'ಕೈ' ನಾಯಕರ ಕಣ್ಣು ಕೆಂಪಗಾಗಿಸಿದ ಸಿದ್ದರಾಮಯ್ಯ ಹೇಳಿಕೆ!

ನನ್ನನ್ನು ಸೇರಿ ಕಾಂಗ್ರೆಸ್ ನಲ್ಲಿದ್ದ ಸಾಕಷ್ಟು ಜನರಿಗೆ ತಾವು ಮುಖ್ಯಮಂತ್ರಿಯಾಗುವ ಸಲುವಾಗಿ ಬೆನ್ನಿಗೆ ಚೂರಿ ಇರಿದಿದ್ದರು. ಇದೀಗ ಅವರಿಗೆ ಆ ನೋವು ಅರ್ಥವಾಗುತ್ತಿದೆ

Last Updated : Dec 24, 2020, 12:33 PM IST
  • ಸ್ವಪಕ್ಷದವರೇ ನಾನು ಸೋಲು ಕಾಣುವಂತೆ ಮಾಡಿದ್ದರು, ನನ್ನ ಬೆನ್ನಿಗೆ ಚೂರಿ ಹಾಕಿದರು
  • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.
  • ನನ್ನನ್ನು ಸೇರಿ ಕಾಂಗ್ರೆಸ್ ನಲ್ಲಿದ್ದ ಸಾಕಷ್ಟು ಜನರಿಗೆ ತಾವು ಮುಖ್ಯಮಂತ್ರಿಯಾಗುವ ಸಲುವಾಗಿ ಬೆನ್ನಿಗೆ ಚೂರಿ ಇರಿದಿದ್ದರು. ಇದೀಗ ಅವರಿಗೆ ಆ ನೋವು ಅರ್ಥವಾಗುತ್ತಿದೆ
'ಕೈ' ನಾಯಕರ ಕಣ್ಣು ಕೆಂಪಗಾಗಿಸಿದ ಸಿದ್ದರಾಮಯ್ಯ ಹೇಳಿಕೆ! title=

ಮೈಸೂರು: ಸ್ವಪಕ್ಷದವರೇ ನಾನು ಸೋಲು ಕಾಣುವಂತೆ ಮಾಡಿದ್ದರು, ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವಪಕ್ಷದ ಒಳಸಂಚಿನಿಂದ ನಾನು ಸೋಲಬೇಕಾಯಿತು. ನನ್ನ ಬೆನ್ನಿಗೆ ಚೂರಿ ಇರಿದರು. ಆದರೆ, ಬಾದಾಮಿ(Badami) ಜನ ನನ್ನ ಕೈ ಹಿಡಿದ್ರು. ಒಂದು ವೇಳೆ ಅಲ್ಲೂ ಕೂಡ ಸೋತಿದ್ದಿದ್ರೆ ನನ್ನ ರಾಜಕೀಯ ಭವಿಷ್ಯ ಏನಾಗುತ್ತಿತ್ತಿ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ಕೈಪಾಳಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.

ಬಿಎಸ್ ವೈ 'ಸಿಎಂ ಕುರ್ಚಿಗೆ ಕಂಟಕ' ತರುತ್ತಾ ಡಿನೋಟಿಫಿಕೇಶನ್ ಕೇಸ್..!?

ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಎ.ಹೆಚ್.ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರು ನನ್ನನ್ನು ಸೇರಿ ಕಾಂಗ್ರೆಸ್ ನಲ್ಲಿದ್ದ ಸಾಕಷ್ಟು ಜನರಿಗೆ ತಾವು ಮುಖ್ಯಮಂತ್ರಿಯಾಗುವ ಸಲುವಾಗಿ ಬೆನ್ನಿಗೆ ಚೂರಿ ಇರಿದಿದ್ದರು. ಇದೀಗ ಅವರಿಗೆ ಆ ನೋವು ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ.

Farmers: ರೈತರಿಗೊಂದು 'ಸಿಹಿ ಸುದ್ದಿ' ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್..!

ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು, ಚುನಾವಣೆ ನಡೆದು ಎರಡು ವರ್ಷಗಳಾದ ಬಳಿಕ ಈ ವಿಚಾರದ ಕುರಿತು ಏಕೆ ಮಾತನಾಡಲಾಗುತ್ತಿದೆ? ಇಂತಹ ಹೇಳಿಕೆಗಳು ಪಕ್ಷದ ಕಾರ್ಯಕರ್ತರಲ್ಲಿ ನಿರಾಶೆಗಳನ್ನು ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಹಳ್ಳಿಗಳಲ್ಲಿ ಕರೆಂಟ್ ಸಿಗೋದೇ ಡೌಟು: ಹೈ ಸ್ಪೀಡ್ ಇಂಟರ್‌ನೆಟ್‌ ಕೊಡ್ತಾರಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್‌

ರಾಜಕೀಯ ತಜ್ಞ ಪ್ರೊ.ಮುಝಾಫರ್ ಅಸಾದಿಯವರು ಮಾತನಾಡಿ, ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜಕೀಯವಾಗಿ ತಮ್ಮ ಪ್ರತಿಸ್ಪರ್ಧಿಗಳನ್ನು ಸ್ಥಳೀಯವಾಗಿ ಮುಗಿಸುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ.

ಜ.1ರಿಂದ ಶಾಲೆ ಪುನರಾರಂಭ, ಆದರೆ ಕಂಡೀಷನ್ ಅಪ್ಲೇ!

ತಮ್ಮ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿರುವ ಸ್ಥಳೀಯ ನಾಯಕರ ಕುರಿತು ನಾನು ಹೇಳಿದೆ ನೀಡಿದ್ದೆ ಎಂದು ತಿಳಿಸಿದ್ದಾರೆ.

'ಬಿಜೆಪಿ ಹೈಕಮಾಂಡ್‌ಗೆ ಧಮ್‌, ತಾಕತ್‌ ಇದ್ರೆ ಬಿಎಸ್ ವೈ ರಾಜೀನಾಮೆ ಪಡೆಯಬೇಕು'

 

Trending News