ಬೆಂಗಳೂರು: ಉದ್ಯಮಿ ಮತ್ತು ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ MLA ಟಿಕೆಟ್ ನೀಡುವುದಾಗಿ ಚೈತ್ರಾ ಕುಂದಾಪುರ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ. ಬಿಜೆಪಿಯ ಬಾಡಿಗೆ ಭಾಷಣಕಾರರು, ಖಾವಿ ವೇಷದಾರಿ ವಂಚಕರು ಇದರಲ್ಲಿ ತಳುಕು ಹಾಕಿಕೊಂಡಿದ್ದಾರೆ’ ಎಂದು ಟೀಕಿಸಿದೆ.
ಇದನ್ನೂ ಓದಿ: ಚೈತ್ರ ಅಂಡ್ ಗ್ಯಾಂಗ್ ನಿಂದ ಉದ್ಯಮಿ ವಂಚನೆ ಪ್ರಕರಣ: ಆರೋಪಿ ಅಭಿನವ ಹಾಲಶ್ರೀ ಬಂಧನ
ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ.
ಬಿಜೆಪಿಯ ಬಾಡಿಗೆ ಭಾಷಣಕಾರರು, ಖಾವಿ ವೇಷದಾರಿ ವಂಚಕರು ಇದರಲ್ಲಿ ತಳುಕು ಹಾಕಿಕೊಂಡಿದ್ದಾರೆ.@karkalasunil ಹೆಸರು ಬಹಿರಂಗವಾದ ನಂತರ @CTRavi_BJP ಅವರಿಗೆ ಈ ವಂಚನೆಯ ಸಂಗತಿ ಮೊದಲೇ ಗೊತ್ತಿತ್ತು, ಬಿಜೆಪಿಗೂ ಪಕ್ಷಕ್ಕೂ ಗೊತ್ತಿತ್ತು ಎಂಬ ಸತ್ಯ ಹೊರಬಿದ್ದಿದೆ.…— Karnataka Congress (@INCKarnataka) September 19, 2023
ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಹೆಸರು ಬಹಿರಂಗವಾದ ನಂತರ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರಿಗೆ ಈ ವಂಚನೆಯ ಸಂಗತಿ ಮೊದಲೇ ಗೊತ್ತಿತ್ತು, ಬಿಜೆಪಿಗೂ ಪಕ್ಷಕ್ಕೂ ಗೊತ್ತಿತ್ತು ಎಂಬ ಸತ್ಯ ಹೊರಬಿದ್ದಿದೆ. ಹಣದ ಅಕ್ರಮ ವಹಿವಾಟು ನಡೆದಿದ್ದು, ಪಕ್ಷದ ಹೆಸರಲ್ಲಿ ಅಕ್ರಮ ನಡೆದಿದ್ದರೂ, ಹಣದ ವಂಚನೆ ನಡೆದಿದ್ದರೂ ಸಿಟಿ ರವಿ ಸುಮ್ಮನಿದ್ದಿದ್ದು ಏಕೆ? ಅ ಮೌನದಲ್ಲಿ ಇನ್ನೂ ಹೆಚ್ಚಿನ ನಿಗೂಢತೆ ಇದೆಯೇ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಬಿಜೆಪಿಯಿಂದ ಕಾಂಗ್ರೆಸ್‍ನ ಸಿಎಂ ಹಾಗೂ ಡಿಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ!
🔹ವಿಧಾನ ಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ
🔹ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ
🔹ಬಿಜೆಪಿ ಅಧ್ಯಕ್ಷನ ಆಯ್ಕೆಯಾಗಿಲ್ಲ
🔹ಟಿಕೆಟ್ ಮಾರಾಟದ ಹಗರಣಗಳು ಹೊರಬರುತ್ತಿವೆ
🔹ಆಂತರಿಕ ಕಿತ್ತಾಟ ತಾರಕಕ್ಕೇರಿದೆ
🔹ಹೈಕಮಾಂಡ್ ನಾಯಕರು ತಿರುಗಿಯೂ ನೋಡ್ತಿಲ್ಲ@BSYBJP ಅವರೇ, ತಾವು ಈ ಇಳಿವಯಸ್ಸಲ್ಲಿ ಸರ್ಕಾರದ ವಿರುದ್ಧ…— Karnataka Congress (@INCKarnataka) September 19, 2023
‘ವಿಧಾನ ಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ, ಬಿಜೆಪಿ ಅಧ್ಯಕ್ಷನ ಆಯ್ಕೆಯಾಗಿಲ್ಲ, ಟಿಕೆಟ್ ಮಾರಾಟದ ಹಗರಣಗಳು ಹೊರಬರುತ್ತಿವೆ, ಆಂತರಿಕ ಕಿತ್ತಾಟ ತಾರಕಕ್ಕೇರಿದೆ ಮತ್ತು ಹೈಕಮಾಂಡ್ ನಾಯಕರು ತಿರುಗಿಯೂ ನೋಡ್ತಿಲ್ಲ. ಬಿ.ಎಸ್.ಯಡಿಯೂರಪ್ಪನವರೇ, ತಾವು ಈ ಇಳಿವಯಸ್ಸಲ್ಲಿ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ಪ್ರವಾಸ ಹೊರಡುವ ಬದಲು ಮುಳುಗುತ್ತಿರುವ ನಿಮ್ಮ ಪಕ್ಷವನ್ನು ಎತ್ತಿ ನಿಲ್ಲಿಸಲು ಪ್ರಯತ್ನಿಸುವುದು ಒಳ್ಳೆಯದು!’ ಎಂದು ಕಾಂಗ್ರೆಸ್ ಸಲಹೆ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.