ಚಾಮರಾಜಪೇಟೆ ಮೈದಾನ ವಿವಾದ: ಸರ್ಕಾರವೇ ಧ್ವಜಾರೋಹಣ ಮಾಡಲಿದೆ-ಆರ್.ಅಶೋಕ್

ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ನಡೆಸುವ ವಿಚಾರವಾಗಿ ಈಗ ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ ರಾಜ್ಯ ಸರ್ಕಾರವೇ ಮೈದಾನದಲ್ಲಿ ಧ್ವಜಾರೋಹಣವನ್ನು ನಡೆಸಲಿದೆ ಎಂದು ಹೇಳಿದ್ದಾರೆ.

Last Updated : Aug 11, 2022, 07:52 PM IST
  • ಬಿಬಿಎಂಪಿ ಎಲ್ಲಾ ದಾಖಲೆ ಪರಿಶೀಲನೆ ಮಾಡಿ ಕಂದಾಯ ಇಲಾಖೆಗೆ ನೀಡಿದ್ದಾರೆ.
  • ಕಂದಾಯ ಇಲಾಖೆಯ ಜಾಗ ಅಂತ ಅಂತಿಮಗೊಳಿಸಲಾಗಿದೆ.
  • ವಕ್ಫ್ ಬೋರ್ಡ್ ಆಸ್ತಿ‌ ಅಲ್ಲವೇ ಅಲ್ಲ.ಹಿಂದೆ ಕಂದಾಯ ಇಲಾಖೆ ಅಂತ ಇದೆ.
ಚಾಮರಾಜಪೇಟೆ ಮೈದಾನ ವಿವಾದ: ಸರ್ಕಾರವೇ ಧ್ವಜಾರೋಹಣ ಮಾಡಲಿದೆ-ಆರ್.ಅಶೋಕ್ title=
file photo

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ನಡೆಸುವ ವಿಚಾರವಾಗಿ ಈಗ ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ ರಾಜ್ಯ ಸರ್ಕಾರವೇ ಮೈದಾನದಲ್ಲಿ ಧ್ವಜಾರೋಹಣವನ್ನು ನಡೆಸಲಿದೆ ಎಂದು ಹೇಳಿದ್ದಾರೆ.

ಚಾಮರಾಜಪೇಟೆ ಮೈದಾನದ ಕುರಿತು ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಸಚಿವ ಆರ್ ಅಶೋಕ ಇದರ ಕುರಿತು ಬೆಂಗಳೂರು ಹಾಗೂ ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ.ಮೊದಲು 10.5 ಎಕರೆಯ ವಿಶಾಲ ಜಾಗ ಇತ್ತು. ಈಗ ಉಳಿದಿರೋದು 2.5 ಎಕರೆ ಮಾತ್ರ. 1952 ರಲ್ಲಿ ಲೇಔಟ್ ಮಾಡುವಾಗ ಉಳಿದ ಜಮೀನು ಬಳಕೆ ಆಗಿದೆ.ಮೊದಲು 1952ರಲ್ಲಿ ಸರ್ಕಾರಿ ಶಾಲೆ ಕಟ್ಟಲು ಪ್ರಸ್ತಾವನೆ ಮಂಡನೆ ಆಗಿದೆ.ಆಗ ಅಬ್ದುಲ್ ವಾಜಿದ್ ಅನ್ನುವವರು ಮುನ್ಸಿಪಲ್ ಕೋರ್ಟಿಗೆ ಹೋಗ್ತಾರೆ. ನಾವಿಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ, ಶಾಲೆ ಕಟ್ಟಿದ್ರೆ ಪ್ರಾರ್ಥನೆ ಮಾಡಲು ಆಗುವುದಿಲ್ಲ. ಹಾಗಾಗಿ ಶಾಲೆ ಕಟ್ಟಲು ಅವಕಾಶ ನೀಡಬೇಡಿ ಅಂತ ಕೋರ್ಟ್ ಮೊರೆ ಹೋಗ್ತಾರೆ.ಕೋರ್ಟ್ ನಲ್ಲಿ ಕಾರ್ಪೊರೇಷನ್ ಪರ ಆಗುತ್ತೆ. ಕನ್ನಡ ಶಾಲೆ ಕಟ್ಟಲು ಅನುಮತಿ ಕೊಡುತ್ತಾರೆ.ವಾಜಿದ್ ಪುನಃ ಅಪೀಲ್ 1956ರಲ್ಲಿ ವಜಾ ಅಗುತ್ತೆ.ಅದಾದ ಮೇಲೆ ಸಿವಿಲ್ ಕೋರ್ಟ್ ಗೆ ಅವರು ಅಪೀಲ್ ಹೋಗುತ್ತಾರೆ. ಅಲ್ಲಿ ಅವರ ಪರವಾಗಿ ಸ್ಟೇ ಆರ್ಡರ್ ಸಿಗುತ್ತದೆ. ಹಾಗಾಗಿ ಪಾಲಿಕೆ ಅಲ್ಲಿ ಏನನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆದವರು 17% ಮಾತ್ರ : ಸಚಿವ ಸುಧಾಕರ್‌

