ಮಾಜಿ ಸಚಿವ ಕೆ.ಎಚ್.ಹನುಮೇಗೌಡ ಇನ್ನಿಲ್ಲ

ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಕೆ.ಹೆಚ್.ಹನುಮೇಗೌಡ(89) ಅವರು ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ನಿಧನರಾಗಿದ್ದಾರೆ. 

Last Updated : May 14, 2018, 11:54 AM IST
ಮಾಜಿ ಸಚಿವ ಕೆ.ಎಚ್.ಹನುಮೇಗೌಡ ಇನ್ನಿಲ್ಲ title=

ಹಾಸನ : ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಕೆ.ಹೆಚ್.ಹನುಮೇಗೌಡ(89) ಅವರು ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ  ಬಳಲುತ್ತಿದ್ದ ಹನುಮೇಗೌಡರನ್ನು ನಗರದ ಸಂಜೀವಿನಿ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹಾಸನ ತಾಲ್ಲೂಕಿನ ಕೆ. ಬ್ಯಾಡರಹಳ್ಳಿಯ ಹನುಮೇಗೌಡರು 1972ರಲ್ಲಿ ರಾಜಕೀಯ ಜೀವನ ಆರಂಭಿಸಿದರು. ಮೂರು ಬಾರಿ ಕಾಂಗ್ರೆಸ್ ನಿಂದ, ಒಮ್ಮೆ ಬಿಜೆಪಿಯಿಂದ ಸೇರಿ ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದರು. 1994ರಲ್ಲಿ ವೀರಪ್ಪಮೊಯ್ಲಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಮೃತರು ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಹಾಸನದ ಕುವೆಂಪು ನಗರದ ಅರವಿಂದ ಶಾಲೆ ಸಮೀಪದ ನಿವಾಸದಲ್ಲಿ ಹನುಮೇಗೌಡರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು(ಸೋಮವಾರ) ಮಧ್ಯಾಹ್ನ 1 ಗಂಟೆಗೆ ಅವರ ಸ್ವಗ್ರಾಮ ಕೆ.ಬ್ಯಾಡರಹಳ್ಳಿಯ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Trending News