ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ವಾಹನಗಳ ಗಾಜು ಪುಡಿಪುಡಿ

ಮನೆ ಮುಂದೆ ನಿಲ್ಲಿಸಿದ್ದ ಕಾರು, ಆಟೋ, ಟಾಟಾಯಸ್ ಸೇರಿದಂತೆ 40 ವಾಹನಗಳ  ಗಾಜುಗಳನ್ನು ಪುಡಿಪುಡಿ ಮಾಡಿ ಪರಾರಿಯಾದ ಕಿಡಿಗೇಡಿಗಳು.

Last Updated : Nov 9, 2017, 10:14 AM IST
ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ವಾಹನಗಳ ಗಾಜು ಪುಡಿಪುಡಿ title=
ಸಾಂದರ್ಭಿಕ ಚಿತ್ರ (Pic: Youtube)

ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ಹೆಚ್ಚಾಗಿದ್ದು ಅಂತಹ ಮತ್ತೊಂದು ಘಟನೆ ಕಳೆದ ರಾತ್ರಿ ಜಯನಗರದ ಯಡಿಯೂರು ಲೇಕ್ ಬಳಿ ನಡೆದಿದೆ.

ಜಯನಗರದ ಯಡಿಯೂರು ಲೇಕ್ನ ದುರ್ಗ ಪರಮೇಶ್ವರಿ ರಸ್ತೆಯ ಬಳಿ ಬೈಕ್ ನಲ್ಲಿ ಬಂದ ಏಳು ಕಿಡಿಗೇಡಿಗಳು ಮನೆಮುಂದೆ ಪಾರ್ಕ್ ಮಾಡಿದ್ದ 9 ಕಾರುಗಳು, 6 ಆಟೋಗಳು, 3 ಟಾಟಾಯೇಸ್ ಸೇರಿದಂತೆ ಒಟ್ಟು 40 ವಾಹನಗಳ ಗಾಜನ್ನು  ಲಾಂಗ್ ಯಿಂದ ಗ್ಲಾಸ್ ಹೊಡೆದು ಪರಾರಿಯಾಗಿದ್ದಾರೆ. ಈ ಸಮಯದಲ್ಲಿ ಮನೆ ಮುಂದೆ ನಿಂತಿದ್ದ ವ್ಯಕ್ತಿಗೂ ಲಾಂಗ್ ಬೀಸಿದ್ದಾರೆ. ಅದೃಷ್ಟವಶಾತ್ ವ್ಯಕ್ತಿಯು ಅಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆಯು ರಾತ್ರಿ 10ಗಂಟೆಯ ಸುಮಾರಿಗೆ ನಡೆದಿದ್ದು,  ಬನಶಂಕರಿ ಠಾಣೆಯ ದೂರು ದಾಖಲಿಸಿಕೊಂಡಿದ್ದಾರೆ.

Trending News