ಇನ್ನೂ ಮುಂದುವರೆದು ಮಾತನಾಡಿದ ಅವರು 'ಕಂದಾಯ ಇಲಾಖೆಯ ಸಿಟಿ ಸರ್ವೆ 1974ರಲ್ಲಿ ಅಳತೆ ಮಾಡಿ ಈ ಜಾಗಕ್ಕೆ ನಂಬರ್ ಕೊಟ್ಟು, ಆಟದ ಮೈದಾನ ಅಂತ ನಮೂದಿಸಲಾಗಿದೆ. ಅಲ್ಲಿ ಒಂದು ಹಾಲಿನ ಭೂತ್ ಸಹ ಇರುತ್ತದೆ. ಸರ್ವೆ ನಂ 40, ಗುಟ್ಟಳ್ಳಿ ಅಂತ ನಮೂದಿಸಿದ್ದಾರೆ.ಅದಾದ ಬಳಿಕ ಮೈಸೂರು ಸರ್ಕಾರ, ಅನುಭೋಗದ ಹಕ್ಕನ್ನು ಆಟದ ಮೈದಾನಕ್ಕೆ ಕೊಡುತ್ತಾರೆ.ಈ ಹಿಂದೆಯೂ 1898ರ ಬ್ರಿಟೀಷರ ಕಾಲದಲ್ಲೂ ವ್ಯಾಜ್ಯ ಆಗಿದೆ‌. ಸ್ಮಶಾನಕ್ಕೆ ಬಳಕೆ‌ ಮಾಡಲು ಬದಲಿ ಜಾಗ ಕೊಡಲಾಗಿದೆ.ಬಳಿಕ ಕಾರ್ಪೊರೇಷನ್ ವಿರುದ್ಧ 1962 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾರೆ. ಸುಪ್ರೀಂ ಕೋರ್ಟ್ ಕೂಡ ಶಾಲೆ ಕಟ್ಟಬಾರದು, ವರ್ಷದಲ್ಲಿ‌ 2 ಬಾರಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಅಂತ 1964ರಲ್ಲಿ ತೀರ್ಪು ಕೊಡುತ್ತೆ.ಯಾರೂ ಕೂಡ ಜಮೀನಿನ ಹಕ್ಕು ನಮ್ಮದು ಅಂತ ಕೇಳಿಲ್ಲ. ಬದಲಾಗಿ ಕೇವಲ ಪ್ರಾರ್ಥನೆಗೆ ಮಾತ್ರ ಕೋರ್ಟ್ ಮೆಟ್ಟಿಲೇರಿರೋದು" ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ

