ಬಸವಕಲ್ಯಾಣ : ಬಸವಕಲ್ಯಾಣ ಕ್ಷೇತ್ರದಲ್ಲಿ ಗೆದ್ದ ಬಿಜೆಪಿ ಪಕ್ಷದ ಅಭ್ಯರ್ಥಿ ಶರಣು ಸಲಗರ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಯಡಿಯೂರಪ್ಪ(BS Yediyurappa), ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು. @BJP4Karnataka
— B.S. Yediyurappa (@BSYBJP) May 2, 2021
ಇದನ್ನೂ ಓದಿ : Karnataka By Election Result 2021 : ಮಸ್ಕಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ : ಗೆಲುವಿನತ್ತ ಕಾಂಗ್ರೆಸ್..!
ಬೀದರ್ ಜಿಲ್ಲೆಯ ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ(Sharanu Salagar) 20 ಸಾವಿರದ 904 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ : New Guidelines : ಲಾಕ್ ಡೌನ್ ಮಾರ್ಗಸೂಚಿ ಬದಲಾವಣೆ : ಸಂತೆ, ಮಾರುಕಟ್ಟೆ ಸಂಪೂರ್ಣ ಬಂದ್..!
ಈ ಮೂಲಕ ವಿಧಾನಸಭೆಗೆ ಶರಣು ಸಲಗರ ಮೊದಲ ಬಾರಿಗೆ ಪ್ರವೇಶಿಸುತ್ತಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್(Congress) ನ ಮಾಲಾ ಬಿ ನಾರಾಯಣರಾವ್ ಅವರ ಎದುರು ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ : BS Yediyurappa : 'ರಾಜ್ಯದ ಕೊರೋನಾ ಲಸಿಕೆ ಕೊರತೆಯನ್ನ 2-3 ದಿನಗಳಲ್ಲಿ ಬಗೆಹರಿಸಲಾಗುವುದು'
ತಮ್ಮ ಗೆಲುವನ್ನು ಕ್ಷೇತ್ರದ ಮತದಾರರು ಮತ್ತು ಪಕ್ಷಕ್ಕೆ ಅರ್ಪಿಸಿದ ಶರಣು ಸಲಗರ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : Covid Protocol : ಬೈಎಲೆಕ್ಷನ್ ಮತ ಎಣಿಕೆಗೆ ತೆಗೆದುಕೊಳ್ಳಲಿದೆ ಹೆಚ್ಚು ಸಮಯ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.