ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ದರ್ಶನ್ ಪ್ರಚಾರ

ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರವಾಗಿ ಮತಯಾಚನೆ ಮಾಡಿದ ದರ್ಶನ್.  

Last Updated : Apr 8, 2019, 02:28 PM IST
ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ದರ್ಶನ್ ಪ್ರಚಾರ title=
Pic Courtesy: Facebook

ಬೆಂಗಳೂರು: ಚಂದನವನದಲ್ಲಿ ಬಾಕ್ಸ್ ಆಫಿಸ್ ಸುಲ್ತಾನ್ ಎಂದು ಹೆಸರುವಾಸಿಯಾಗಿರುವ 'ಡಿ ಬಾಸ್', ಇದೀಗ ರಾಜಕೀಯ ವಲಯದಲ್ಲೂ ಸದ್ದು ಮಾಡುತ್ತಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ಪಾಲ್ಗೊಂಡು ನಂತರ ಒಂದೆರಡು ದಿನ ಬ್ರೇಕ್ ತೆಗೆದುಕೊಂಡಿದ್ದ ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇಂದು ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಹೊಸ ತಿಪ್ಪಸಂದ್ರದ ಆಂಜನೇಯ ದೇಗುಲದಿಂದ ರೋಡ್ ಶೋ ಆರಂಭಿಸಿದ ದರ್ಶನ್ ಸಿವಿ ರಾಮನ್ ನಗರ, ಶಾಂತಿನಗರಗಳಲ್ಲಿ ಪ್ರಚಾರ ನಡೆಸಲಿದ್ದು ಪಿ.ಸಿ. ಮೋಹನ್ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.

ಇಂದು ಪಿ.ಸಿ. ಮೋಹನ್ ಪರ ಪ್ರಚಾರದಲ್ಲಿ ಪಾಲ್ಗೊಂಡಿರುವ ದಚ್ಚು, ನಾಳೆ ಮತ್ತೆ ಮಂಡ್ಯದ ಅಖಾಡಕ್ಕೆ ಧುಮುಕಲಿದ್ದು, ಸುಮಲತಾ ಪರ ಪ್ರಚಾರವನ್ನು ಮುಂದುವರೆಸಲಿದ್ದಾರೆ.
 

Trending News