ತಡರಾತ್ರಿ ತನಕ ಬೆಂಗಳೂರಿನ ಈ ಏರಿಯಾಗಳಿಗೆ ಬರಲ್ಲ ಕಾವೇರಿ ನೀರು..! ನಿಮ್ ಏರಿಯಾ ಇದೆಯಾ ಚೆಕ್ ಮಾಡಿ..!

ಇದು ಬೆಂಗಳೂರಿನವರು ಓದಲೇ ಬೇಕಾದ ಸುದ್ದಿ.  ಇವತ್ತು ಯಾವುದೇ ಕಾರಣಕ್ಕೂ ನೀರು ಪೋಲು  ಮಾಡಬೇಡಿ.  ತಡರಾತ್ರಿ ತನಕ ಅರ್ಧ ಬೆಂಗಳೂರಿಗೆ ಶುಕ್ರವಾರ ಕಾವೇರಿ ನೀರು  ಬರಲ್ಲ.    

Written by - Ranjitha R K | Last Updated : Feb 5, 2021, 11:20 AM IST
  • ತಡರಾತ್ರಿ ತನಕ ಅರ್ಧ ಬೆಂಗಳೂರಿಗೆ ಶುಕ್ರವಾರ ಕಾವೇರಿ ನೀರು ಬರಲ್ಲ.
  • ಶುಕ್ರವಾರ ರಾತ್ರಿ 8 ಗಂಟೆಯವರೆಗೂ ತುರ್ತು ಕಾಮಗಾರಿ ನಡೆಯಲಿದೆ.
  • ಹಾಗಾಗಿ, ಈ ಪೈಪ್ ಲೈನ್ ಸಾಗುವ ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.
ತಡರಾತ್ರಿ ತನಕ ಬೆಂಗಳೂರಿನ  ಈ ಏರಿಯಾಗಳಿಗೆ ಬರಲ್ಲ ಕಾವೇರಿ ನೀರು..! ನಿಮ್ ಏರಿಯಾ ಇದೆಯಾ ಚೆಕ್ ಮಾಡಿ..! title=
ತಡರಾತ್ರಿ ತನಕ ಅರ್ಧ ಬೆಂಗಳೂರಿಗೆ ಶುಕ್ರವಾರ ಕಾವೇರಿ ನೀರು ಬರಲ್ಲ (file photo)

ಬೆಂಗಳೂರು : ಇದು ಬೆಂಗಳೂರಿನವರು (Bangaluru) ಓದಲೇ ಬೇಕಾದ ಸುದ್ದಿ.  ಇವತ್ತು ಯಾವುದೇ ಕಾರಣಕ್ಕೂ ನೀರು ಪೋಲು (Water Waste) ಮಾಡಬೇಡಿ.  ತಡರಾತ್ರಿ ತನಕ ಅರ್ಧ ಬೆಂಗಳೂರಿಗೆ ಶುಕ್ರವಾರ ಕಾವೇರಿ ನೀರು (Cauvery Water) ಬರಲ್ಲ.  ಇದಕ್ಕೆ ಕಾರಣ ತೊರೆಕಾಡನಹಳ್ಳಿಯಲ್ಲಿನ (Torekadanahalli) ಪೈಪ್ ಲೈನಿನಲ್ಲಿ ನೀರು ಸೋರಿಕೆ. ತೊರೆಕಾಡನಹಳ್ಳಿಯಲ್ಲಿ 4ನೇಹಂತದ 2 ನೇ ಘಟ್ಟದ 2500 ಮಿಮಿ ವ್ಯಾಸದ ಬಿಎಸ್ ವಾಲ್ವ್ ಸಂಖ್ಯೆ 1ರ 250 ಮಿಮಿ ವ್ಯಾಸದ ಮಾರ್ಗದಲ್ಲಿ ಹೆಚ್ಚಿನ ಪ್ರಮಾಣ ನೀರು ಸೋರಿಕೆಯಾಗುತ್ತಿದೆ. ಹಾಗಾಗಿ ಜಲಮಂಡಳಿ (Water Board) ತುರ್ತು ಕಾಮಗಾರಿಗೆ ಮುಂದಾಗಿದೆ.  ಶುಕ್ರವಾರ ರಾತ್ರಿ 8 ಗಂಟೆಯವರೆಗೂ ತುರ್ತು ಕಾಮಗಾರಿ ನಡೆಯಲಿದೆ. ಹಾಗಾಗಿ, ಈ ಪೈಪ್ ಲೈನ್ ಸಾಗುವ ಪ್ರದೇಶಗಳಲ್ಲಿ ನೀರಿನ ವ್ಯತ್ಯಯ (Water Supply) ಉಂಟಾಗಲಿದೆ.  
 