ಬಿಬಿಎಂಪಿ ಎಲ್ಲಾ ದಾಖಲೆ ಪರಿಶೀಲನೆ ಮಾಡಿ ಕಂದಾಯ ಇಲಾಖೆಗೆ ನೀಡಿದ್ದಾರೆ. ಕಂದಾಯ ಇಲಾಖೆಯ ಜಾಗ ಅಂತ ಅಂತಿಮಗೊಳಿಸಲಾಗಿದೆ. ವಕ್ಫ್ ಬೋರ್ಡ್ ಆಸ್ತಿ‌ ಅಲ್ಲವೇ ಅಲ್ಲ.ಹಿಂದೆ ಕಂದಾಯ ಇಲಾಖೆ ಅಂತ ಇದೆ. ಈಗಲೂ ಕಂದಾಯ ಇಲಾಖೆಗೆ ಉಳಿದಿದೆ‌.ಈ ಸ್ವತ್ತು ಕಂದಾಯ ಇಲಾಖೆಯದ್ದು ಆಗಿದೆ. ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯ ಅಸಿಸ್ಟೆಂಟ್ ಕಮೀಶನರ್ ಧ್ವಜಾರೋಹಣ ಮಾಡಲಿದ್ದಾರೆ. ಪ್ರೊಟೋಕಾಲ್ ಪ್ರಕಾರ ಸ್ಥಳೀಯ ಎಂಎಲ್‌ಎ ಹಾಗೂ ಎಂಪಿ ಬರಬಹುದು.ಚಾಮರಾಜಪೇಟೆ ಜನರು ಕೂಡ ಭಾಗಿಯಾಗಬಹುದು.ಬರುವವರು ಭಾರತ್ ಮಾತಾ ಕೀ ಜೈ, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಸ್ವಾತಂತ್ರ್ಯ ವಿಚಾರದ ಘೋಷಣೆ ಮಾತ್ರ ಕೂಗಬೇಕು.ಈ ಬಗ್ಗೆ ಸ್ಥಳೀಯ ಡಿಸಿಪಿ ಸೂಚನೆ ಕೂಡ ಕೊಡಲಿದ್ದಾರೆ. ಇತರೆ ಯಾವುದೇ ಘೋಷಣೆ ಕೂಗಬಾರದು.75ನೇ ಸ್ವಾತಂತ್ರ್ಯ ದಿನವನ್ನು ಎಲ್ಲರೂ ಸೇರಿ ಆಚರಿಸೋಣ.ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ಕೊಡಬಾರದು ಎನ್ಮುವುದಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಹೇಳಿದರು.

ಇಲ್ಲಿ ಬೇರೆ ವ್ಯಕ್ತಿಗಳಿಗೆ ಧ್ವಜ ಹಾರಿಸಲು ಅನುಮತಿ ಇಲ್ಲ: 

ಇದು ಸರ್ಕಾರಿ ಕಾರ್ಯಕ್ರಮ, ಸರ್ಕಾರದಿಂದ ಆಗಲಿದೆ.ಇಲ್ಲಿಯವರೆಗೂ ಯಾರೂ ಬಂದು ಧ್ವಜ ಹಾರಿಸಲು ಅನುಮತಿ ಕೇಳಿಲ್ಲ.ಕಂದಾಯದ ಜಮೀನು ಆಗಿರೋದ್ರಿಂದ ಏನು ಮಾಡಬಹುದು ಅಂತ ಮುಂದೆ ಸರಿಯಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ.ಯಾರಾದ್ರೂ ನಮ್ಮ‌ ಆಸ್ತಿ ಅಂತ ದಾಖಲೆ ಇದ್ರೆ, ಕಂದಾಯ ಇಲಾಖೆಗೆ ಸಲ್ಲಿಸಬಹುದು. ದಾಖಲೆಗಳನ್ನು ಪರಿಶೀಲಿಸಲಾಗುವುದು.ಮುಖ್ಯಮಂತ್ರಿ ಜೊತೆಯಲ್ಲಿ ಸಹ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳಲಾಗಿದೆ ಎಂದು ಅಶೋಕ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News