ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಮಾತೃವಿಯೋಗ

ಗೋವಿಂದ.ಎಂ.ಕಾರಜೋಳರ ತಾಯಿ ಪಾರ್ವತಿ ಮಕ್ತಪ್ಪ ಕಾರಜೋಳ (90)ಇಂದು ಬೆಳಿಗ್ಗೆ ವಿಧಿವಶರಾದರು.

Last Updated : Nov 19, 2019, 09:42 AM IST
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಮಾತೃವಿಯೋಗ title=

ಬೆಂಗಳೂರು:  ರಾಜ್ಯ ಬಿಜೆಪಿ ನಾಯಕ, ಉಪಮುಖ್ಯಮಂತ್ರಿ ಗೋವಿಂದ.ಎಂ.ಕಾರಜೋಳರ ತಾಯಿ ಪಾರ್ವತಿ ಮಕ್ತಪ್ಪ ಕಾರಜೋಳ (90)ಇಂದು ಬೆಳಿಗ್ಗೆ ವಿಧಿವಶರಾದರು.

ಮೃತರು ಉಪ ಮುಖ್ಯಮಂತ್ರಿಗಳಾದ ಗೋವಿಂದ.ಎಂ.ಕಾರಜೋಳ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಳಗವನ್ನ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೇ ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಸ್ವಗ್ರಾಮವಾದ ಕಾರಜೋಳದಲ್ಲಿ ಮಧ್ಯಾಹ್ನ 12 ಗಂಟೆಗೆನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಿಸಿಎಂ ಗೋವಿಂದ ಕಾರಜೋಳ ಅವರ  ಮಾತೃ ಶ್ರೀ ಪಾರ್ವತಿ ಮುಕ್ತಪ್ಪ ಕಾರಜೋಳ(94) ಅವರು ನಿಧನರಾಗಿರುವುದು ನೋವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

Trending News