ಬೆಂಗಳೂರು: ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚಿ ನೇರ ವಿಮಾನ ಸೇವೆ ಪುನರಾರಂಭಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಆಡಿ ಬೆಳೆದಿದ್ದ ಭಾರತದ ಶ್ರೇಷ್ಠ ನಿರ್ದೇಶಕ ವಿ.ಶಾಂತಾರಾಂ...!
ಇಂಡಿಗೋ ಸಂಸ್ಥೆಯ ಹಿರಿಯ ಉನ್ನತ ಅಧಿಕಾರಿಗಳು ಇದೇ ಜನವರಿ 21ರಿಂದ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.ಈ ಸಂಗತಿಯನ್ನು ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಸಾಲಿನಲ್ಲಿ ರಾಜ್ಯಕ್ಕೆ 2000 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ
Happy to share that on my request, @IndiGo6E will restart ✈️ flights for Hubli to Goa and Hubli to Kochi, starting January 21st. Now connect with your loved ones or expand your business with convenience. pic.twitter.com/KUE4ZLgsky
— Pralhad Joshi (@JoshiPralhad) January 9, 2021
ವಿಮಾನಯಾನದ ವಿವರ ಈ ಕೆಳಗಿನಂತಿದೆ:
ಇದನ್ನೂ ಓದಿ: Hubli - Ahmedabad ನಡುವಿನ ವಿಮಾನಯಾನ ಸೇವೆ ಇಂದಿನಿಂದ ಮತ್ತೆ ಆರಂಭ
- 1.00 ಕ್ಕೆ ಹುಬ್ಬಳ್ಳಿಯಿಂದ ಹೊರಟು 3.10ಕ್ಕೆ ಕೊಚ್ಚಿಗೆ ತಲುಪುವುದು
- 3.45 ಕ್ಕೆ ಕೊಚಿಯಿಂದ ಹೊರಟು 5.30 ಕ್ಕೆ ಹುಬ್ಬಳ್ಳಿಗೆ ತಲುಪುವುದು.
- 6.00 ಕ್ಕೆ ಹುಬ್ಬಳ್ಳಿಯಿಂದ ಹೊರಟು 7.00 ಕ್ಕೆ ಗೋವಾ ತಲುಪುವುದು
- 7.30 ಕ್ಕೆ ಗೋವಾಯಿಂದ ಹೊರಟು 8.30ಕ್ಕೆ ಹುಬ್ಬಳ್ಳಿ ತಲುಪುವುದು