ಬೆಂಗಳೂರು : ಸೇಫ್ ಸಿಟಿ ಯೋಜನೆಯಡಿ ನಗರದಲ್ಲಿ ತಲೆ ಎತ್ತಿರುವ ಆತ್ಯಾಧುನಿಕ ಕಮಾಂಡ್ ಸೆಂಟರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದಾರೆ. ಕಮಾಂಡ್ ಸೆಂಟರ್ ನಲ್ಲಿ ಅಳವಡಿಸಿರುವ ಕೃತಕ ಬುದ್ದಿಮತ್ತೆ ಕ್ಯಾಮರ ಅಳವಡಿಕೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ನೂತನ ಕಮಾಂಡ್ ಸೆಂಟರ್ ನಲ್ಲಿ ಡಯಲ್ -112 ಕಾಲ್ ಸೆಂಟರ್, ಮಹಿಳಾ ಸೇಫ್ಟಿ ಲ್ಯಾಂಡ್ ಕಮಾಂಡ್ ಸೆಂಟರ್ ನಲ್ಲಿ ಅಳವಡಿಸಲಾಗಿರುವ ವಿವಿಧ ತಂತ್ರಜ್ಞಾನ ಯಾವ ರೀತಿ ಕೆಲಸ ಮಾಡುತ್ತೆ ಅಂತಾ ಸಿಎಂಗೆ ಅಧಿಕಾರಿಳು ಎಕ್ಸ್ಪ್ಲೈನ್ ಮಾಡಿದ್ದಾರೆ. ನಗರದ ವಿವಧೆಡೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಗಳ ನೇರ ಸಂಪರ್ಕ ಕಮಾಂಡ್ ಸೆಂಟರ್ ನಲ್ಲಿ ಇರಲಿದೆ. 24 ಗಂಟೆಗಳ ಕಾಲ ಇಲ್ಲಿನ ಸಿಬ್ಬಂದಿ ಹದ್ದಿನ ಕಣ್ಣಿಡಲಿದ್ದಾರೆ.
ಇದನ್ನೂ ಓದಿ: 150 ರೂ. ಖರ್ಚು ಮಾಡಿ ಮೆಟ್ರೋದಲ್ಲಿ ಭಿಕ್ಷೆ ಬೇಡಿದ ಭಿಕ್ಷುಕನಿಗೆ 500 ರೂ. ದಂಡ..!
ಸಾರ್ವಜನಿಕ ಪ್ರದೇಶಗಳಲ್ಲಿ ನಡೆಯುವ ಮಹಿಳೆಯರಿಗೆ ಮೇಲೆ ಕಿರುಕುಳ, ಅಸಭ್ಯ ವರ್ತನೆ, ಚುಡಾಯಿಸುವುದು ಸೇರಿದಂತೆ ಕಾನೂನು ಸುವ್ಯವಸ್ಥೆ ಧಕ್ಕೆಯಾಗುವ ಘಟನೆಗಳು ನಡೆದರೆ ಕ್ಯಾಮರಗಳು ವಿಡಿಯೊ ಸೆರೆಹಿಡಿದು ಕೂಡಲೇ ಆಯಾ ಪೊಲೀಸ್ ಠಾಣೆಗಳ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನಿಸಿ ಆರೋಪಿತರನ್ನ ತ್ವರಿತಗತಿಯಲ್ಲಿ ಹಿಡಿಯುವ ಕೆಲಸವಾಗಲಿದೆ.
ಪದೇ ಪದೇ ಅಪರಾಧ ಕೃತ್ಯವೆಸಗುವ ಚಾಳಿಯಿರುವ ಸುಮಾರು 30 ಸಾವಿರಕ್ಕೂ ಆರೋಪಿಗಳ ಭಾವಚಿತ್ರಗಳನ್ನ ಸಾಫ್ಟ್ ವೇರ್ ನಲ್ಲಿ ಮಾಹಿತಿ ಸಂಗ್ರಹಿಸಿ ಜೋಡಿಸಲಾಗಿದೆ. ಒಂದು ವೇಳೆ ಅಪರಾಧವೆಸಗುವುದು ಕಂಡುಬಂದರೆ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಆಯಾ ವ್ಯಕ್ತಿಯನ್ನ ಗುರುತುಹಿಡಿಯಬಹುದಾಗಿದೆ. ಕಮಾಂಡ್ ಸೆಂಟರ್ ಮಾತ್ರವಲ್ಲದೆ ಆಯಾ ವಿಭಾಗದ 8 ಡಿಸಿಪಿ ಕಚೇರಿಗಳು, ಕಾನೂನು ಸುವ್ಯವಸ್ಥೆಯ ಪೊಲೀಸ್ ಠಾಣೆಗಳಲ್ಲಿ ಕಮಾಂಡ್ ಸೆಂಟರ್ ಫೀಡ್ ನ ನೇರ ಸಂಪರ್ಕವನ್ನ ವೀಕ್ಷಿಸಬಹುದಾಗಿದೆ. ಮಹಿಳೆಯರ ಸುರಕ್ಷತೆಗೆ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸದ್ಯ 35 ಐಸ್ ಲ್ಯಾಂಡ್ ನಿರ್ಮಿಸಲಾಗಿದ್ದು ಇದರ ಸಂಪರ್ಕವನ್ನ ಕಮಾಂಡ್ ಸೆಂಟರ್ ಗೆ ನೀಡಲಾಗಿದೆ.
ಇದನ್ನೂ ಓದಿ:ಡಿಸಿಎಂ ಡಿಕೆಶಿ ಕೇಸ್ನಲ್ಲಿ ಅನುಮತಿ ವಾಪಸ್ ಪಡೆದ ಪ್ರಕರಣ
ಇನ್ನೂ ಆತ್ಯಾಧುನಿಕ ಡೇಟಾ ಸೆಂಟರ್ ನಲ್ಲಿ 30 ದಿನಗಳ ನಿರಂತರವಾಗಿ ವಿಡಿಯೊ ಸಂಗ್ರಹಣೆ ಅವಕಾಶವಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿ ಸಂಬಂಧಿಸಿದಂತೆ ಸುಮಾರು 60 ದಿನಗಳ ಡೇಟಾ ಸಂಗ್ರಹಿಸಬಹುದಾಗಿದೆ. ಅಸ್ಥಿತ್ವದಲ್ಲಿರುವ ನಮ್ಮ ಡಯಲ್ 112 ಉನ್ನತೀಕರಣ, ಸಂಪರ್ಕ ಕೇಂದ್ರದ ನವೀಕರಣ, ಜಿಐಎಸ್ ಮತ್ತು ಸ್ಥಳ ಆಧಾರಿತ ಪತ್ತೆ ವಿವಿಧ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗೆ ಕಮಾಂಡ್ ಸೆಂಟರ್ ಸಾಕ್ಷಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.