ ನೂತನ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸರ್ಕಾರ ಏನಾದರೂ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದೆ ಆದಲ್ಲಿ ಬೆಂಗಳೂರಿನಲ್ಲಿ ದಿನನಿತ್ಯ ಸಂಚರಿಸುವ ನೂರಾರು ಖಾಸಗಿ ಬಸ್ಗಳಿಗೆ ಬ್ರೇಕ್ ಬೀಳಲಿದೆ.

 

 

Trending News