ಕರ್ನಾಟಕದಲ್ಲಿ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ

ಹೊಸ ನವೋದ್ಯಮ ನೀತಿಯ ಮೂಲಕ ನಗರದಲ್ಲಿ ನೂರಾರು ಹೊಸ ಉದ್ಯಮಗಳಿಗೆ ನಾಂದಿ ಹಾಡಿ ಸಾವಿರಾರು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ.

Last Updated : Feb 25, 2018, 07:11 PM IST
ಕರ್ನಾಟಕದಲ್ಲಿ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ title=
Pic: Twitter

ಬೆಂಗಳೂರು: ಹೊಸ ನವೋದ್ಯಮ ನೀತಿಯ ಮೂಲಕ ನಗರದಲ್ಲಿ ನೂರಾರು ಹೊಸ ಉದ್ಯಮಗಳಿಗೆ ನಾಂದಿ ಹಾಡಿ ಸಾವಿರಾರು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ. "ಎಲವೇತ್ 100ರಡಿ ಬೆಂಗಳೂರಿನಲ್ಲಿ ನವೊದ್ಯಮಗಳನ್ನು ಸ್ಥಾಪಿಸಲಾಗಿದ್ದು, ಕರ್ನಾಟಕದಲ್ಲಿ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ" ಎಂದು ರಾಜ್ಯ ಕಾಂಗ್ರೇಸ್ ತನ್ನ ಫೇಸ್ ಬುಕ್ ಖಾತೆ ಮೂಲಕ ಅದರ ಸಾಧನೆಗಳನ್ನು ತಿಳಿಸಿದೆ.

ನವೋದ್ಯಮ ನೀತಿ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಸಾಧನೆಗಳು

  • ನವೋದ್ಯಮ ನೀತಿ ರೂಪಿಸಿದ ಮೊದಲ ರಾಜ್ಯ ಹಾಗೂ ಬಂಡವಾಳ ಹೂಡಿಕೆಗೆ ಪ್ರೇರೇಪಣೆ ನೀಡಿದ ವಿನೂತನ ಉದ್ಯಮ.
  • ಯುವ ಯುಗ ಯೋಜನೆಯಡಿ 1.10 ಲಕ್ಷ ಯುವಕರಿಗೆ ಐಟಿ.ಎಲೆಕ್ಟ್ರಾನಿಕ್ಸ್, ಅನಿಮೇಶನ್ ಮತ್ತು ಇತರೆ ವಲಯಗಳಲ್ಲಿ ತರಬೇತಿ ಸೌಲಭ್ಯ. 
  • ವಿಶ್ವದಲ್ಲೇ ಡೈನಾಮಿಕ್ ನಗರ ಕೀರ್ತಿಗೆ ಬೆಂಗಳೂರು ಭಾಜನ. 
  • ನವೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಐಟಿ ಬಿಟಿ ವಲಯ.

Trending News