ಬಿಜೆಪಿ ರಾಷ್ಟ್ರಕ್ಕೆ ತಗುಲಿದ ವ್ಯಾದಿಗಳೇ ಹೊರತು ರಾಷ್ಟ್ರವಾದಿಗಳಲ್ಲ: ಕಾಂಗ್ರೆಸ್

ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಿರುವಂತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Written by - Zee Kannada News Desk | Last Updated : Aug 16, 2022, 06:14 PM IST
  • ರಾಷ್ಟ್ರಧ್ವಜ ಬದಲಿಸುತ್ತೇವೆ ಎಂದಿದ್ದ ಬಿಜೆಪಿ ತಿರಂಗಾಕ್ಕೆ ಹತ್ತು ಹಲವು ಬಗೆಯಲ್ಲಿ ಅವಮಾನ ಮಾಡಿದೆ
  • ರಾಷ್ಟ್ರಧ್ವಜವನ್ನು ಎಸೆಯುವ ಬಿಜೆಪಿ ತಮ್ಮನ್ನು ರಾಷ್ಟ್ರವಾದಿಗಳೆಂದು ಕರೆದುಕೊಳ್ಳುವಂತಹ ವ್ಯಂಗ್ಯ ಬೇರಿಲ್ಲ
  • ಬಿಜೆಪಿ ರಾಷ್ಟ್ರಕ್ಕೆ ತಗುಲಿದ ವ್ಯಾದಿಗಳೇ ಹೊರತು ರಾಷ್ಟ್ರವಾದಿಗಳಲ್ಲ ಎಂದು ಕಾಂಗ್ರೆಸ್ ಟೀಕೆ
ಬಿಜೆಪಿ ರಾಷ್ಟ್ರಕ್ಕೆ ತಗುಲಿದ ವ್ಯಾದಿಗಳೇ ಹೊರತು ರಾಷ್ಟ್ರವಾದಿಗಳಲ್ಲ: ಕಾಂಗ್ರೆಸ್ title=
ಬಿಜೆಪಿಯಿಂದ ರಾಷ್ಟ್ರಧ್ವಜಕ್ಕೆ ಅವಮಾನ!

ಬೆಂಗಳೂರು: 75ನೇ ವರ್ಷದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ವೇಳೆ ಬಿಜೆಪಿ ತಿರಂಗಾಕ್ಕೆ ಹತ್ತು ಹಲವು ಬಗೆಯಲ್ಲಿ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ನಕಲಿ ದೇಶಭಕ್ತರ ಅಸಲಿ ದೇಶದ್ರೋಹದ ಕೆಲಸವೆಂದು ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ. ರಾಷ್ಟ್ರಧ್ವಜ ಬದಲಿಸುವ ಮೊದಲು ಎಸೆಯುವ ಕೆಲಸವೇ ಈಶ್ವರಪ್ಪನವರೇ? ಎಂದು ಕುಟುಕಿದೆ.

ರಾಷ್ಟ್ರಧ್ವಜ ಬದಲಿಸುತ್ತೇವೆ ಎಂದಿದ್ದ ಬಿಜೆಪಿ ತಿರಂಗಾಕ್ಕೆ ಹತ್ತು ಹಲವು ಬಗೆಯಲ್ಲಿ ಅವಮಾನ ಮಾಡುತ್ತಿದೆ. ರಾಷ್ಟ್ರಧ್ವಜವನ್ನು ಹೀನಾಯವಾಗಿ ಎಸೆಯುವ ಬಿಜೆಪಿ ತಮ್ಮನ್ನು ತಾವು ರಾಷ್ಟ್ರವಾದಿಗಳು ಎಂದು ಕರೆದುಕೊಳ್ಳುವಂತಹ ವ್ಯಂಗ್ಯ ಬೇರಿಲ್ಲ! ಬಿಜೆಪಿ ರಾಷ್ಟ್ರಕ್ಕೆ ತಗುಲಿದ ವ್ಯಾದಿಗಳೇ ಹೊರತು ರಾಷ್ಟ್ರವಾದಿಗಳಲ್ಲ’ವೆಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ: ದುಷ್ಟ ಶಕ್ತಿಗಳ ಮಟ್ಟ ಹಾಕಲಾಗಿದೆ ಎಂದ ಬಿಜೆಪಿ

‘ದೇಶದ್ರೋಹಿ RSS ತತ್ವ ಸಿದ್ಧಾಂತದಂತೆ ಕೆಲಸ ಮಾಡುತ್ತೇನೆ ಎಂದಿದ್ದಾರೆ ಸಿಎಂ. ಬಸವರಾಜ್ ಬೊಮ್ಮಾಯಿಯವರೇ ತಾವು ಸಂವಿಧಾನದ ಆಶಯಗಳ ಮೇಲೆ ಆಡಳಿತ ನಡೆಸಬೇಕಿತ್ತು. ಡಾ.ಬಿ.ಆರ್.ಅಂಬೇಡ್ಕರ್ ತತ್ವಗಳಲ್ಲಿ ಕೆಲಸ ಮಾಡಬೇಕಿತ್ತು. ಪ್ರಜಾಪ್ರಭುತ್ವದ ಅದರ್ಶದಲ್ಲಿ ನಡೆಯಬೇಕಿತ್ತು. ಆದರೆ ಪ್ರಜಾಪ್ರಭುತ್ವ ವಿರೋಧಿಗಳೇ ನಿಮಗೆ ಆದರ್ಶ ಎನ್ನುವುದು ರಾಜ್ಯದ ದೌರ್ಭಾಗ್ಯ’ವೆಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಗೃಹಸಚಿವ ಆರಗ ಜ್ಞಾನೇಂದ್ರರ ತವರು ಜಿಲ್ಲೆಯಲ್ಲೇ ನಿರಂತರವಾಗಿ ಗಲಭೆ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕನಿಷ್ಠ ಪ್ರಯತ್ನ ಮಾಡದಿರುವುದು ಸಚಿವರ ಅಸಾಮರ್ಥ್ಯವೋ ಅಥವಾ ಕೋಮು ಕಲಹಕ್ಕೆ ನೀಡುತ್ತಿರುವ ಉದ್ದೇಶಪೂರ್ವಕ ಕುಮ್ಮಕ್ಕೊ? ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಿರುವಂತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ಸಾಕ್ಷ್ಯಾಧಾರ ಇದ್ದರೆ PFI, SDPI ಸಂಘಟನೆಗಳನ್ನು ನಿಷೇಧಿಸಲಿ: ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News