College Reopen : ಇಂದಿನಿಂದ ಪದವಿ, ಸ್ನಾತಕೋತ್ತರ ತರಗತಿಗಳು ಆರಂಭ

 ರಾಜ್ಯದಲ್ಲಿ ಇಂದಿನಿಂದ ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ಎಂಜಿನಿಯರಿಂಗ್ ಕಾಲೇಜುಗಳು ಕೂಡಾ  ಪೂರ್ಣ ಪ್ರಮಾಣದಲ್ಲಿ  ಆರಂಭವಾಗಲಿವೆ  

Written by - Ranjitha R K | Last Updated : Jan 15, 2021, 08:07 AM IST
  • ಇಂದಿನಿಂದ ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ಎಂಜಿನಿಯರಿಂಗ್ ಕಾಲೇಜುಗಳು ಆರಂಭ
  • ಬೆಳಿಗ್ಗೆ 9ರಿಂದ ಸಂಜೆ 3ಗಂಟೆವರೆಗೆ ಅಥವಾ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ತರಗತಿಗಳು ನಡೆಯಲಿವೆ
  • ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯ
College Reopen : ಇಂದಿನಿಂದ  ಪದವಿ, ಸ್ನಾತಕೋತ್ತರ ತರಗತಿಗಳು ಆರಂಭ title=
ಇಂದಿನಿಂದ ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ಎಂಜಿನಿಯರಿಂಗ್ ಕಾಲೇಜುಗಳು ಆರಂಭ(filr photo)

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಎಸ್ಎಸ್ಎಸಲ್ ಸಿ (SSLC) ಮತ್ತು ಪಿಯುಸಿ (PUC) ತರಗತಿಗಳು ಆರಂಭವಾಗಿದ್ದು, ಇಂದಿನಿಂದ (ಜನವರಿ 15) ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ಎಂಜಿನಿಯರಿಂಗ್ ಕಾಲೇಜುಗಳು ಕೂಡಾ  ಪೂರ್ಣ ಪ್ರಮಾಣದಲ್ಲಿ  ಆರಂಭವಾಗಲಿವೆ. ಬೆಳಿಗ್ಗೆ 9ರಿಂದ ಸಂಜೆ  3ಗಂಟೆವರೆಗೆ ಅಥವಾ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆತರಗತಿಗಳು  ನಡೆಯಲಿವೆ.

ಕರೋನಾ (Coronavirus) ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳು ಆರಂಭವಾದ ಮೇಲೆ ನವೆಂಬರ್ 17ರಿಂದ ಅಂತಿಮ ವರ್ಷದ ಪದವಿ,  ಪಾಲಿಟೆಕ್ನಿಕ್, ಸ್ನಾತಕೋತ್ತರ ಮತ್ತು ಎಂಜಿನಿಯರಿಂಗ್ ತರಗತಿಗಳು ನಡೆಯುತ್ತಿವೆ. ಇದೀಗ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಂತೆ, ಉಳಿದ ತರಗತಿಗಳು ಕೂಡಾ ತೆರೆದುಕೊಳ್ಳಲಿದೆ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರನ್ನು (Permission Letter) ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಒಪ್ಪಿಗೆ ಪತ್ರ ಇಲ್ಲದ ವಿದ್ಯಾರ್ಥಿಗಳು ನೇರ ತರಗತಿಗೆ ಹಾಜರಾಗುವಂತಿಲ್ಲ.

ಇದನ್ನೂ  ಓದಿ  : Corona Vaccine Update: ಈ ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಉಚಿತ ವಿತರಣೆ

ಇನ್ನು ಮಾಸ್ಕ್ (Mask)  ,ಸಾಮಜಿಕ ಅಂತರ (Social Distancing) ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಥರ್ಮಲ್ ಸ್ಕ್ರೀನಿಂಗ್ ಅಳವಡಿಕೆ ಕೂಡಾ ಇರಲೇ ಬೇಕು. ಆನ್ಲೈನ್ ಆಫ್ ಲೈನ್ ಎರಡೂ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳು ಯಾವುದಾದರೂ ಒಂದು ತರಗತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಎಲ್ಲರೂ ಕೋವಿಡ್ (COVID-19) ಟೆಸ್ಟ್ ಮಾಡಿಸಬೇಕಿಲ್ಲ. ರೋಗ ಲಕ್ಷಣ ಕಂಡುಬಂದವರು ಮಾತ್ರ ಕರೋನಾ ಪರೀಕ್ಷೆಗೆ ಒಳಗಾಗಬೇಕು. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಕಾಲೇಜುಗಳು ಮ್ಯಾಪಿಂಗ್  ಮಾಡಿಕೊಳ್ಳಬೇಕು. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ತಮಗೆ ಬೇಕಾದ ಆಹಾರ ಮತ್ತು ನೀರನ್ನು ಮನೆಯಿಂದಲೇ ತರಬೇಕು. 

ಇದೀಗ ಶಿಕ್ಷಣ ಸಂಸ್ಥೆಗಳು ಕಾಲೇಜಿನ ಕಟ್ಟಡ,  ಶೌಚಾಲಯ, ಕೊಠಡಿ, ಗ್ರಂಥಾಲಯ, ಪೀಠೋಪಕರಣಗಳಿಗೆ  ಸ್ಯಾನಿಟೈಸ್‌ (Sanitization) ಮಾಡಿಸಿ, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿವೆ. ಕೆಲವು ವಿವಿಗಳು ಫೆಬ್ರವರಿ 2ನೇ ವಾರದಿಂದ ಸೆಮಿಸ್ಟರ್‌ ಪರೀಕ್ಷೆ ನಡೆಸಲು ತಯಾರಿ ನಡೆಸಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ  ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಲ್ಲಿ ಪದವಿ ಪರೀಕ್ಷೆಗಳು ನಡೆಯಬಹುದು.

ಇದನ್ನೂ  ಓದಿ  : Coronavirus : ಲಸಿಕೆ ಪಡೆದರೂ ಮೈಮರೆಯುವಂತಿಲ್ಲ. ಯಮಾರಿದರೆ ವ್ಯಾಕ್ಸಿನ್ ವೇಸ್ಟ್..! ಹೇಗೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News