ಕೋಲಾರ : ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ. ಪ್ರಥಮ ಪಿಯುಸಿಗೆ ಪರೀಕ್ಷೆ ಕೂಡ ನಡೆಸುತ್ತಿಲ್ಲ. ಈಗ ಪ್ರಕಟಿಸಲಾಗಿರುವಂತದ್ದು ಕೇವಲ ಅಸೈನ್ಮೆಂಟ್ ಮಾತ್ರ. ಮಕ್ಕಳ ನಿರಂತರ ಕಲಿಕೆಗೆ ಪ್ರಯತ್ನವಷ್ಟೇ. ಇದು ಫಲಿತಾಂಶಕ್ಕೆ ಮಾನದಂಡವೂ ಅಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್(S Suresh Kumar), ಪ್ರಥಮ ಪಿಯುಗೆ ಪರೀಕ್ಷೆ ನಡೆಸುತ್ತಿಲ್ಲ. ಈಗ ತಿಳಿಸಿರೋದು ಮಕ್ಕಳು ಮನೆಯಲ್ಲೇ ಇದ್ದು, 10 ದಿನ ಪಠ್ಯಪುಸ್ತಕ ನೋಡಿಯೇ ಉತ್ತರ ಬರೆದು ಕಳುಹಿಸಬಹುದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನಕ್ಕೆ ಪರಿಗಣನೆಗೆ ಮಾತ್ರ ಈಗ ನಡೆಸುತ್ತಿರುವಂತ ಅಸೈನ್ಮೆಂಟ್ ಎಂಬುದಾಗಿ ತಿಳಿಸಿದರು.
ಇದನ್ನೂ ಓದಿ : Heavy Rain in Karnataka : ನಾಳೆಯಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ : ಕೆಲ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್'
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಪ್ರಥಮ ಪಿಯುಸಿ ವಿದ್ಯಾರ್ಥಿಗಳು(1st PUC Students) ಈ ಬಗ್ಗೆ ಗೊಂದಲ ಬೇಡ. ವಿನಾಕಾರಣ ಗೊಂದಲಕ್ಕೂ ಒಳಗಾಗಬಾರದು. ಸೇತು ಬಂಧದ ಮಾದರಿಯಲ್ಲಿ ಮನೆಯಲ್ಲೇ ಕುಳಿತು ಕಲಿಕೆ ಮುಂದುವರಿಸಲು ಈ ಪ್ರಯತ್ನ ಅಷ್ಟೇ ಆಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ ಲೋಕಾರ್ಪಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.