2019 ರ ಚುನಾವಣೆಗೂ ಮೈತ್ರಿ ಮಂತ್ರ ಜಪಿಸಿದ ಕಾಂಗ್ರೆಸ್- ಜೆಡಿಎಸ್

    

Last Updated : Jun 1, 2018, 06:50 PM IST
2019 ರ ಚುನಾವಣೆಗೂ ಮೈತ್ರಿ ಮಂತ್ರ ಜಪಿಸಿದ ಕಾಂಗ್ರೆಸ್- ಜೆಡಿಎಸ್ title=

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಗೊಂದಲ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ  ಬಗೆ ಹರಿದಿದ್ದು. ಇಗ ಎರಡು ಪಕ್ಷಗಳು ಪರಸ್ಪರೆ ಚರ್ಚೆಯ ಮೂಲಕ ತಮಗೆ ಬೇಕಾದ ಖಾತೆಗಳನ್ನು ಹಂಚಿಕೊಂಡಿವೆ.

ಸಂಪುಟ ವಿಸ್ತರಣೆಯ ಕುರಿತಾಗಿ ಉಭಯಪಕ್ಷಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿ ಮೂಲಕ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ಮುಂಬರುವ 2019ರ ಚುನಾವಣೆಯಲ್ಲಿಯೂ ಕೂಡ ಎರಡು ಪಕ್ಷಗಳು ಮೈತ್ರಿಯನ್ನು ಮಾಡಿಕೊಳ್ಳುವತ್ತ ಚಿಂತನೆಯನ್ನು ನಡೆಸಿವೆ ಎನ್ನಲಾಗಿದೆ. ನಿನ್ನೆ ಬಂದ ಉಪಚುನಾವಣಾ ಫಲಿತಾಂಶದಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ದ ಸಾಂಘಿಕ ಅಭ್ಯರ್ಥಿಯನ್ನು ಇಳಿಸಿ ಭರ್ಜರಿ ಯಶಸ್ಸನ್ನು ಸಾಧಿಸಿದ ಹಿನ್ನಲೆಯಲ್ಲಿ ಇದೇ ಮಾದರಿಯ ಸೂತ್ರವನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವು  ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಬಗ್ಗು ಬಡಿಯಲು ಚಿಂತನೆ ನಡೆಸಿವೆ ಎಂದು ತಿಳಿದುಬಂದಿದೆ. 

ಇಗ ಸರ್ಕಾರ ಸುಗಮವಾಗಿ ನಡೆಯಲು ಸಮನ್ವಯ ಸಮಿತಿಯನ್ನು ಉಭಯ ಪಕ್ಷಗಳು ರಚನೆ ಮಾಡಿವೆ.ಇದರ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಸಮಿತಿಯ ಸಂಚಾಲಕರಾಗಿ  ಡ್ಯಾನಿಶ್ ಅಲಿಯವರು ಸಂಚಾಲಕರಾಗಿ  ಇರಲಿದ್ದಾರೆ ಎನ್ನಲಾಗಿದೆ.ಇದರ ಜೊತೆ ಸಮನ್ವ ಸಮಿತಿಯ ವಕ್ತಾರರನ್ನು ಕೂಡ ನೇಮಿಸಲಾಗುವುದು ಎಂದು ಹೇಳಲಾಗುತ್ತಿದೆ.ಈ ಸಮಿತಿಯು ಪ್ರತಿ ತಿಂಗಳು ಸಹಿತ ಸಭೆ ಸೇರಲಿದ್ದು ಸರ್ಕಾರವು ಸುಗಮವಾಗಿ ನಡೆಯುವಲ್ಲಿ ಮತ್ತು ಜೊತೆಯಾಗಿ ಚುನಾವಣೆಯನ್ನು ಎದುರಿಸುವ ಕುರಿತಾಗಿಯೂ ಇದು ಮಹತ್ವ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.

Trending News