ಬೆಂಗಳೂರು : ಕಳೆದ ರಾಜ್ಯ ರಾಜಧಾನಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣವಿರುವ ವ್ಯಕ್ತಿ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ಹರಿದಾಡಿತ್ತು. ಇದೀಗ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಇದು ಚಿಕನ್ಪಾಕ್ಸ್ ಎಂದು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vegetable Price: ಗ್ರಾಹಕರೇ ಗಮನಿಸಿ... ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ
"ಈ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಮಧ್ಯವಯಸ್ಕ ಇಥಿಯೋಪಿಯನ್ ಪ್ರಜೆಯೊಬ್ಬನಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳಿವೆ ಎಂದು ಎಂದು ಶಂಕಿಸಿ ಆತನನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದೀಗ ಆ ವರದಿಯು ವ್ಯಕ್ತಿಗೆ ಚಿಕನ್ ಪಾಕ್ಸ್ ಇದೆ ಎಂದು ತಿಳಿಸಿದೆ" ಅಂತ ಆರೋಗ್ಯ ಸಚಿವರು ಟ್ವೀಟ್ ಮೂಲಕ ಸ್ಷಷ್ಟನೆ ನೀಡಿದ್ದಾರೆ.
ಕಳೆದ ದಿನ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಲಕ್ಷಣಗಳು ಇರುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದರು. ಇಥಿಯೋಪಿಯನ್ ಪ್ರಜೆಯಲ್ಲಿ ಮಂಕಿಪಾಕ್ಸ್ ಗುಣ ಲಕ್ಷಣಗಳು ಇವೆ ಎಂದು ಸುದ್ದಿ ಎಲ್ಲೆಡೆ ಹರಿದಾಡಿತ್ತು. ಕೂಡಲೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಹೆಚ್ಚಿನ ಶುಶ್ರೂಶೆ ಹಾಗೂ ನಿಗಾ ವಹಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ: ಪೆಟ್ರೋಲ್-ಡೀಸೆಲ್ ಬೆಲೆಗಳ ಮೇಲೆ ಭಾರೀ ಪರಿಣಾಮ!
ಮಂಕಿ ಪಾಕ್ಸ್ ಶಂಕಿತ ವ್ಯಕ್ತಿ ಜುಲೈ 4ಕ್ಕೆ ಇಥಿಯೋಪಿಯದಿಂದ ಬೆಂಗಳೂರಿಗೆ ಕಿಡ್ನಿ ಕಸಿ ಮಾಡಲು ಆಗಮಿಸಿದ್ದ. ಮೈ ಮೇಲೆ ತುರಿಕೆ ಹಾಗೂ ದೇಹದ ಕೆಲ ಭಾಗದಲ್ಲಿ ಸಣ್ಣ ಗುಳ್ಳೆಗಳು ಕಂಡು ಬಂದಿದ್ದು, ಆತನ ಸ್ಯಾಂಪಲ್ಸ್ ಪುಣೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಹಿತಿ ನೀಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.