ಹಿಂದೂ ಯುವಕನಿಗೆ ಬಲವಂತದ ʼಕತ್ನಾʼ : ಮಾಜಿ ಕಾರ್ಪೋರೇಟರ್‌ ವಿರುದ್ಧ ಗಂಭೀರ ಆರೋಪ..!

ಹಿಂದೂ ಯುವಕನಿಗೆ ಮತಾಂತರ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣ ಬೆಂಗಳೂರಿನ ಬನಶಂಕರಿ ಠಾಣೆಗೆ ವರ್ಗಾವಣೆಯಾಗಿದೆ. ಶ್ರೀಧರ್ ಎಂಬಾತನನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಮುಂದಾಗಿದ್ದ, ಆರೋಪಿಗಳು ಬಲವಂತವಾಗಿ ಇಸ್ಲಾಂ ಧರ್ಮದಂತೆ 'ಕತ್ನಾ'‌ಮಾಡಿಸಿದ್ದರು. 

Written by - VISHWANATH HARIHARA | Edited by - Krishna N K | Last Updated : Oct 5, 2022, 02:03 PM IST
  • ಹಿಂದೂ ಯುವಕನಿಗೆ ಮತಾಂತರ ಮಾಡಿದ ಆರೋಪ
  • ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣ ಬೆಂಗಳೂರಿನ ಬನಶಂಕರಿ ಠಾಣೆಗೆ ವರ್ಗಾವಣೆ
  • ಶ್ರೀಧರ್ ಎಂಬಾತನನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಮುಂದಾಗಿದ್ದ ಆರೋಪಿಗಳು
ಹಿಂದೂ ಯುವಕನಿಗೆ ಬಲವಂತದ ʼಕತ್ನಾʼ : ಮಾಜಿ ಕಾರ್ಪೋರೇಟರ್‌ ವಿರುದ್ಧ ಗಂಭೀರ ಆರೋಪ..!  title=

ಬೆಂಗಳೂರು : ಹಿಂದೂ ಯುವಕನಿಗೆ ಮತಾಂತರ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣ ಬೆಂಗಳೂರಿನ ಬನಶಂಕರಿ ಠಾಣೆಗೆ ವರ್ಗಾವಣೆಯಾಗಿದೆ. ಶ್ರೀಧರ್ ಎಂಬಾತನನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಮುಂದಾಗಿದ್ದ, ಆರೋಪಿಗಳು ಬಲವಂತವಾಗಿ ಇಸ್ಲಾಂ ಧರ್ಮದಂತೆ 'ಕತ್ನಾ'‌ಮಾಡಿಸಿದ್ದರು. 

ಬಲವಂತದ ಮತಾಂತರ, ಕತ್ನಾ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಕಾರ್ಪೋರೇಟರ್ ಅನ್ಸರ್ ಪಾಷ ಕೂಡ ಆರೋಪಿಯಾಗಿದ್ದು, ಅನ್ಸರ್ ಪಾಷಾ ಸಂಬಂಧಿ ನಯಾಝ್ ಪಾಷಾ ಕೂಡ ಎ3 ಆರೋಪಿಯಾಗಿದ್ದಾನೆ. ಖಬರಸ್ತಾನ್ ಮಸೀದಿಯ ಆಡಳಿತ ಮಂಡಳಿಯಲ್ಲಿರುವ ನಯಾಝ್ ಪಾಷಾ ಇಸ್ಲಾಂ ಧರ್ಮದ ಭೋದನೆ ಮಾಡಿ ಮರ್ಮಾಂಗದ 'ಕತ್ನಾ'ಮಾಡಿದಲ್ಲದೆ ಗೋ ಮಾಂಸವನ್ನು ಬಲವಂತವಾಗಿ ತಿನ್ನಿಸಿರುವ ಆರೋಪ ಕೇಳಿ ಬಂದಿದೆ‌. ಅಷ್ಟೇ ಅಲ್ಲದೇ ಶ್ರೀಧರನಿಗೆ ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಿ ಬಾಂಡ್ ಪೇಪರ್ ಬರೆಸಿಕೊಂಡಿದ್ದರಂತೆ.

ಇದನ್ನೂ ಓದಿ: ಸಂಸ್ಕೃತ ಕ್ರಿಕೆಟ್ ಕಾಮೆಂಟರಿಗೆ ಮನಸೋತ ಪ್ರಧಾನಿ ಮೋದಿ..!

ನಂತರ ಬನಶಂಕರಿಯ ಮಸೀದಿಗೆ ಕರೆ ತಂದು ಅಕ್ರಮವಾಗಿ ಗೃಹಬಂಧನದಲ್ಲಿಟ್ಟಿರುವ ಆರೋಪ ಸಹ ಇದೆ. ಈ ವೇಳೆ ಶ್ರೀಧರ್ ಪ್ರತಿಭಟಿಸಿದಾಗ ಪರವಾನಿಗೆ ಇರುವ ಗನ್ ತೋರಿಸಿ ಬೆದರಿಸಿ ಭಯೋತ್ಪಾದಕನಂತೆ ಬಿಂಬಿಸಿ ವಿಡೀಯೋ ಮಾಡಿ ಬೆದರಿಸಿದ್ದರಂತೆ. ಅಲ್ಲದೆ, ಮತಾಂತರದ ಬಗ್ಗೆ ಬರೆಸಿಕೊಂಡು ಈ ಬಗ್ಗೆ ಏನಾದರು ಹೊರಗಡೆ ಬಾಯ್ಬಿಟ್ಟರೆ ಭಯೋತ್ಪಾದಕನಂತೆ ಬಿಂಬಿಸಿದ ವಿಡಿಯೋವನ್ನ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ವರ್ಷಕ್ಕೆ ಮೂರು ಜನರನ್ನ ಕರೆ ತಂದು ಮತಾಂತರ ಮಾಡಿಸಬೇಕೆಂದು ಒತ್ತಾಯ ಕೂಡ ಮಾಡಿದ್ದರಂತೆ.

ಇನ್ನು ಶ್ರೀಧರ್ ತನಗಿರುವ ಹಣಕಾಸಿನ ಸಮಸ್ಯೆ ಬಗ್ಗೆ ಎ1 ಆರೋಪಿ ಅತ್ತಾವರ್‌ ರೆಹಮಾನ್ ಬಳಿ ಹೇಳಿಕೊಂಡಿದ್ದ. ಆರೋಪಿ ಅಜಿಸಾಬ್ ಹಿಂದೂ ದೇವರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದನಂತೆ. ಇಸ್ಲಾಂ ಧರ್ಮದ ಬಗ್ಗೆ ಭೋದನೆ ಮಾಡಿ ಆ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮಾಡಿ ಶ್ರೀಧರ್ ಮೊಬೈಲ್‌ನ್ನ ಪಡೆದು ಒಂದು ವಾರಗಳ ಕಾಲ ಬಚ್ಚಿಟ್ಟು ಬಲವಂತವಾಗಿ ಕತ್ನಾ ಮಾಡಿಸಿರುವ ಕೃತ್ಯ ಆರೋಪವಿದೆ. ಸದ್ಯ ಈ ಸಂಬಂಧ ಹುಬ್ಬಳ್ಳಿ ಎಪಿಎಂಸಿಯ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಹುಬ್ಬಳ್ಳಿಯಿಂದ ದೂರು ವರ್ಗಾವಣೆಯಾಗಿದ್ದು, ಡಿಸಿಪಿ ಕೃಷ್ಣಕಾಂತ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News