ನೆಚ್ಚಿನ ಶಿಕ್ಷಕನನ್ನು ಮರಳಿ ಪಡೆದ ಸರಕಾರಿ ಫ್ರೌಡ ಶಾಲೆ ಮಕ್ಕಳು!

ಕೆಲವು ಶಿಕ್ಷಕರೇ ಹಾಗೆ ತಮ್ಮ ಕಲಿಕೆಯಿಂದ ಮಕ್ಕಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುತ್ತಾರೆ, ಅಂತಹ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಿದಾಗ ಸ್ವತಃ ವಿದ್ಯಾರ್ಥಿಗಳೇ ಮುಂದೆ ನಿಂತು ಮತ್ತೆ ಆ ಶಿಕ್ಷಕರನ್ನು ತಮ್ಮ ಶಾಲೆಗೇ ಕರೆಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ‌ ಹೆಸರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

Written by - Zee Kannada News Desk | Last Updated : Sep 21, 2022, 11:16 PM IST
  • ಗಣಿತ ವಿಷಯದ ಶಿಕ್ಷಕ ಉಸ್ಮಾನ ಪಟೇಲ್ ಅವರ ವರ್ಗಾವಣೆ ಬೇಡ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದನ್ನು ಜೀ ಕನ್ನಡ ನ್ಯೂಸ್ ಬಿತ್ತರಿಸಿತ್ತು,
  • ಈ ವರದಿಯ ನಂತರ ಎಚ್ಚೆತ್ತುಕೊಂಡ ಬಿಎಲ್ಓ ಅವರು ಶಿಕ್ಷಕ ಉಸ್ಮಾನ್ ಪಟೇಲ್ ಮತ್ತೆ ಹೆಸರೂರಿನ ಸ.ಪ್ರೌಡಶಾಲೆಯಲ್ಲಿ ಭೋಧಿಸುವಂತೆ ಸೂಚನೆ ನೀಡಿದ್ದಾರೆ.
ನೆಚ್ಚಿನ ಶಿಕ್ಷಕನನ್ನು ಮರಳಿ ಪಡೆದ ಸರಕಾರಿ ಫ್ರೌಡ ಶಾಲೆ ಮಕ್ಕಳು! title=

ಹಾವೇರಿ: ಕೆಲವು ಶಿಕ್ಷಕರೇ ಹಾಗೆ ತಮ್ಮ ಕಲಿಕೆಯಿಂದ ಮಕ್ಕಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುತ್ತಾರೆ, ಅಂತಹ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಿದಾಗ ಸ್ವತಃ ವಿದ್ಯಾರ್ಥಿಗಳೇ ಮುಂದೆ ನಿಂತು ಮತ್ತೆ ಆ ಶಿಕ್ಷಕರನ್ನು ತಮ್ಮ ಶಾಲೆಗೇ ಕರೆಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ‌ ಹೆಸರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ಗಣಿತ ವಿಷಯದ ಶಿಕ್ಷಕ ಉಸ್ಮಾನ ಪಟೇಲ್ ಅವರ ವರ್ಗಾವಣೆ ಬೇಡ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದನ್ನು ಜೀ ಕನ್ನಡ ನ್ಯೂಸ್ ಬಿತ್ತರಿಸಿತ್ತು, ಈ ವರದಿಯ  ನಂತರ ಎಚ್ಚೆತ್ತುಕೊಂಡ ಬಿಎಲ್ಓ ಅವರು ಶಿಕ್ಷಕ ಉಸ್ಮಾನ್ ಪಟೇಲ್ ಮತ್ತೆ ಹೆಸರೂರಿನ ಸ.ಪ್ರೌಡಶಾಲೆಯಲ್ಲಿ ಭೋಧಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Supreme Court Verdict: ಬೆಂಗಳೂರಿನ ಈದ್ಗಾ ಮೈದಾನದಲ್ಲಿ ನಡೆಯಲ್ಲ ಗಣೇಶೋತ್ಸವ, ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಬ್ರೇಕ್

ಈ ಕುರಿತು ಪೋನ್ ಕಾಲ್ ಮೂಲಕ ಬಿಎಲ್ಓ ವಿವಿ ಶಾಲಿಮಠ ಜೀ ಕನ್ನಡ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ.ಆ ಶಿಕ್ಷಕ ವರ್ಗಾವಣೆಯಾಗಿಲ್ಲ ಅಕ್ಟೋಬರ್ ೨ ವರೆಗೆ ಸಿದ್ಧಾಪುರದ ಸ.ಪ್ರೌಡಶಾಲೆಗೆ ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.ಉಸ್ಮಾನ ಅವರಿಗೆ ಹೆಸರೂರಿನ ಸ.ಪ್ರೌ. ಶಾಲೆಗೆ ಮರಳಿ ಕಳುಹಿಸಲಾಗಿದೆಂದು ಬಿಎಲ್ ಓ‌ ದೂರವಾಣಿ ಮೂಕಲ ಜೀ ಕನ್ನಡ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News