ಬೆಂಗಳೂರಿನಲ್ಲಿ TVS ಗಾಡಿಗೆ ಕ್ಯಾಂಟರ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

TVS ಬೈಕ್ ಗೆ ಡಿಕ್ಕಿ, ಸ್ಥಳದಲ್ಲೇ ಚಿದ್ರವಾದ ಟಿವಿಎಸ್ ಸವಾರನ ದೇಹ.

Last Updated : Oct 25, 2017, 10:39 AM IST
ಬೆಂಗಳೂರಿನಲ್ಲಿ TVS ಗಾಡಿಗೆ ಕ್ಯಾಂಟರ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು title=

ಬೆಂಗಳೂರು: ಅತಿವೇಗವಾಗಿ ಬಂದ ಕ್ಯಾಂಟರ್ ಟಿವಿಎಸ್ ಸವಾರನಿಗೆ ಡಿಕ್ಕಿ ಹೊಡೆದು, ಟಿವಿಎಸ್ ಸವಾರನ ದೇಹ ಸ್ಥಳದಲ್ಲೇ ಚಿದ್ರವಾದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರ ರೇಸ್ ಕೋರ್ಸ್ ರಸ್ತೆಯ ಹೋಟೆಲ್ ರೇಸ್ ವ್ಯೂ ಮುಂಭಾಗ ಘಟನೆ ನಡೆದಿದೆ. ಅಪಘಾತದ ಬಳಿಕ ಪರಾರಿಯಾಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಹೈಗೌಡ್ರ್  ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಮೆಜೆಸ್ಟಿಕ್ ಮೂಲಕ ಶಿವಾನಂದ ಸರ್ಕಲ್ ಗೆ ನ್ಯೂಸ್ ಪೇಪರ್ ಹಾಕಲು ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೋಡೆದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಹೈಗ್ರೌಂಡ್ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Trending News