ಈ ಹಣ್ಣನ್ನು ಸಿಪ್ಪೆ ಸಮೇತ ತಿನ್ನಿ !ಬ್ಲಡ್ ಶುಗರ್ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ

Blood sugar control tips :ಮಧುಮೇಹ ರೋಗಿಗಳಿಗೆ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ.ಆದರೆ,ಕೆಲವು ವಿಧದ ಹಣ್ಣುಗಳನ್ನು ಸಿಪ್ಪೆಯೊಂದಿಗೆ ಸೇವಿಸಿದರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತದೆ.   

Written by - Ranjitha R K | Last Updated : May 22, 2024, 03:20 PM IST
  • ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
  • ಇದು ಅನೇಕ ರೋಗಗಳ ಅಪಾಯವನ್ನು ಎದುರಿಸಬೇಕಾಗುತ್ತದೆ.
  • ಈ ಹಣ್ಣುಗಳನ್ನು ಸಿಪ್ಪೆ ಸಮೇತ ತಿಂದರೆ ಸಹಕಾರಿ
ಈ ಹಣ್ಣನ್ನು ಸಿಪ್ಪೆ ಸಮೇತ ತಿನ್ನಿ !ಬ್ಲಡ್ ಶುಗರ್ ತಕ್ಷಣವೇ  ನಿಯಂತ್ರಣಕ್ಕೆ ಬರುತ್ತದೆ  title=

Diabetes control tips :ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಹೊಂದಿರುವ ರೋಗಿಗಳು ಅಂದರೆ ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.ಹಾಗೆ ಮಾಡದೇ ಹೋದರೆ ಅನೇಕ ರೋಗಗಳ ಅಪಾಯವನ್ನು ಎದುರಿಸಬೇಕಾಗುತ್ತದೆ.ಮಧುಮೇಹ ರೋಗಿಗೆ ಔಷಧಿ ಮಾತ್ರವಲ್ಲದೆ ಸರಿಯಾದ ಆಹಾರ ಪದ್ಧತಿಯೂ ಬಹಳ ಮುಖ್ಯ.ಆಹಾರ ಕ್ರಮ ಸರಿಯಿಲ್ಲದಿದ್ದರೆ ಔಷಧಗಳು ಕೂಡಾ ಸರಿಯಾಗಿ ಕೆಲಸ ಮಾಡುವುದಿಲ್ಲ. ಮಧುಮೇಹ ರೋಗಿಗಳಿಗೆ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ.ಆದರೆ,ಕೆಲವು ವಿಧದ ಹಣ್ಣುಗಳನ್ನು ಸಿಪ್ಪೆಯೊಂದಿಗೆ ಸೇವಿಸಿದರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತದೆ. 

ಪೇರಳೆ ಹಣ್ಣು : 
ಪೇರಳೆ ಹಣ್ಣಿನಲ್ಲಿ ಫೈಬರ್ ಸೇರಿದಂತೆ ವಿಶೇಷ ಪೋಷಕಾಂಶಗಳನ್ನು ಹೊಂದಿದೆ.  ಇದು ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.ಪೇರಳೆಯನ್ನು ಅದರ ಸಿಪ್ಪೆಯೊಂದಿಗೆ ತಿಂದರೆ, ಅದರ ಪೌಷ್ಟಿಕಾಂಶದ ಮಟ್ಟವು ಹೆಚ್ಚಾಗುತ್ತದೆ.ಇದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಈ ಹಣ್ಣಷ್ಟೇ ಸಾಕು: ಕೇವಲ 5 ದಿನದಲ್ಲಿ ಜೋತುಬಿದ್ದ ಬೊಜ್ಜು ತುಂಬಿದ ಹೊಟ್ಟೆ ಚಪ್ಪಟೆಯಾಗುತ್ತೆ! ಹೀರೋಯಿನ್ ಲುಕ್ ನಿಮ್ಮದಾಗುತ್ತೆ

ಸೇಬು : 
ಹಲವು ವಿಶೇಷ ಪೋಷಕಾಂಶಗಳು ಸೇಬಿನಲ್ಲಿ ಮಾತ್ರವಲ್ಲದೆ ಅದರ ಸಿಪ್ಪೆಯಲ್ಲೂ ಕಂಡುಬರುತ್ತವೆ. ಅಧಿಕ ರಕ್ತದ ಸಕ್ಕರೆ ರೋಗಿಗಳು ಸಿಪ್ಪೆ ಸಮೇತ ಸೇಬುಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪೀಚ್ : 
ಪೀಚ್ ಬಹಳ ರುಚಿಕರ ಹಣ್ಣು. ಇದರ ಸೇವನೆಯು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹ ರೋಗಿಗಳು ಪೀಚ್ ಅನ್ನು ಸಿಪ್ಪೆಯೊಂದಿಗೆ ಸೇವಿಸಬೇಕು.ಇದು ಹೆಚ್ಚು ಫೈಬರ್ ಮತ್ತು ಇತರ ಪೋಷಕಾಂಶಗಳನ್ನು ಹೊಂದಿದ್ದು,ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಜಾಯಿಕಾಯಿಯನ್ನು ಇದರ ಜೊತೆ ಸೇವಿಸಿದರೆ ಜೋತು ಬಿದ್ದ ಹೊಟ್ಟೆ ಸಣ್ಣಗಾಗುವುದು ಗ್ಯಾರಂಟಿ !

ಪ್ಲಮ್ :
ಪ್ಲಮ್‌ನ ಸಿಹಿ ಮತ್ತು ಹುಳಿ ರುಚಿಯು ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಅಂದರೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.ಪ್ಲಮ್ ಅನ್ನು ಅವುಗಳ ಸಿಪ್ಪೆಯೊಂದಿಗೆ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.

ದ್ರಾಕ್ಷಿ :
ಅಧಿಕ ರಕ್ತದ ಸಕ್ಕರೆ ಅಂದರೆ ಮಧುಮೇಹ ರೋಗಿಗಳಿಗೆ ದ್ರಾಕ್ಷಿ ಸೇವನೆ ಉತ್ತಮ ಆಯ್ಕೆಯಾಗಿದೆ.ದ್ರಾಕ್ಷಿ ಸಿಪ್ಪೆಯಲ್ಲಿ ಅನೇಕ ವಿಶೇಷ ಪೋಷಕಾಂಶಗಳು ಕಂಡುಬರುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.) 

ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News