ಕಾಂಗ್ರೆಸ್ ನವರಲ್ಲ, ಬಿಜೆಪಿಯವರೇ ನನ್ನನ್ನು ಸೋಲಿಸಿದ್ದು: ವಿ. ಸೋಮಣ್ಣ ಬೇಸರ

ಕಳೆದ ಚುನಾವಣೆಯಲ್ಲಿ ನನ್ನನ್ನು ಕಾಂಗ್ರೆಸ್ ನವರು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದ್ದು, ನನ್ನ ಸಮುದಾಯದವರೇ ನನ್ನನ್ನು ಸೋಲಿಸಿದ್ದು, ಅವರಿಗೆ ಒಳ್ಳೆಯದಾಗಲಿ, ನಾನು ಮತ್ತಷ್ಟು ಶಕ್ತಿವಂತನಾಗಿದ್ದೇನೆ- ಮಾಜಿ ಸಚಿವ ವಿ. ಸೋಮಣ್ಣ

Written by - Yashaswini V | Last Updated : Nov 23, 2023, 01:10 PM IST
  • ಸಿಕ್ಕ ಕಡಿಮೆ ಅವಕಾಶದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ
  • ಜೀವನದಲ್ಲಿ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಬೇಕು
  • ಕೆರೆಗೆ ನೀರು ತುಂಬುವ ಯೋಜನೆ ಮಾಡುವಾಗ ನನ್ನನ್ನು ಹುಚ್ಚ ಎಂದರು- ಮಾಜಿ ಸಚಿವ ವಿ ಸೋಮಣ್ಣ
ಕಾಂಗ್ರೆಸ್ ನವರಲ್ಲ, ಬಿಜೆಪಿಯವರೇ ನನ್ನನ್ನು ಸೋಲಿಸಿದ್ದು: ವಿ. ಸೋಮಣ್ಣ ಬೇಸರ title=

ಚಾಮರಾಜನಗರ: ಕಾಂಗ್ರೆಸ್ ನವರು ನನ್ನನ್ನು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದರು ಎಂದು ಮಾಜಿ ಸಚಿವ ವಿ‌.ಸೋಮಣ್ಣ ಬೇಸರ ಹೊರಹಾಕಿದರು.

ಚಾಮರಾಜನಗರ  ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಗ್ರಾನೈಟ್ ಕಂಪನಿ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ, ಕಳೆದ ಚುನಾವಣೆಯಲ್ಲಿ ನನ್ನನ್ನು ಕಾಂಗ್ರೆಸ್ ನವರು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದ್ದು, ನನ್ನ ಸಮುದಾಯದವರೇ ನನ್ನನ್ನು ಸೋಲಿಸಿದ್ದು, ಅವರಿಗೆ ಒಳ್ಳೆಯದಾಗಲಿ, ನಾನು ಮತ್ತಷ್ಟು ಶಕ್ತಿವಂತನಾಗಿದ್ದೇನೆ ಎಂದು ಯಾರಾ ಹೆಸರು ಹೇಳದೇ ಕಿಡಿಕಾರಿದರು.

ಇದನ್ನೂ ಓದಿ- ನೈಸ್ ರೋಡ್ ಸುತ್ತ ಮುತ್ತಲ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್ ನ್ಯೂಸ್

ನಾನು ಉಸ್ತುವಾರಿ ಸಚಿವರಾಗಿದ್ದ ವೇಳೆ ಗಣಿ ಮಾಲೀಕರು ನನ್ನ ಮನೆಗೆ ಮೂಟೆಗಟ್ಟಲೇ ಹಣ ತಂದಿದ್ದರು , ನನಗೇನು ನಿಮ್ಮ ದುಡ್ಡು ಬೇಡ, ನೀವು ಗಣಿಗಾರಿಕೆ ನಡೆಸುವ ಊರಿನ ಶಾಲೆಗಳಿಗೆ, ರಸ್ತೆಗಳಿಗೆ ಈ ಹಣ ವಿನಿಯೋಗಿಸಿ ಎಂದು ವಾಪಾಸ್ ಕಳುಹಿಸಿದ್ದೆ ಎಂದರು.

ಇದನ್ನೂ ಓದಿ- ಆಟೋ-ಕಂಟೈನರ್‌ ನಡುವೆ ಡಿಕ್ಕಿ: 11 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಸಿಕ್ಕ ಕಡಿಮೆ ಅವಕಾಶದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ, ಜೀವನದಲ್ಲಿ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಬೇಕು, ಕೆರೆಗೆ ನೀರು ತುಂಬುವ ಯೋಜನೆ ಮಾಡುವಾಗ ನನ್ನನ್ನು ಹುಚ್ಚ ಎಂದರು ಆದರೆ ಈಗ ನನ್ನ ಕೆಲಸ ನೆನಪಾಗುತ್ತದೆ ಎಂದು ವಿ. ಸೋಮಣ್ಣ ತಮ್ಮ ಕಾರ್ಯವೈಖರಿಯ ಬಗ್ಗೆ ನುಡಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News