ಬೆಂಗಳೂರು: ಆರ್. ಎಸ್. ಎಸ್, ಬಜರಂಗದಳ ಬ್ಯಾನ್ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬ್ಯಾನ್ ಬಗ್ಗೆ ಹೇಳುವವರಿಗೆ ನಾವು ಸವಾಲು ಹಾಕುತ್ತೇನೆ. ದಯವಿಟ್ಟು ಅವರು ಬ್ಯಾನ್ ಮಾಡಿ ತೋರಿಸಲಿ. ಯಾವುದೇ ಸಂಘ ಸಂಸ್ಥೆಯನ್ನು ಬ್ಯಾನ್ ಮಾಡುವ ಅಧಿಕಾರ ಇವರಿಗಿಲ್ಲ ಅದನ್ನು ಮಾಡುವುದು ಕೇಂದ್ರ ಸರ್ಕಾರ ಎಂದಿದ್ದಾರೆ
ಇದೆಲ್ಲ ಗೊತ್ತಿದ್ದರೂ ಕೂಡ ತುಷ್ಟೀಕರಣ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಯಾರಿಗೆ ತುಷ್ಟೀಕರಣ ಮಾಡುತ್ತಿದ್ದಾರೋ, ಅವರಿಗೂ ಇವರು ಯಾಮಾರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಲಿ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Viral Video : ಇದೊಂದು ಬಾಕಿ ಇತ್ತು ನೋಡಿ: ಹಣೆ ಮೇಲೆ ಪತಿಯ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಪತ್ನಿ !
ಆರ್. ಎಸ್. ಎಸ್, ಬಜರಂಗದಳ ಬ್ಯಾನ್ ಮಾಡಲು ಹೊರಟವರನ್ನು ಈಗಾಗಲೇ ಮನೆಗೆ ಕಳುಹಿಸಿದ್ದಾರೆ. ಇದನ್ನು ನಾವು ಸವಾಲಾಗಿ ಸ್ವೀಕಾರ ಮಾಡಿ, ರಾಜಕೀಯವಾಗಿ ಎದುರಿಸುತ್ತೇವೆ ಎಂದರು.
ರಾಜ್ಯ ಸರ್ಕಾರದಲ್ಲಿ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ. ಮೊದಲ ಹಂತದ ಮಂತ್ರಿ ಮಂಡಲಕ್ಕೆ ರಾತ್ರಿ ಮೂರುವರೆಗೂ ಇರುವ ಹಗ್ಗಾ ಜಗ್ಗಾಟ ಮಾಡಿದರು. ಈಗ ಎರಡನೇ ಹಂತದ ಪೈಪೋಟಿ ನಡೆದಿದೆ.
ಇದನ್ನೆಲ್ಲ ನೋಡಿದ್ರೆ, ಇದು ಸಮ್ಮಿಶ್ರ ಸರ್ಕಾರ ಇದ್ದಂತಿದೆ.ಕಳೆದ ಬಾರಿ ಎರಡು ಪಕ್ಷಗಳಿಂದ ಸಮ್ಮಿಶ್ರ ಸರ್ಕಾರ ಇತ್ತು. ಆ ಸರ್ಕಾರದ್ದು ಅಧಿಕಾರ ಕಳೆದ ಲೋಕಸಭೆ ವರೆಗೂ ಇತ್ತು. ಹಾಗೇ ಇವಾಗ ಒಂದೇ ಪಕ್ಷ ಇದ್ದರೂ, ಎರಡು ಪಕ್ಷಗಳ ರೀತಿ ಸಮ್ಮಿಶ್ರ ಸರ್ಕಾರ ಇದೆ. ಇದರ ಆಯಸ್ಸು ಕೂಡ ಬರುವ ಲೋಕಸಭೆ ಚುನಾವಣೆ ವರೆಗೆ ಇರುತ್ತದೆ ಎಂದರು.
ರಾಜ್ಯದಲ್ಲಿನ ಟೆಂಡರ್ ಗಳೆನ್ನಲ್ಲ ನಿಲ್ಲಿಸಿದ್ದಾರೆ. ಇದರ ಬಗ್ಗೆ ನಮಗೆ ಯೋಚನೆ ಇಲ್ಲ. ಆದರೆ ಜನರ ಸಮಸ್ಯೆಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸುತ್ತಿಲ್ಲ. ವ್ಯವಸ್ಥೆ ಎನ್ನುವುದು ರಾಜ್ಯದ ಜನರ ಪರವಾಗಿ ಇರಬೇಕು. ಕನಿಷ್ಠ ಜನರಿಗೆ ಬೇಕಾಗುವ ಕೆಲಸ ಕಾರ್ಯಗಳು ತೊಂದರೆ ಆಗಬಾರದು ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.