ಆರೋಗ್ಯ ಇಲಾಖೆ ವಿವಿಧ ಹುದ್ದೆಗಳಿಗೆ ಜುಲೈ 20 ರಂದು ನೇರ ಸಂದರ್ಶನ

ಕೋವಿಡ್ 19 ಪ್ರಯುಕ್ತ ಧಾರವಾಡ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಹಿರಿಯ ಪುರುಷ ಆರೋಗ್ಯ ಸಹಾಯಕರು , ವಾಹನ ಚಾಲಕ ಹಾಗೂ ಗ್ರೂಪ್‌ 'ಡಿ' ಹುದ್ದೆಗಳನ್ನು 3 ತಿಂಗಳು ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸೋಮವಾರ ಜುಲೈ 20 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ , ಕೆ.ಸಿ ಪಾರ್ಕ ಹತ್ತಿರ , ಧಾರವಾಡ ದಲ್ಲಿ (ವಾಕ್ ಇನ್ ಇಂಟರ್ವ್ಯೂ) ನೇರ ಸಂದರ್ಶನ ನಡೆಯಲಿದೆ .

Last Updated : Jul 18, 2020, 10:18 PM IST
ಆರೋಗ್ಯ ಇಲಾಖೆ ವಿವಿಧ ಹುದ್ದೆಗಳಿಗೆ ಜುಲೈ 20 ರಂದು ನೇರ ಸಂದರ್ಶನ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ 19 ಪ್ರಯುಕ್ತ ಧಾರವಾಡ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಹಿರಿಯ ಪುರುಷ ಆರೋಗ್ಯ ಸಹಾಯಕರು , ವಾಹನ ಚಾಲಕ ಹಾಗೂ ಗ್ರೂಪ್‌ 'ಡಿ' ಹುದ್ದೆಗಳನ್ನು 3 ತಿಂಗಳು ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸೋಮವಾರ ಜುಲೈ 20 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ , ಕೆ.ಸಿ ಪಾರ್ಕ ಹತ್ತಿರ , ಧಾರವಾಡ ದಲ್ಲಿ (ವಾಕ್ ಇನ್ ಇಂಟರ್ವ್ಯೂ) ನೇರ ಸಂದರ್ಶನ ನಡೆಯಲಿದೆ .

ಡಿಪ್ಲೋಮಾ ಇನ್ ಇನ್ಸ್ ಪೆಕ್ಟರ , ವಿವಿಧೋದ್ದೇಶ ಕಾರ್ಯಕರ್ತರ ತರಬೇತಿ, ಎಎನ್‌ಎಂ ತರಬೇತಿ ಪಡೆದವರು ಹಾಗೂ ಭಾರಿ ವಾಹನ ಚಾಲನಾ ಪ್ರಮಾಣಪತ್ರ ಹೊಂದಿರುವ ಅರ್ಹ ಅಭ್ಯರ್ಥಿಗಳು. ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಮೂಲ ದಾಖಲಾತಿಗಳು ಹಾಗೂ ಅವುಗಳ ನಕಲು ಪ್ರತಿಯೊಂದಿಗೆ ಹಾಜರಾಗಬಹುದು.

ಹೆಚ್ಚಿನ ವಿವರಗಳಿಗೆ 0836-2447483 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News