'ಏಪ್ರಿಲ್ ಫೂಲ್ ಬಿಡಿ ಏಪ್ರಿಲ್ ಕೂಲ್ ಮಾಡಿ'

 ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವುದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಈಗಿರುವ ಅತಿದೊಡ್ಡ ಸವಾಲು.ಈ ಹಿನ್ನಲೆಯಲ್ಲಿ ಏಪ್ರಿಲ್ ಫೂಲ್ ಬದಲಾಗಿ ಏಪ್ರಿಲ್ ಕೂಲ್ ಮಾಡೋಣ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನದಲ್ಲಿ ಒಂದು ಗಿಡ ನೇಡುವದು ಅದನ್ನು ವರ್ಷಪೂರ್ತಿ ಪೋಷಣೆ ಮಾಡುವದು, ಮನೆಯ ಮೇಲ್ಬಾಗದಲ್ಲಿ ಪಕ್ಷಿಗಳಿಗೆ ನೀರು & ಧಾನ್ಯಗಳನ್ನು ಇಡುವುದು & ಈ ಬಾರಿ ತಪ್ಪದೆ ಮತವನ್ನು ಹಾಕುವುದು ಸೇರಿವೆ.

Last Updated : Mar 31, 2021, 11:59 PM IST
'ಏಪ್ರಿಲ್ ಫೂಲ್ ಬಿಡಿ ಏಪ್ರಿಲ್ ಕೂಲ್ ಮಾಡಿ' title=
Photo Courtesy: Facebook

ಬೆಂಗಳೂರು: ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವುದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಈಗಿರುವ ಅತಿದೊಡ್ಡ ಸವಾಲು.ಈ ಹಿನ್ನಲೆಯಲ್ಲಿ ಏಪ್ರಿಲ್ ಫೂಲ್ ಬದಲಾಗಿ ಏಪ್ರಿಲ್ ಕೂಲ್ ಮಾಡೋಣ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನದಲ್ಲಿ ಒಂದು ಗಿಡ ನೇಡುವದು ಅದನ್ನು ವರ್ಷಪೂರ್ತಿ ಪೋಷಣೆ ಮಾಡುವದು, ಮನೆಯ ಮೇಲ್ಬಾಗದಲ್ಲಿ ಪಕ್ಷಿಗಳಿಗೆ ನೀರು & ಧಾನ್ಯಗಳನ್ನು ಇಡುವುದು & ಈ ಬಾರಿ ತಪ್ಪದೆ ಮತವನ್ನು ಹಾಕುವುದು ಸೇರಿವೆ.

ಅದು ಈಗ ಅನಿವಾರ್ಯವೂ ಹೌದು.ಉಷ್ಣತೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಅದರಿಂದ ಆಗುವ ಅನಾಹುತಗಳು ಅಪಾರ. ಧ್ರುವಗಳಲ್ಲಿ ಹಿಮ, ನೀರ್ಗಲ್ಲು ಕರಗಿ ಸಮುದ್ರದ ಮಟ್ಟ ಏರಬಹುದು, ಕಡಲ ತಡಿಯ ಜನವಸತಿ ಪ್ರದೇಶಗಳು ಮುಳುಗಬಹುದು, ಆಹಾರ ಉತ್ಪಾದನೆ ಕುಸಿಯಬಹುದು, ಮಳೆ ಏರುಪೇರಾಗಬಹುದು, ಜೀವ ಸಂಕುಲ ತೊಂದರೆಗೆ ಒಳಗಾಗಬಹುದು.

ಈ ಎಪ್ರಿಲ್ ಬೇಸಿಗೆಯಲ್ಲಿ 40 - 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ನೀರಿನ ಕೊರತೆಯಿಂದ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತೀವೆ ಅದಕ್ಕಾಗಿ ತಾವು ದಯಮಾಡಿ ಒಂದು ಗಿಡವನ್ನು ನೇಡುವದು ಅದನ್ನು ವರ್ಷಪೂರ್ತಿ ಪೋಷಣೆ ಮಾಡುವದು,ಹಾಗೂ ನಿಮ್ಮ ಮನೆಯ ಮೇಲ್ಬಾಗದಲ್ಲಿ  ಬಟ್ಟಲುಗಳಲ್ಲಿ  ನೀರು & ಧಾನ್ಯಗಳನ್ನು ಶೇಖರಿಸಿ  ಇಡುವುದರ ಮೂಲಕ ತಾಪಮಾನ &  ಜೀವಿಗಳನ್ನು ಕಾಪಾಡಲು ಕೈಜೋಡಿಸಬೇಕಾಗಿ ವಿನಂತಿ.

ಈ ಅಭಿಯಾನದಲ್ಲಿ ಭಾಗಿಯಾದ ಫೋಟೋಗಳನ್ನು 8050501377 ಈ ನಂಬರ್‌ ವ್ಯಾಟ್ಸಾಪ್ ಗೆ ಕಳಿಹಿಸಿ.ಸಾಧ್ಯವಾದರೆ ಈ ಸಂದೇಶವನ್ನು ಕೆಲವು ಜಾಲ ತಾಣಗಳಲ್ಲಿ ಹಂಚಿ. ಪರಿಸರ & ಪಕ್ಷಿಗಳ ಪ್ರಾಣ ಉಳಿಸುವ ಸಣ್ಣ ಅಳಿಲು ಸೇವೆ ಮಾಡಿ ಎಂದು ಕರ್ನಾಟಕ ರಾಜ್ಯ ಪರಿಸರ & ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪುರಸ್ಕೃತರರಾದ ಲಿಂಗರಾಜ ನಿಡುವಣಿ ಈ ಅಭಿಯಾನದ ಮೂಲಕ ವಿನಂತಿಸಿಕೊಂಡಿದ್ದಾರೆ.

        

Trending News