ಎಲ್ಲೆಲ್ಲಿ ನೀರು ಕಾವೇರಿ ನೀರು ಬರಲ್ಲ, ತಿಳಿದುಕೊಳ್ಳಿ :

ಜಲಮಂಡಳಿ ಹೊರಡಿಸಿರುವ ಪ್ರಕಟಣೆ ಪ್ರಕಾರ ನಂದಿನಿ ಲೆಔಟ್, ಆರ್ ಆರ್ ನಗರ, ರಾಜಾಜಿ ನಗರ, ನಾಗರಭಾವಿ, ಯಲಹಂಕ (Yalahanka), ಬ್ಯಾಟರಾಯನಪುರ, ಹೆಚ್ ಆರ್ ಸಿ ಆರ್, ದಾಸರಹಳ್ಳಿ, ಚಂದ್ರಾ ಲೇಔಟ್, ಕೆಂಗೇರಿ, ಬಾಣಸವಾಡಿ ಹಾಗೂ ಬೆಂಗಳೂರು ಉತ್ತರ ಭಾಗದ ಬಹುತೇಕ ಕಡೆಗಳಲ್ಲಿ ಇಂದು ಕಾವೇರಿ ನೀರು ಬರುವುದಿಲ್ಲ.

ಇದನ್ನೂ ಓದಿ : ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ : ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಇದರ ಜೊತೆ, ಅಂಜನಾಪುರಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಜಂಬೂಸವಾರಿ ದಿಣ್ಣೆ, ಕೊತ್ತನೂರು ದಿಣ್ಣೆ, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಕೂಡ್ಲು, ಹೊಂಗಸಂದ್ರ, ಮಂಗಮ್ಮನ ಪಾಳ್ಯ, ಮಾರತ್ ಹಳ್ಳಿ, ಹೂಡಿ, ಎ.ನಾರಾಯಣಪುರ, ಕೆ. ಆರ್ ಪುರಂ, ರಾಮಮೂರ್ತಿ ನಗರ, ವೈಟ್ ಫೀಲ್ಡ್, ಸಿವಿ ರಾಮನ್ ನಗರ, ಓಲ್ಡ್ ಏರ್ ಪೋರ್ಟ್ ರಸ್ತೆ (Old Airport Road), ಹೆಚ್ ಆರ್ ಬಿಆರ್ ಲೇಔಟ್, ಒಎಂಬಿಆರ್ ಲೆಔಟ್, ರಾಮಯ್ಯ ಲೇಔಟ್ ಸುತ್ತ ಮುತ್ತಲಿನ ಪ್ರದೇಶದ ಜನರಿಗೆ ಇವತ್ತು ಕಾವೇರಿ (Cauvery) ಸಪ್ಲೈ ಆಗೋದಿಲ್ಲ. 

ರಾತ್ರಿ 8ಗಂಟೆಯ ಹೊತ್ತಿಗೆ ಕಾಮಗಾರಿ ಮುಗಿಯುವ ಸಾಧ್ಯತೆ :
ಜಲಮಂಡಳಿಯ ಪ್ರಕಟಣೆ ಪ್ರಕಾರ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ.  ಆದರೆ ಈ ಬಗ್ಗೆ ಯಾವುದೇ ಖಚಿತ ತೀರ್ಮಾನವನ್ನು ಅದು ಪ್ರಕಟಿಸಿಲ್ಲ. ಹಾಗಾಗಿ, ಬೆಂಗಳೂರು (Bengaluru)ಜನತೆ ಇವತ್ತಿನ ಮಟ್ಟಿಗೆ ನೀರು ಪೋಲು ಮಾಡಬೇಡಿ. ಸಾಧ್ಯವಾದಷ್ಟು ನೀರು ಉಳಿಸಿ. ಬೋರ್ ನೀರು ಇದ್ದರೆ ನಿಶ್ಚಿಂತೆಯಾಗಿರಿ.

ಇದನ್ನೂ ಓದಿ : Cinema Theater: ಸಿನಿಮಾ ಥಿಯೇಟರ್ ಗೆ ಸರ್ಕಾರದಿಂದ ಹೊಸ ಗೈಡ್ ಲೈನ್ಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News